ಎಸ್ಸಿ ಮೀಸಲು ಕ್ಷೇತ್ರದಲ್ಲಿ ಗೃಹಲಕ್ಷ್ಮಿ ಲಾಭಾರ್ಥಿಗಳ ಸಂಖ್ಯೆ ಕುರಿತು ಗ್ಯಾರಂಟಿ ಸಭೆಯಲ್ಲಿ ಗದ್ದಲ

ಎಸ್ಸಿ ಮೀಸಲು ಕ್ಷೇತ್ರದಲ್ಲಿ ಗೃಹಲಕ್ಷ್ಮಿ ಲಾಭಾರ್ಥಿಗಳ ಸಂಖ್ಯೆ ಕುರಿತು ಗ್ಯಾರಂಟಿ ಸಭೆಯಲ್ಲಿ ಗದ್ದಲ

ಗ್ಯಾರಂಟಿ ಅಧ್ಯಕ್ಷ ಬಸವರಾಜ ಮಲಿ ನೇತೃತ್ವದಲ್ಲಿ ಗ್ಯಾರೆಂಟಿ ಯೋಜನೆಗಳ ಪರಿಶೀಲನೆ ಸಭೆ ನಡೆಯಿತು

ಎಸ್ಸಿ ಮೀಸಲು ಕ್ಷೇತ್ರದಲ್ಲಿ 1334 ಫಲಾನುಭವಿಗಳು ಮಾತ್ರ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಅರ್ಹರು : ಸಭೆಗೆ ವರದಿ ಸಲ್ಲಿಸಿದ ಅಧಿಕಾರಿಗಳು

ವರದಿಗೆ ಗ್ಯಾರೆಂಟಿ ಸಮಿತಿ ಸದಸ್ಯರಿಂದ ಆಕ್ಷೇಪಣೆ, ಅಧಿಕಾರಿಗೆ ತರಾಟೆ : ಸಭೆಯ ಕ್ಷಮೆಯಾಚಿಸಿದ ಅಧಿಕಾರಿ

ಚಿಂಚೋಳಿ : ಸರಕಾರದ ಪಂಚಗ್ಯಾರೆಂಟಿ ಯೋಜನೆಗಳ ಅಧ್ಯಕ್ಷ ಬಸವರಾಜ ಮಲಿ ಅವರ ನೇತೃತ್ವದಲ್ಲಿ ಮಾಸಿಕ ಪ್ರಗತಿ ಪರಿಶೀಲನೆ ಸಭೆ ಜರುಗಿತ್ತು.

ಸಭೆಯಲ್ಲಿ ಹಿಂದಿನ ತಿಂಗಳಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ ಚರ್ಚಿಸಿಸಲಾಯಿತು.

 ಗೃಹಲಕ್ಷ್ಮಿ, ಯುವನಿಧಿ, ಗೃಹ ಜ್ಯೋತಿ, ಶಕ್ತಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಗಳ ಪ್ರಗತಿ ಪರಿಶೀಲನೆ ಅಧ್ಯಕ್ಷರು ನಡೆಸಿದರು.

ಗೃಹಲಕ್ಷ್ಮಿ ಯೋಜನೆ: 

ತಾಲೂಕಿನಲ್ಲಿ ಒಟ್ಟು 353೦7 ಮಹಿಳಾ ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಇದರಲ್ಲಿ ಓಬಿಸಿ 9967, ಅಲ್ಪಸಂಖ್ಯಾತರು 4637 ಜನ, ಎಸ್ಸಿ 1334 ಜನ, ಎಸ್ಟಿ 966 ಜನ ಮಹಿಳೆಯರು ಜುಲೈ ತಿಂಗಳವರೆಗೆ ಲಾಭ ಪಡೆದುಕೊಂಡಿದ್ದು, ಪಟ್ಟಣದ 4562 ಜನ, ಗ್ರಾಮೀಣ ಭಾಗದ 48711 ಜನ ಸೇರಿ ಒಟ್ಟು 53273 ಜನರು ನೊಂದಣಿ ಮಾಡಿಕೊಂಡು 13 ಜನ ಫಲಾನುಭವಿಗಳು ಮೃತಪಟ್ಟಿದ್ದು, ಯೋಜನೆಯ ಲಾಭ ಪಡೆಯುತ್ತಿದ್ದಾರೆಂಬ ಮಾಹಿತಿ ಇದೆ ಎಂದು ಸಭೆಗೆ ಅಧಿಕಾರಿ ಸವಿತಾ ಅವರು ತಿಳಿಸಿದರು.

