ಡಾ ಶರಣಬಸಪ್ಪ ವಡ್ಡನಕೇರಿ ಸೇರಿ ಎಂಟು ಸಾಧಕರಿಗೆ ‘ಬಸವ ಪುರಸ್ಕಾರ
ರಾಜನಾಳ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ಹಬ್ಬ
ಡಾ ಶರಣಬಸಪ್ಪ ವಡ್ಡನಕೇರಿ ಸೇರಿ ಎಂಟು ಸಾಧಕರಿಗೆ ‘ಬಸವ ಪುರಸ್ಕಾರ’
ಕಮಲಾಪುರ: ತಾಲ್ಲೂಕಿನ ರಾಜನಾಳ ಗ್ರಾಮದ ಬಸವೇಶ್ವರ ಶಿಕ್ಷಣ ಸಂಸ್ಥೆ ವತಿಯಿಂದ 8 ಜನ ಸಾಧಕರಿಗೆ ಬಸವ ಪುರಸ್ಕಾರ ಪ್ರದಾನ ಮಾಡಲಾಯಿತು.
ಮುತ್ಯಾನ ಬಬಲಾದ ಡಾ.ಗುರುಪಾದಲಿಂಗ ಶೀವಯೋಗಿ, ಹಿರಿಯ ಮುಖಂಡ ಸಹಾಕಾರಿ ಧುರಿಣ ಅಪ್ಪಾರಾವ ಅಕ್ಕೂಣಿ, ಪ್ರಕಾಶಕ ಬಸವರಾಜ ಕೊನೇಕ್, ಸಮಾಜ ಸೇವಕಿ ಜಯಶ್ರೀ ಮತ್ತಿಮಡು, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಪಸಾರ, ಉದ್ಯಮಿ ಶರಣಬಸಪ್ಪ ಪಪ್ಪಾ, ಸಾಹಿತಿ ಡಾ.ಶರಣಬಸಪ್ಪ ವಡ್ಡನಕೇರಿ ಹಾಗೂ ಪತ್ರಕರ್ತ ತೀರ್ಥಕುಮಾರ ಬೆಳಕೋಟಾ ಅವರಿಗೆ ಬಸವ ಪುರಸ್ಕಾರ ನೀಡಿ ಗೌರವಿಸಲಾಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಪ್ರಭು ಪಾಟೀಲ ಮಾತನಾಡಿ ಗ್ರಾಮೀಣ ಭಾಗದಲ್ಲಿ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ತಮ್ಮದೇಯಾದ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆಗೈದಯ ಸಮಾಜದ ಒಳಿತಿಗೆ ಶ್ರಮಿಸಿದ ಈ ಎಂಟು ಜನರನ್ನು ಗುರುತಿಸಿ ಬಸವ ಪುರಸ್ಕಾರ ನೀಡಿದ್ದು ಪ್ರಶಂಸನಾರ್ಯಹವಾಗಿದೆ. ರಾಜ್ಯಮಟ್ಟದ ಅನೇಕ ಪುರಸ್ಕಾರಗಳು ಅರ್ಹರಿಗೆ ಸಿಗುವುದಿಲ್ಲ. ಅರ್ಹರನ್ನು ಗುರುತಿಸುವಲ್ಲಿ ಅವರು ಕೆಲವೊಂದು ಬಾರಿ ವಿಫಲರಾಗಿರುತ್ತಾರೆ. ಸ್ಥಳೀಯವಾಗಿ ಹುಟ್ಟಿಕೊಂಡ ಸಂಸ್ಥೆಗಳು ಈ ಕಾರ್ಯ ಮಾಡಿದ್ದು ಒಳ್ಳೆಯ ನಡೆ ಎಂದರು. ಕಮಲಾಪುರ ತಾಲ್ಲೂಕಿನ ಅನೇಕ ಬಡ ಮಕ್ಕಳಿಗೆ ವಿಶೇಷವಾಗಿ ತಾಂಡಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುತ್ತಿರುವ ಈ ಬಸವೇಶ್ವರ ಶಿಕ್ಷಣ ಸಂಸ್ಥೆ ದೊಡ್ಡದಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಪ್ರಶಸ್ತಿ ಪುರಸ್ಕೃತ ಅಪ್ಪಾರಾವ ಅಕ್ಕೋಣಿ ಮಾತನಾಡಿ ಶಿಕ್ಷಣ ಸಂಸ್ಥೆಗಳು ಏಕ ಮುಖವಾಗಿ ಚಲಿಸಿದರೆ ಸಾಲದು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಬೇಕ ಬೇಡಗಳ ಬಗ್ಗೆ ಅರಿವಿರಬೇಕು. ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸಲು ತಳಮಟ್ಟದ ಜ್ಞಾನ ಒದಗಿಸಬೇಕು. ಇದಕ್ಕೆ ಪಾಲಕರು ಸಹ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ನಿರಂತರ ನಿಗಾವಹಿಸಬೇಕು ಎಂದರು.
ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ಜರುಗಿದವು.
ಸಂಸ್ಥೆ ಅಧ್ಯಕ್ಷ ಬಿ.ಎಸ್.ಪಾಟೀಲ,ಕಾರ್ಯದರ್ಶಿ ಜಗದೀಶ ಪಾಟೀಲ ಶಿವಾನಂದ ಕಶೆಟ್ಟಿ, ಶೃತಿ ಬಿರಾದಾರ, ಪಾರ್ವತಿ ಬಿ. ಪಾಟೀಲ, ಶರಣಬಸಪ್ಪ ಪಾಟೀಲ, ಜಗದೀಶ ಪಾಟೀಲ, ಚಂದ್ರಕಾಂತ ಶೇರಿ ಮತ್ತಿತರರು ಹಾಜರಿದ್ದರು.
