ಡಾ. ಚಿ.ಸಿ. ನಿಂಗಣ್ಣನವರಿಗೆ ಹಾರಕೂಡಮಠದ ಚನ್ನಶ್ರೀ ಪ್ರಶಸ್ತಿಖ

ಡಾ. ಚಿ.ಸಿ. ನಿಂಗಣ್ಣನವರಿಗೆ ಹಾರಕೂಡಮಠದ ಚನ್ನಶ್ರೀ ಪ್ರಶಸ್ತಿಖ

ಡಾ. ಚಿ.ಸಿ. ನಿಂಗಣ್ಣನವರಿಗೆ ಹಾರಕೂಡಮಠದ ಚನ್ನಶ್ರೀ ಪ್ರಶಸ್ತಿ 

ಸೂಕ್ಷೇತ್ರ ಹಾರಕೂಡದ ಲಿಂಗೈಕ್ಯ ಶ್ರೀ ಚನ್ನಬಸವ ಶಿವಯೋಗಿಗಳ 75ನೇ ಜಾತ್ರಾ ಅಮೃತಮಹೋತ್ಸವು ಚಿಂಚೋಳಿಯಲ್ಲಿ ಜರುಗಲಿದೆ. ಪೂಜ್ಯ ಶ್ರೀ ಷ.ಬ್ರ.ಡಾ. ಚನ್ನವೀರ ಶಿವಾಚಾರ್ಯರು ಪೀಠಾಧಿಪತಿಗಳು ಹಾರಕೂಡ ಹಾಗೂ ಪಾವನ ಸನ್ನಿದಾನದಲ್ಲಿ ಶ್ರೀಮಠವು ನೀಡುವ ಚನ್ನಶ್ರೀ ಪ್ರಶಸ್ತಿ ಪುರಸ್ಕಾರಕ್ಕೆ ಸಾಹಿತ್ಯಕ್ಷೇತ್ರದಿಂದ ಕಲಬುರಗಿಯ ಸಾಹಿತಿಗಳಾದ ಡಾ.ಚಿ.ಸಿ. ನಿಂಗಣ್ಣನವರು ಆಯ್ಕೆಯಾಗಿದ್ದು, ದಿನಾಂಕ 26-2-2026 ರಂದು ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ಶಿವಾನುಭವ ಚಿಂತನ ಕಾರ್ಯಕ್ರಮದಲ್ಲಿ ಗಣ್ಯಮಾನ್ಯರ ಸಮ್ಮುಖದಲ್ಲಿ ಚನ್ನಶ್ರೀ ಪ್ರಶಸ್ತಿ ಪ್ರದಾನ ಮಾಡುವರು, ಪ್ರಶಸ್ತಿಯೂ 5 ಗ್ರಾಂ. ಬಂಗಾರ, ಪ್ರಶಸ್ತಿ ಫಲಕಹೊಂದಿರುತ್ತದೆ.