ಯುವ ನಿಧಿ: 

ಡಿಸೇಂಬರ್ 2೦23 ರಿಂದ ಡಿಸೇಂಬರ್ 2೦2೫ ರವರೆಗೆ 12723 ಜನ ಪದವಿಧರರು, ೧93ಡಿಪ್ಲೋಮ ಪದವಿಧರರು ಪ್ರತಗಳು ಯೋಜನೆ ಲಾಭ ಪಡೆಯುತ್ತಿದ್ದು, ಒಟ್ಟು 3,84,58,5೦೦ ರು ವೆಚ್ಚ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಶಕ್ತಿ ಯೋಜನೆ: 

ಶಕ್ತಿ ಯೋಜನೆ ಅಡಿ ಒಟ್ಟು 123.93 ಲಕ್ಷ ಜನ ಮಹಿಳೆಯರು ಪ್ರಾಯಾಣಿಸಿದ್ದು, 3972. 29 ಲಕ್ಷ ರು ಇಲಾಖೆಗೆ ಆದಾಯ ಬಂದಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಹೊಸ ಬಸ್ ಗಳು ನೀಡಲಾಗಿದೆ. ಆದರೆ ಚಿಂಚೋಳಿಗೆ ಹೊಸ ಬಸ್ ನೀಡಿಲ್ಲ ಎಂದು ಕಲ್ಯಾಣ ಕರ್ನಾಟಕ ಸಾರಿಗೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಗೃಹ ಜ್ಯೋತಿ ಯೋಜನೆ ಬಗ್ಗೆ ಚರ್ಚಿಸಲಾಯಿತು. ಅಧಿಕಾರಿಗೆ ತರಾಟೆ: 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಸವಿತಾ ಅವರು ಸಭೆಗೆ ಸಲ್ಲಿಸಿದ ವರದಿ ಸಲ್ಲಿಕೆಗೆ ಸಮಿತಿ ಸದಸ್ಯರು ಅಧಿಕಾರಿಗೆ ತರಾಟೆ ತೆಗೆದುಕೊಂಡಿರುವುದು ಜರುಗಿತು. ವರದಿಯ ಅಂಕಿ ಅಂಶಗಳು ಸರಿಪಡಿಸಿ ನೀಡುವುದಾಗಿ ಅಧಿಕಾರಿ ಸವಿತಾ ಸಭೆಗೆ ಕ್ಷೇಮೆಯಾಚಿಸಿದರು. 

ಈ ಸಂದರ್ಭದಲ್ಲಿ ಗ್ಯಾರೆಂಟಿ ಸಮಿತಿ ಸದಸ್ಯರಾದ ಲಕ್ಷ್ಮಣ ಆವಂಟಿ, ಅಬ್ದುಲ್ ಬಾಶೀದ್, ಗಂಗಾಧರ ಗಡ್ಡಿಮನಿ, ವಿಜಯಕುಮಾರ ಘಟಗೆ, ಅಧಿಕಾರಿಗಳಾದ ಮಲ್ಲಿಕಾರ್ಜುನ್, ಸವಿತಾ, ಕಾಮಣ್ಣ ಅವರು ಉಪಸ್ಥಿತರಿದ್ದರು.