ಯತ್ನಾಳ ಹೇಳಿಕೆ ಸರಿಯಲ್ಲ -ಲಿಂಗಣ್ಣ ಪಡಶೆಟ್ಟಿ

ಯತ್ನಾಳ ಹೇಳಿಕೆ ಸರಿಯಲ್ಲ -ಲಿಂಗಣ್ಣ ಪಡಶೆಟ್ಟಿ

 ಯತ್ನಾಳ ಹೇಳಿಕೆ ಸರಿಯಲ್ಲ -ಲಿಂಗಣ್ಣ ಪಡಶೆಟ್ಟಿ 

ಶಹಾಪುರ : ಇಡೀ ವಿಶ್ವವೇ ಒಪ್ಪಿಕೊಂಡು,ಅಪ್ಪಿಕೊಂಡಿರುವ ಮಹಾತ್ಮ ಬಸವಣ್ಣನವರಿಗೆ ಅವಹೇಳನ ಮಾಡಿದ್ದಲ್ಲದೆ, ವಿವಾದಾತ್ಮಕ ಹೇಳಿಕೆ ನೀಡಿರುವ ಬಸನಗೌಡ ಪಾಟೀಲ್ ಯತ್ನಾಳರ ವಿರುದ್ಧ ಬಸವ ಅಭಿಮಾನಿಗಳು, ನಾಡಿನ ಶರಣ ಸಾಹಿತಿಗಳು, ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಶಹಾಪೂರ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಲಿಂಗಣ್ಣ ಪಡಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ಬಸವಣ್ಣನವರು ಹೊಳೆ ಹಾರಿದರು, ಅಲ್ಲದೆ ಅವರು ಹೇಡಿ ಎಂದು ಶಬ್ದವನ್ನು ಬಳಕೆ ಮಾಡಿದ ಬಸನಗೌಡ ಪಾಟೀಲರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ನುಡಿದರು. ಈ ಮಾತಿನಿಂದ ಬಸವ ಅಭಿಮಾನಿಗಳಿಗೆ,ಪ್ರಗತಿಪರ ಚಿಂತಕರಿಗೆ,ಒಟ್ಟಾರೆ ಲಿಂಗಾಯತ ಸಮಾಜಕ್ಕೆ ನೋವನ್ನುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ಬಸನಗೌಡ ಪಾಟೀಲ್ ಯತ್ನಾಳರು ಲಿಂಗಾಯತ ಧರ್ಮದಲ್ಲಿ ಹುಟ್ಟಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಇದು ಅಕ್ಷಮ್ಯ ಅಪರಾಧ ಯಾವತ್ತೂ ನಮ್ಮ ಲಿಂಗಾಯತ ಸಮಾಜ ಅವರ ಈ ಹೇಳಿಕೆಯನ್ನು ಸಹಿಸುವುದಿಲ್ಲ ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿ.ಕೂಡಲೇ ಕ್ಷಮೆಯಾಚಿಸಬೇಕು ಎಂದರು.