ಡಾ.ಚಿ.ಸಿ. ನಿಂಗಣ್ಣನವರು ಕಲ್ಯಾಣ ಕರ್ನಾಟಕದ ಶೋಧನಾತ್ಮಕ ಬರಹಗಾರರು. ಸಾಹಿತಿ, ಸಂಶೋಧಕ, ಜಾನಪದ ವಿದ್ವಾಂಸರಾದ ಇವರು ವೈಚಾರಿಕ ನೆಲೆಯ ಸಾಂಸ್ಕೃತಿಕ ಚಿಂತಕರೆಂದು ಹೆರಸರಾಗಿದ್ದಾರೆ. ಇವರು "ಕಲಬುರಗಿ ಜಿಲ್ಲೆಯ ಜಾತ್ರೆಗಳು ಒಂದು ಜಾನಪದೀಯ ಅಧ್ಯಯನ" ಎಂಬ ಸಂಶೋಧನಾ ಮಹಾಪ್ರಬಂಧವನ್ನು ಗು.ವಿ.ವಿ.ಗೆ ಮಂಡಿಸಿ ಪಿಹೆಚ್.ಡಿ ಡಾಕ್ಟರೇಟ ಪದವಿ ಪಡೆದಿದ್ದಾರೆ. ಶಿಕ್ಷಣ-ಸಂಘಟನೆ-ಹೋರಾಟದಲ್ಲಿ ಭಾಗಿಯಾಗುತ್ತ ಬಂದ ಇವರು ಗು.ವಿ.ವಿ. ಪದವೀಧರರ ಸಂಘಟನೆಯ ಅಧ್ಯಕ್ಷರಾಗಿ ಕಲಂ-371 (ಎ) ಜಾರಿ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ವೃತ್ತಿಯಿಂದ ಕನ್ನಡ ಉಪನ್ಯಾಸಕರಾದ ಇವರು ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ತುಂಬಾ ಆಸಕ್ತಿ ಹೊಂದಿರುವರು, ಕನ್ನಡ ಸಾಹಿತ್ಯದ: ವಚನ, ಜಾನಪದ, ಸಂಶೋಧನೆ, ವಿಚಾರ ಸಾಹಿತ್ಯ, ಕಾವ್ಯ, ಕಥೆ, ಚರಿತ್ರೆ, ಸಂಪಾದನೆ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಒಟ್ಟು 45ಕ್ಕೂ ಹೆಚ್ಚು ಮೌಲಿಕವಾದ ಕೃತಿಗಳನ್ನು ರಚಿಸಿದ್ದಾರೆ. ಇವರ ಪ್ರಮುಖ ಕೃತಿಗಳು : ಕಲಬುರಗಿ ಜಿಲ್ಲೆಯ ಜಾತ್ರೆಗಳು, ಬಸವಣ್ಣನವರ ವಚನಗಳಲ್ಲಿ ಸಮಾಜೋಧಾರ್ಮಿಕ ಪ್ರಜ್ಞೆ, ವೈಚಾರಿಕತೆ ಮತ್ತು ಸಾಹಿತ್ಯ, ಕಡೆಗೀಲು ಬಂಡಿಗಾದಾರ, ಜಾಗತೀಕರಣ ಮತ್ತು ಜಾನಪದ, ಕನ್ನಡ ಸಾಹಿತ್ಯ ಸಂಸ್ಕೃತಿಕೋಶ, ಜಾಗತೀಕರಣದಲ್ಲಿ ಜಾತ್ರೆಗಳು, ನಮ್ಮೂರು ಜಾನಪದ, ಜಾನಪದ ದರ್ಪಣ, ಸಂಸ್ಕೃತಿ ಮತ್ತು ಜಾನಪದ, ಕುರುಬರ ಆಚರೆಣೆಗಳು, ಬಾಡದ ಮನಸು, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ, ಕುವೆಂಪು, ಅಕ್ಷರದ ಅವ್ವ ಸಾವಿತ್ರಿಬಾಯಿ ಪುಲೆ, ಸಾಮಾಜಿಕ ಪರಿವರ್ತನೆಯ ಹರಿಕಾರ ದೇವರಾಜ ಅರಸು ಇತ್ಯಾದಿಗಳು. ಆಕಾಶವಾಣಿ, ದೂರದರ್ಶನದಲ್ಲಿ ಅನೇಕಾಬಾರಿ ಕಾರ್ಯಕ್ರಮ ನೀಡಿದ್ದಾರೆ. ನೂರಾರು ಕಡೆ ವಿಶೇಷ ಉಪನ್ಯಾಸ ನೀಡಿದ ಇವರು ಉತ್ತಮ ಭಾಷಣಕಾರರು ಹೌದು. ಇವರು ಹತ್ತಾರು ಕಡೆ ರಾಜ್ಯ-ರಾಷ್ಟçಮಟ್ಟದ ವಿಚಾರ ಸಂಕಿರಣಗಳಲ್ಲಿ, ತಾಲೂಕು, ಜಿಲ್ಲಾ, ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗಿಯಾಗಿ ವಿಷಯ ಮಂಡಿಸಿದ್ದಾರೆ. ಹಲವು ಸಂಘ-ಸಂಸ್ಥೆಗಳ ಅಧ್ಯಕ್ಷರಾದ ಇವರು ಸಾಹಿತ್ಯ-ಸಾಂಸ್ಕೃತಿಕ-ಸಾಮಾಜಿಕವಾಗಿ ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದಾರೆ. ಇವರ ಅಮೂಲ್ಯವಾದ ಸಾಧನೆಯನ್ನು ಪರಿಗಣಿಸಿದ ಪರಮಪೂಜ್ಯ ಶ್ರೀ ಚನ್ನವೀರ ಶಿವಾಚಾರ್ಯರು ಚನ್ನಶ್ರೀ ಪ್ರಶಸ್ತಿ ಪ್ರದಾನಮಾಡಿ ಆಶಿರ್ವಾದ ಮಾಡಲಿದ್ದಾರೆಂದು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.