ಭಾಗ್ಯಶ್ರೀ ಹೋರ್ತಿಕರಯವರಿಗೆ ಜಿಲ್ಲಾ ಶಿಕ್ಷಕ ಪ್ರಶಸ್ತಿ.
ಭಾಗ್ಯಶ್ರೀ ಹೋರ್ತಿಕರಯವರಿಗೆ ಜಿಲ್ಲಾ ಶಿಕ್ಷಕ ಪ್ರಶಸ್ತಿ.
ಜತ್ತ; ತಾಲೂಕಿನ ಖೋಜಾನ ವಾಡಿ ಗ್ರಾಮದ ಹಿಪ್ಪರಗಿ ವಸ್ತಿಯ ಜಿಲ್ಲಾ ಪರಿಷದ ಕಿರಿಯ ಪಾಥಮಿಕಶಾಲೆಯ ಶಿಕ್ಷಕಿ ಭಾಗ್ಯಶ್ರೀ ರಾಮಚಂದ್ರ ಹೋರ್ತಿಕರಯವರು ಸಾಂಗಲಿ ಜಿಲ್ಲಾ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸಾಂಗಲಿ ಜಿಲ್ಲೆಯ ವಿಶೇಷ ಗುಣವಂತ ಶಿಕ್ಷಕಪ್ರಶಸ್ತಿ ಜಿಲ್ಲಾ ಮುಖ್ಯ ಕಾಯ೯ಕಾರಿ ಅಧಿಕಾರಿ ವಿಶಾಲ ನರ ವಡೆ . ಶಿಕ್ಷಣಾಧಿಕಾರಿ ಮೋಹನ ಗಾಯಕವಾಡ ಇವರ ಒಂದು ಮುಖಿಕ ಪರೀಕ್ಷೆ ನಡೆಸಿ ಇವರನ್ನು ವಿಶೇಷ ಗುಣವಂತ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದರು.
ಸಾಂಗಲಿ ಜಿಲ್ಲಾ ಪಾಲಕ ಮಂತ್ರಿ ಚಂದ್ರಕಾಂತ ದಾದಾ ಪಾಟೀಲ.ಲೋಕಸಭಾ ಸದಸ್ಯ ವಿಶಾಲ ದಾದಾ ಪಾಟೀಲ ವಿಧಾನ ಪರಿ ಷತ ಹಾಗೂ ವಿಧಾನ ಸಭಾ ಸದಸ್ಯರು ಪ್ರಶಸ್ತಿ ಪ್ರಧಾನ ಮಾಡಿದರು.
ವಿಶೇಷ ಸಾಧನೆ: 40 ಕ್ಕಿಂತ ಹೆಚ್ಚು ಮಕ್ಕಳು ಇರುವ ಈ ಶಾಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವ ಭಾಗ್ಯಶ್ರೀಹೊರ್ತಿಕರ ಯವರಪಾತ್ರ ದೊಡ್ದದು ತಾವೇ ಹಂಗಾಮಿ ಶಿಕ್ಷಕಿಯನ್ನು ಕರೆಸಿಕೊಂಡು ಇನ್ನೂ ಹೆಚ್ಚಿನ ಶಿಕ್ಷಣ ದೊರಕಬೇಕು ತಾವೇ ಸಂಬಳ ಕೊಡುತ್ತಾರೆ ಅದೇ ರೀತಿ ಪ್ರತಿಯೊಬ್ಬ ಮಕ್ಕಳಹೆಸರಲ್ಲಿ F. D ಇಡುತ್ತಿದ್ದಾರೆ. ಇಂತಹ ಶಿಕ್ಷಕರು ಪ್ರತಿಯೊಂದು ಹಳ್ಳಿಯಲ್ಲಿ ಇದ್ದರೆ ಕನ್ನಡ ಶಾಲೆಗಳು ಉಳಿಯಲು ಸಾಧ್ಯ.
ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಭಾಗ್ಯಶ್ರೀ ಹೋ ತಿ೯ಕರ ಯವರಿಗೆ ಜತ್ತ ತಾಲೂಕಾ ಕನ್ನಡ ಶಿಕ್ಷಕ ಬಳಗ ಖೋಜಾನ ವಾಡಿ ಕೇಂದ್ರ ಕನ್ನಡ ಶಾಲೆಯ ಶಿಕ್ಷಕರು ಎಸ್.ಡಿ.ಎಸ್.ಸಿ. ಅಧ್ಯಕ್ಷರು ಹಾಗೂ ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವರದಿಗಾರ: ದಯಾನಂದ ಪಾಟೀಲ