ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತದಿಂದ ಪ್ರಶಸ್ತಿಗಾಗಿ ಪುಸ್ತಕಗಳ ಆಹ್ವಾನ

ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತದಿಂದ ಪ್ರಶಸ್ತಿಗಾಗಿ ಪುಸ್ತಕಗಳ ಆಹ್ವಾನ

ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತದಿಂದ ಪ್ರಶಸ್ತಿಗಾಗಿ ಪುಸ್ತಕಗಳ ಆಹ್ವಾನ

ಕಲಬುರಗಿ : ಕನ್ನಡನಾಡು ಲೇಖಕರ ಮತ್ತುಓದುಗರ ಸಹಕಾರ ಸಂಘ ನಿಯಮಿತ,ಕಲಬುರಗಿ ವತಿಯಿಂದ ಕಲ್ಯಾಣ ಕರ್ನಾಟ ಕಪ್ರದೇಶದ ವ್ಯಾಪ್ತಿಯಲ್ಲಿ ಬರುವ ಲೇಖಕರಪುಸ್ತಕಗಳಿಗೆ ಪ್ರಶಸ್ತಿಗಳನ್ನು ಕೊಡುವ ಯೋಜನೆಯನ್ನು ರೂಪಿಸಲಾಗಿದೆ. ಈಗಾಗಲೇ ಕಳೆದ ಎಂಟು ವರ್ಷಗಳಿಂದ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಅದರಂತೆ ಈಗ 2023 ರಲ್ಲಿ ಪ್ರಥಮ ಮುದ್ರಣವಾದ ಕವನ ಸಂಕಲನ, ಕಥಾ ಸಂಕಲನ, ಕಾದಂಬರಿ, ಮಹಿಳಾ ಸಾಹಿತ್ಯ, ಹಾಗೂ ಸಂಕೀರ್ಣ ಕೃತಿಗಳನ್ನು ಅಹ್ವಾನಿಸಲಾಗಿದೆ. ಲೇಖಕರು ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬೀದರ ಜಿಲ್ಲೆಗಳ ನಾಗರಿಕರಾಗಿರಬೇಕು. ಕನ್ನಡನಾಡು ಪ್ರಕಾಶನದ ಪುಸ್ತಕಗಳನ್ನು ಮತ್ತು ಸಂಘದ ಆಡಳಿತ ಮಂಡಳಿ ಸದಸ್ಯರ ಪುಸ್ತಕಗಳು, ಕಳೆದ ಮೂರು ವರ್ಷಗಳಲ್ಲಿ ಪ್ರಶಸ್ತಿ ಪಡೆದ ಲೇಖಕರ ಪುಸ್ತಕಗಳನ್ನು ಹಾಗೂ ಸಂಪಾದಿತ ಪುಸ್ತಕಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ. ಪ್ರಶಸ್ತಿಗಳು 5,000 ನಗದು, ಪ್ರಮಾಣ ಪತ್ರವನ್ನು ಒಳಗೊಡಿರುತ್ತದೆ. 2023 ರಲ್ಲಿ ಪ್ರಕಟವಾದ ಉತ್ತಮ ಕಥಾಸಂಕಲನ, ಉತ್ತಮ ಕವನ ಸಂಕಲನ, ಉತ್ತಮ ಕಾದಂಬರಿ, ಮಹಿಳಾ ಸಾಹಿತ್ಯ ಮತ್ತು ಸಂಕೀರ್ಣ ವಿಭಾಗದಲ್ಲಿ ಉತ್ತಮ ಕೃತಿಗೆ ಪ್ರಶಸ್ತಿ ನೀಡಲಾಗುವುದು. ಪುಸ್ತಕಗಳನ್ನು ಸಲ್ಲಿಸಲು ಕೊನೆಯ ದಿನಾಂಕ 25-12-2024, ತಮ್ಮ ಕೃತಿಯ ಮೂರು ಪ್ರತಿಗಳನ್ನು ಅಧ್ಯಕ್ಷರು ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತ” ಜಿ.2 ವಿ. ವಿ.ಹಾಸ್ಟೇಲ್ ಕಾಂಪ್ಲೆಕ್ಸ್ ಕಲಬುರಗಿ -585105. ವಿಳಾಸಕ್ಕೆ ಖುದ್ದಾಗಿ ಇಲ್ಲವೆ ಅಂಚೆ ಮೂಲಕ ಕಳಿಸಿಕೊಡಲು ಕೋರಲಾಗಿದೆ.

ಈ ಪ್ರಶಸ್ತಿಯ ನೀಡಿಕೆಯಲ್ಲಿ ನಿರ್ಣಾಯಕರ ನಿರ್ಣಯವೇ ಅಂತಿಮ ಈ ಕುರಿತು ಪತ್ರ ವ್ಯವಹಾರ ಇಲ್ಲವೇ ವಿಚಾರಣೆಗೆ ಅವಕಾಶವಿಲ್ಲ. ಪ್ರಶಸ್ತಿಗೆ ಬಂದ ಪುಸ್ತಕಗಳನ್ನು ಹಿಂದುರಿಗಿಸಲಾಗುವುದಿಲ್ಲ.

ವಿವರಗಳಿಗಾಗಿ ಶ್ರೀ ಅಪ್ಪಾರಾವ ಅಕ್ಕೋಣೆ 9448570985

 ಸ್ವಾಮಿರಾವ ಕುಲಕರ್ಣಿ- 9448333539

 ಡಾ.ಶರಣಬಸಪ್ಪ ವಡ್ಡನಕೇರಿ 9108790711 ಇವರನ್ನು ಸಂಪರ್ಕಿಸಬಹುದಾಗಿದೆ