ಕನ್ನಡ ಜ್ಯೋತಿ ರಥಯಾತ್ರೆಗೆ ಕಮಲನಗರದಲ್ಲಿ ಭವ್ಯ ಸ್ವಾಗತ:

ಕನ್ನಡ ಜ್ಯೋತಿ ರಥಯಾತ್ರೆಗೆ ಕಮಲನಗರದಲ್ಲಿ ಭವ್ಯ ಸ್ವಾಗತ:

ಕನ್ನಡ ಜ್ಯೋತಿ ರಥಯಾತ್ರೆಗೆ ಕಮಲನಗರದಲ್ಲಿ ಭವ್ಯ ಸ್ವಾಗತ:

ಕನ್ನಡ ಕೇವಲ ಅದೊಂದು ಭಾಷೆಯಲ್ಲ ಕನ್ನಡ ಸಂಸ್ಕೃತಿ:: ಪ್ರಶಾಂತ ಮಠಪತಿ

ಕಮಲನಗರ: ತಾಲೂಕಿನ ಸಂಗಮ್ ಕ್ರಾಸ್ ಹತ್ತಿರ ರಥ ಪ್ರವೇಶಿಸುತ್ತಿದ್ದಂತೆ ತಾಲೂಕು ಆಡಳಿತ ಕನ್ನಡಾ ಅಭಿಮಾನಿಗಳು ಗ್ರಾಮಸ್ಥರು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸ್ವಾಗತ ಕೋರಿದರು.

ಖೇಡ ಗ್ರಾಮ ಪಂಚಾಯತ್ ಅಧ್ಯಕ್ಷ ಹನುಮಂತ ದಾನಾ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಚಾಲನೆ ನೀಡಿದರು. ಈ ವೇಳೆ ಕನ್ನಡಪರ ಭುವನೇಶ್ವರಿ ತಾಯಿ ಹಾಗೂ ಸಾಹಿತ್ಯ ಸಮ್ಮೇಳನಕ್ಕೆ ಜಯವಾಗಲಿ ಎಂದು ಘೋಷಣೆಗಳನ್ನು ಹಾಕಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ ಕನ್ನಡ ಭಾಷೆಗೆ ತನ್ನದೇ ಆದ ಶ್ರೇಷ್ಠ ಪರಂಪರೆ ಸಂಸ್ಕೃತಿ ಇದ್ದು ಪ್ರತಿಯೊಬ್ಬರು ಕನ್ನಡ ಉಳಿಸಿ ಬೆಳೆಸಲು ಬದ್ಧರಾಗಿರಬೇಕು ಎಂದರು.

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕಾಗಿ ರಾಜ್ಯದಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆ ಶನಿವಾರ ಕಮಲನಗರ ತಾಲೂಕಿಗೆ ಪ್ರವೇಶಿಸಿತ್ತು.

ಕಸಾಪ ತಾಲೂಕ ಅಧ್ಯಕ್ಷ ಪ್ರಶಾಂತ್ ಮಠಪತಿ ಮಾತನಾಡಿ ತಾಯಿ ಭಾಷೆ ಕನ್ನಡದ ಕುರಿತು ಎಲ್ಲರಲ್ಲಿ ಗೌರವ ಇರಬೇಕು ಕನ್ನಡ ಕೇವಲ ಒಂದು ಭಾಷೆಯಲ್ಲ, ಅದೊಂದು ಸಂಸ್ಕೃತಿ ಎಂಬುದನ್ನು ಯಾರು ಮರೆಯಬಾರದು ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯ ಪ್ರೊಫೆಸರ್ ಎಸ್. ಎನ್. ಶಿವಣಕರ್ ಮಾತನಾಡಿದರು. ಅಮಿತಕುಮಾರ ಕುಲಕರ್ಣಿ ,ಗ್ರೇಡ್-2 ತಹಶೀಲ್ದಾರ್ ರಮೇಶ್ ಪೆದ್ದೆ ತಾಲೂಕ ಪಂಚಾಯತ್ ಎಂಡಿ ಹಣಮಂತರಾಯ ಕೌಟಗೆ ಸಿಪಿಐ ಅಮರಪ್ಪ ಎಸ್, 

ಪಿಎಸ್ಐ ಚಂದ್ರಶೇಖರ್ ನಿರ್ಣೆ,ಉಪ ತಸೀಲ್ದಾರ್ ಗೋಪಾಲಕೃಷ್ಣ ಎಇಇ ಸುಭಾಷ್ ಕಮಲನಗರ ಗ್ರಾಮ್ ಪಂಚಾಯತ್ ಅಧ್ಯಕ್ಷ ಸಶೀಲಾ ಸಜ್ಜನ್ ಶಿವಶಂಕರ ಟೋಕರೆ ಪ್ರವೀಣ್ ಬಿರಾದಾರ್ ಗ್ರಾಮ ಪಂಚಾಯತ್. ಉಪಾಧ್ಯಕ್ಷೆ ಬಾಲಿಕಾ ಸೂರ್ಯವಂಶಿ ಬಿ ಆರ್ ಪಿ ಶಶಿಕಾಂತ್ ಬಿಡವೆ, ಅನಿಲ್ ಕುಮಾರ್ ಹೊಳೆಸಮುದ್ರೆ ಯಂಶವತ ಬಿರಾದಾರ್ ಧನರಾಜ ಭವರಾ ಬಸವರಾಜ ಪಾಟೀಲ ಮಾಹಾದೇವ ಮಡಿವಾಳ, ಸಂತೋಷ ಸುಲಾಕೆ ಶ್ರೀ ರಂಗ ಪರಿವಾರ ಶಿವರಾಜ್ ಪಾಟೀಲ್ ಈ ಸಂದರ್ಭದಲ್ಲಿ ಅನೇಕರು ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.