ಅಮ್ಮ ಪುರಸ್ಕೃತ ಅರುಣಾ ನರೇಂದ್ರ ದಂಪತಿಗೆ ಸನ್ಮಾನ

ಅಮ್ಮ ಪುರಸ್ಕೃತ ಅರುಣಾ ನರೇಂದ್ರ ದಂಪತಿಗೆ ಸನ್ಮಾನ

ಅಮ್ಮ ಪುರಸ್ಕೃತ ಅರುಣಾ ನರೇಂದ್ರ ದಂಪತಿಗೆ ಸನ್ಮಾನ

ಕಲಬುರಗಿ: ಕೊಪ್ಪಳದ ಹಿರಿಯ ಸಾಹಿತಿ,ಮಕ್ಕಳ ಕವಯತ್ರಿ, ಗಜಲ್ಗಾರ್ತಿ,ಶಿಕ್ಷಕಿ ಅರುಣಾ ನರೇಂದ್ರ ಅವರ ಕಮಲಿಯ ಕುರಿಮರಿ ಮಕ್ಕಳ ಕಾವ್ಯ ಸಂಕಲನಕ್ಕೆ ಬಹುರೂಪಿ ಪ್ರಾಯೋಜಿತ ಬೆಳ್ಳಿ ಸಂಭ್ರಮದ ಪ್ರಥಮ ಅಮ್ಮ ಪ್ರಶಸ್ತಿಗೆ ಭಾಜನರಾದ ನಿಮಿತ್ಯ ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು.

           ಪ್ರಧಾನ ಕಾರ್ಯದರ್ಶಿ ಡಾ.ಸಿದ್ಧಪ್ಪ ಹೊಸಮನಿ ಅವರು ಮಾತನಾಡಿ ಬಹುಮುಖ ಪ್ರತಿಭೆಯ ಇವರು ಬಡತನದ ಮಧ್ಯದಲ್ಲೂ ಛಲದಿಂದ ಓದಿ ಸರಕಾರಿ ನೌಕರಿ ಹಿಡಿದು ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಕಾವ್ಯ,ಗಜಲ್,ತತ್ತ್ವ ಪದ,ಹಾಯಿಕು ಅಲ್ಲದೇ ಮಕ್ಕಳ ಸಾಹಿತ್ಯಕ್ಕೆ ಒಂಬತ್ತು ಮೌಲಿಕ ಕೃತಿ ನೀಡಿ,ಕಮಲಿಯ ಕುರಿ ಮರಿ ಮಕ್ಕಳ ಕಾವ್ಯ ವಿಶಿಷ್ಟ ಅನುಭವ, ಪ್ರಚಲಿತ ವಿಚಾರಧಾರೆ ಹೊಂದಿವೆ ಎಂದರು.

       ಲೇಖಕ, ಉಪನ್ಯಾಸಕ ಡಸ.ರಾಜಕುಮಾರ ಮಾಳಗೆಇವತ್ತು ತತ್ತ್ವ ಪದ ಪರಂಪರೆಯ ಮುಂದುವರಿಕೆಯಾಗಿ ಆಧುನಿಕ ತತ್ವಪದ ರಚಿಸಿದ ಕನ್ನಡ ನಾಡಿನ ಒಂದು ಹೊಸ‌ಹೆಜ್ಜೆ ಮೂಡಿಸಿದ‌ ಲೇಖಕಿ ಎಂದರು,ಡಾ.ಗವಿಸಿದ್ಧಪ್ಪ ಪಾಟೀಲ, ಡಾ.ಪೀರಪ್ಪ ಸಜ್ಜನ,ಡಾ.ಜಯದೇವಿ ಗಾಯಕ ವಾಡ, ಇತರರಿದ್ದರು.