ಮೌಲ್ಯವರ್ಧಿತ ಕೋರ್ಸ್ ಪ್ರಮಾಣಪತ್ರ ವಿತರಣೆ.
ಮೌಲ್ಯವರ್ಧಿತ ಕೋರ್ಸ್ ಪ್ರಮಾಣಪತ್ರ ವಿತರಣೆ.
ಪ್ರಾಣಿಶಾಸ್ತ್ರ ವಿಭಾಗ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜು, ಕಲಬುರಗಿ ಜೇನು ಕೃಷಿಯಲ್ಲಿ 30 ದಿನಗಳ ಮೌಲ್ಯವರ್ಧಿತ ಕೋರ್ಸ್ ಆಯೋಜಿಸಿದೆ. ಮುಖ್ಯ ಅತಿಥಿ ಡಾ. ಎಸ್ . ಆರ್. ಪಾಟೀಲ್, ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು ಪ್ರಮಾಣ ಪತ್ರ ವಿತರಿಸಿದರು. ಈ ರೀತಿಯ ಕೋರ್ಸ್‌ಗಳು ಇಂದಿನ ಅಗತ್ಯವಾಗಿರುವ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸುತ್ತವೆ ಎಂದು ಅವರು ತಮ್ಮ ಭಾಷಣದಲ್ಲಿ ಶ್ಲಾಘಿಸಿದರು. ಈ ಕೋರ್ಸ್‌ನಿಂದ ಒಟ್ಟು 50 ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. ಡಾ. ಆರ್. ಬಿ. ಕೊಂಡ, ಪ್ರಾಚಾರ್ಯರು ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರೇಷ್ಮಾ ಸಿಬ್ಬಂದಿಗಳಾದ ವಾಸವಿ ಜೋಶಿ, ಭಾಗ್ಯಶ್ರೀ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.