ಪ್ರಕೃತಿ ನಿಯಮದಂತೆ ನಡೆಯಬೇಕು : ಸಂಗಮೇಶ ಎನ್ ಜವಾದಿ.

ಪ್ರಕೃತಿ ನಿಯಮದಂತೆ ನಡೆಯಬೇಕು : ಸಂಗಮೇಶ ಎನ್ ಜವಾದಿ.

ಪ್ರಕೃತಿ ನಿಯಮದಂತೆ ನಡೆಯಬೇಕು : ಸಂಗಮೇಶ ಎನ್ ಜವಾದಿ.

ಹುಮನಾಬಾದ್: ಎಂತದೇ ಸಂದರ್ಭ ಬಂದರೂ ಪ್ರಕೃತಿಗೆ ವಿರುದ್ಧವಾಗಿ ಎಂದೆಂದಿಗೂ ನಡೆದುಕೊಳ್ಳಬಾರದು. ಪ್ರಕೃತಿ ನಿಯಮದಂತೆ ನಾವೆಲ್ಲರೂ ನಡೆದುಕೊಳ್ಳಬೇಕು. ಅಂದಾಗಲೇ ನಾವೆಲ್ಲರೂ ಈ ಭೂಮಿ ಮೇಲೆ ಸ್ವಚ್ಛಂದವಾಗಿ ಬದುಕಲು ಸಾಧ್ಯ ಎಂದು ಸಾಹಿತಿ, ಪರಿಸರ ಸಂರಕ್ಷಕ ಸಂಗಮೇಶ ಎನ್ ಜವಾದಿ ನುಡಿದರು.

ತಾಲೂಕಿನ ನಿಂಬೂರ್ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪರಿಸರ ಸಂಗಮ ವೇದಿಕೆ ವತಿಯಿಂದ ಹಮ್ಮಿಕೊಂಡ ಎಸ್ ಎಸ್ ಎಲ್ ಸಿ ಮಕ್ಕಳ ಶೈಕ್ಷಣಿಕ ಕಾರ್ಯಾಗಾರ ಹಾಗೂ ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಸಂಗಮೇಶ ಎನ್ ಜವಾದಿ ರವರು 

ಮಕ್ಕಳು ಕೇವಲ ಅಂಕಗಳಿಗೋಸ್ಕರ ಓದಬಾರದು. ಮಕ್ಕಳು ಅವರ ಭವಿಷ್ಯದ ಸಮಗ್ರ ವಿಕಾಸಕ್ಕಾಗಿ ಓದಬೇಕು. ಪಾಲಕರ, ಶಿಕ್ಷಕರ ಋಣ ತೀರಿಸಲು ಕಷ್ಟಪಟ್ಟು ಓದಬೇಕು. ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿಯುವಂತ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದರು.

ಹವಾಮಾನ ಬದಲಾವಣೆಯು ಭೂಮಿಯ ಮೇಲಿನ ಸಂಪನ್ಮೂಲಗಳನ್ನು ತೀವ್ರವಾಗಿ ಕ್ಷೀಣಿಸಿರುವುದರಿಂದ ನಮಗೆ ಪರಿಸರ ಸಂರಕ್ಷಣೆಯ ಅವಶ್ಯಕತೆ ಇದೆ. ವಿಶೇಷವಾಗಿ ಪ್ಲಾಸ್ಟಿಕ್ ಮುಕ್ತ ಆಗಬೇಕು. ಪಟಾಕಿಗಳು ನಿಷೇಧಿಸಬೇಕು.

ಸಾವಯವ ವಸ್ತುಗಳನ್ನು ಖರೀದಿಸಬೇಕು. ಸೌಂಡ್ ಮಾಲಿನ್ಯ ತಡೆಯಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಶಾಲಾ - ಕಾಲೇಜು - ಮನೆ - ಸಾರ್ವಜನಿಕ ಪ್ರದೇಶದ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವಂಥ ಕಾರ್ಯ ಸರ್ವರೂ ಮಾಡಬೇಕೆಂದರು.

ಪರಿಸರ ಸಂಗಮ ವೇದಿಕೆ ಜಿಲ್ಲಾಧ್ಯಕ್ಷ ಕಾಶಿನಾಥ್ ಪಾಟೀಲ ಅವರು ಮಾತನಾಡಿ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಮತ್ತು ರಕ್ಷಿಸಲು ನಾವು ತ್ವರಿತಗತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಪರಿಸರ ಸಂಗಮ ವೇದಿಕೆ ಬೀದರ ಜಿಲ್ಲಾದ್ಯಂತ ಪರಿಸರ ಸಂರಕ್ಷಣೆಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ.ಮಕ್ಕಳು , ಶಿಕ್ಷಕರು, ಪಾಲಕರು ನಮ್ಮ ಜೊತೆ ಕೈ ಜೋಡಿಸುವ ಕೆಲಸ ಮಾಡಬೇಕು. ಹುಟ್ಟು ಹಬ್ಬ ಸೇರಿದಂತೆ ಇನ್ನಿತರ ಸಮಾರಂಭಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಬೇಕು. ಹೆಚ್ಚು ಹೆಚ್ಚು ಸಸಿಗಳನ್ನು ನೆಟ್ಟು ಅರಣ್ಯ ಸಂಪತ್ತು ಬೆಳೆಸಬೇಕು. ಮರಗಳನ್ನು ಕಡಿಯದಂತೆ ಸರ್ವರು ಮುಂದಾಗಬೇಕು ಎಂದರು. 

ಕಾರ್ಯಕ್ರಮದಲ್ಲಿ ಚಂದ್ರಶೇಖರ ತಂಗಾ, ಸುನೀತಾ ಪಾಟೀಲ, ರೇಣುಕಾ ಎನ್ ವಿ ರವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಕವಿತಾ ಮಂಜುನಾಥ ರವರು ವಹಿಸಿ, ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಮೃತಾಂಜಲಿ, ಭಾಗ್ಯಶ್ರೀ ,ಶಾಂತವೀರ್ ,ಪೂರ್ಣಿಮಾ ರವರು ಉಪಸ್ಥಿತರಿದ್ದರು ಚಾಮರಾಜ ಶಿರಮುಂಡಿ ನಿರೂಪಿಸಿ, ವಂದಿಸಿದರು.

ಈ ಸಂದರ್ಭದಲ್ಲಿ ಗಣ್ಯರು, ಮಾತೆಯರು, ಶಿಕ್ಷಕರು,ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.