ಪತ್ರಕರ್ತರಾದ ಬಾಬುರಾವ್ ಕೋಬಾಳ, ಭೀಮಾಶಂಕರ ಎಂ. ಫಿರೋಜಾಬಾದಗೆ ಪುನೀತ ರತ್ನ ಪ್ರಶಸ್ತಿ ಗರಿ
ಪತ್ರಕರ್ತರಾದ ಬಾಬುರಾವ್ ಕೋಬಾಳ, ಭೀಮಾಶಂಕರ ಎಂ. ಫಿರೋಜಾಬಾದಗೆ ಪುನೀತ ರತ್ನ ಪ್ರಶಸ್ತಿ ಗರಿ
ಶ್ರೀನಿವಾಸ ಸರಡಗಿಯಲ್ಲಿ ೫೦೦ ಅಡಿ ಉದ್ದದ ಕನ್ನಡದ ಧ್ವಜ ಮೆರವಣಿಗೆ
`ಕನ್ನಡ ಭಾಷೆ ಉಳಿವಿಗೆ ಕೈಜೋಡಿಸಿ’
ಕಲಬುರಗಿ: ಪ್ರತಿಯೊಬ್ಬ ಕನ್ನಡಿಗರು ಒಗ್ಗಟ್ಟಿನಿಂದ ಹೋರಾಡಿದಾಗ ಮಾತ್ರ ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಉಳಿಸಿ ಬೆಳೆಸಲು ಸಾಧ್ಯವಿದೆ ಎಂದು ಸಮಾಜ ಸೇವಕಿ ಜಯಶ್ರೀ ಮತ್ತಿಮಡು ಹೇಳಿದರು.
ನಗರ ಹೊರವಲಯದ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ ರತ್ನ ಪ್ರಶಸ್ತಿ ಪ್ರದಾನ ಹಾಗೂ ೫೦೦ ಅಡಿ ಉದ್ದದ ಕನ್ನಡದ ಧ್ವಜ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಅನ್ಯಾಯ, ಅಕ್ರಮಗಳ ವಿರುದ್ಧ ಧ್ವನಿ ಎತ್ತಿ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಕೆಲಸ ಕನ್ನಡ ಸಂಘಟನೆಗಳು ಮುಂದಾಗಬೇಕು. ಈ ನಿಟ್ಟಿನಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆ ಕಾರ್ಯವನ್ನು ಶ್ಲಾಘಿಸಿದರು.
ಸ್ಥಳೀಯ ಕೊಲ್ಹಾಪುರ ಮಹಾಲಕ್ಷ್ಮೀ ಶಕ್ತಿಪೀಠದ ಪೀಠಾಧಿಪತಿ ಡಾ. ಅಪ್ಪಾರಾವ ದೇವಿಮುತ್ಯಾ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕಿಳ್ಳಿ ಕಾರ್ಯಕ್ರಮದ ನೇತೃತ್ವವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಅನುಸೂಯಾ, ಯಾದಗಿರಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಜಲ್ಲಪನೋರ, ಬಿಜಾಪುರ ಜಿಲ್ಲಾಧ್ಯಕ್ಷ ರಾಜು ಕೋಟ್ಯಾಳ, ಉಪಾಧ್ಯಕ್ಷೆ ಚಂದ್ರಕಲಾ ವಾಡಿ, ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಈರಣ್ಣ ಹಡಪಾದ, ಹರಳಯ್ಯ ಸಮಾಜ ಮುಖಂಡರಾದ ಕಾಶಿನಾಥ್ ದಿವಂಟಗಿ, ಕಾರ್ಯಕರ್ತರರಾದ ಅಶ್ಫಾಕ್ ಮುಲ್ಲಾ, ನಾಗರಾಜ್ ಪೂಜಾರಿ, ಅನಿಲ್ ಪೂಜಾರಿ, ಶರಣಪ್ಪ ಪೂಜಾರಿ, ಸುನೀಲ್ ರಾಠೋಡ, ಅಂಬರೀಷ್ ನುಲಕರ, ಶಿವಾನಂದ ಮತ್ತಿಮೂಡ್ ಅಜರ್ ಪಟೇಲ್, ಪೀರಪ್ಪ ಕಟ್ಟಿಮನಿ, ಜಯಲಕ್ಷ್ಮೀ ಪಾಟೀಲ್ ಅನೇಕರಿದ್ದರು. ಇದೇ ವೇಳೆಗೆ ಸ್ಟಾರ್ ಕೇರ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಭೀಮಾಶಂಕರ ಚಿಂಚೋಳಿ ನಿರೂಪಣೆ ಮಾಡಿದರು.
ಸಾಧಕರಿಗೆ ಪುನಿತ ರತ್ನ ಪ್ರಶಸ್ತಿ ಪ್ರದಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಿಕ್ಷಕಿಯರಾದ ಸುರೇಖಾ ಪಿ ಕಟ್ಟಿಮನಿ, ಕು. ಶರಣೇಶ್ವರಿ ಮಹಿಳಾ ಬಿ.ಇಡಿ ಕಾಲೇಜಿನ ಪ್ರಿನ್ಸಿಪಾಲ, ವಿಜಯಪುರ ರಾಜ್ಯ ಮಹಿಳಾ ವಿವಿ ಸಿಂಡಿಕೇಟ್ ಸದಸ್ಯೆ ಡಾ. ಗೀತಾ ಡಿ ಮಗಿ, ಪತ್ರಕರ್ತರಾದ ಬಾಬುರಾವ್ ಕೋಬಾಳ, ಭೀಮಾಶಂಕರ ಎಂ. ಫಿರೋಜಾಬಾದ, ಶಂಕರಲಿಂಗಮ್ಮ ಮತ್ತಿತರರಿಗೆ ಪುನಿತರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.