ನೀಲಾಂಬಿಕಾ ಮಂಟಪದಲ್ಲಿ ಬಸವ ಪ್ರತಿಮೆ ಅನಾವರಣ ಬಸವ ತತ್ವಾಚರಣೆಯಿಂದ ಪ್ರಗತಿಯ ಪತಾಕೆ: ಬಾಲ್ಕಿ ಶ್ರೀ
ನೀಲಾಂಬಿಕಾ ಮಂಟಪದಲ್ಲಿ ಬಸವ ಪ್ರತಿಮೆ ಅನಾವರಣ
ಬಸವ ತತ್ವಾಚರಣೆಯಿಂದ ಪ್ರಗತಿಯ ಪತಾಕೆ: ಬಾಲ್ಕಿ ಶ್ರೀ
ಆಳಂದ: ಇಡೀ ಮಾನವ ಜನಾಂಗದ ಸ್ವತ್ತಾಗಿರುವ ಬಸವ ತತ್ವದ ತಳಹದ್ದಿಯ ಮೇಲೆ ವಿಶ್ವವೇ ಮುನ್ನೆಡೆಯಲು ಹೆಜ್ಜೆಯನಿಡುತ್ತಿದೆೆ, ಯಾರು ಇದನ್ನು ಪರೋಕ್ಷ ಅಪರೋಕ್ಷ ಅನುಸರಿಸುತ್ತಾರೋ ಅಂಥ ದೇಶ ಮತ್ತು ಅಂಥ ಜನರು ಅಭಿವೃದ್ಧಿ ಮತ್ತು ಸಾಧನೆಯಂತ ಹಲವು ರಂಗದಲ್ಲಿ ಮೊದಲಿಗರಾಗಿ ನಿಲ್ಲುತ್ತಾರೆ ಎಂದು ಬಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದೇವರು ಭವಿಷ್ಯ ನುಡಿದರು.
ತಾಲೂಕಿನ ಭೂಸನೂರ ಗಾಮದ ಸಕ್ಕರೆ ಕಾರ್ಖಾನೆ ಬಳಿ ಬಸವ ಸೇವಾ ಪ್ರತಿಷ್ಠಾನ ಅಧ್ಯಕ್ಷೆ ಜೋತಿ ರಾಜಶೇಖರ ಯಂಕAಚಿ ಅವರ ಆಶ್ರಯದಲ್ಲಿ ಜನಹಿತಕ್ಕಾಗಿ ನಿರ್ಮಿಸಿದ್ದ ನೀಲಾಂಬಿಕಾ ಕಲ್ಯಾಣ ಮಂಟಪ ಉದ್ಘಾಟನೆ ಹಾಗೂ ವಿಶ್ವಗುರು ಬಸವಣ್ಣನವರ ಮೂರ್ತಿ ಅನಾವರಣ, ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬಸವಾದಿ ಶರಣರು ೧೨ನೇ ಶತಮಾನದಲ್ಲೇ ಸ್ಥಾಪಿಸಿದ ಮಾರ್ಡ್ನ ಸೋಸೈಟಿಯನ್ನು ಸ್ತ್ರೀ ಪುರುಷ ಭೇದವಿಲ್ಲದೆ ಜಾತಿ, ಮತ ಪಂಥಗಳಿಲ್ಲದೆ ಸಾಧಿಸಿ ತೋರಿದ ಸಮಾನತೆ, ಸರಳತೆ, ಕಾಯಕ, ದಾಸೋಹ, ಸಹೋದರತೆ, ಸೌಹಾರ್ದತೆ ವಿಶ್ವದ ಮಾನವ ಜನಾಂಗಕ್ಕೆ ಮೌಲ್ಯಗಳನ್ನು ನಡೆ, ನುಡಿಗಳ ಮೂಲಕ ಕೊಟ್ಟಿದ್ದಾರೆ ಎಲ್ಲಡೆ ಒಪ್ಪುಕೊಳ್ಳುವಂತ್ತಿದೆ. ಇದನ್ನು ಜಾಗೃತಿ ಸಮಾಜದಲ್ಲಿ ಅಂದು ಅವರು ಕಂಡ ಕನಸುಗಳು ಇಂದು ಬಹುತೇಕ ದೇಶ ರಾಜ್ಯಗಳಲ್ಲಿ ಕಾರ್ಯರೂಪಕ್ಕೆ ಬರತೊಡಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಸಂಸದರು, ಶಾಸಕದ್ವಯರು, ವಿವಿಧ ಭಾಗದ ಮಠಾಧೀಶರು ಪಾಲ್ಗೊಂಡು ಮಾತನಾಡಿದರು. ಈ ಪ್ರಯುಕ್ತ ೧೦ ದಿನಗಳ ಕಾಲ ಜರುಗಿದ ಶರಣರ ಜೀವನ ಪ್ರವಚನ ಕಾರ್ಯಕ್ರಮ ಹರ,ಗುರು ಚರಮೂರ್ತಿಗಳಿಗೆ ಮತ್ತು ಕಲಾವಿದರಿಗೆ ಗೌರವ ಸಮರ್ಪಣೆಯಂತ ಮಹತ್ವ ಪೂರ್ಣ ಕಾರ್ಯಕ್ರಮ ನಡೆದವು.
ವರದಿಗಾರರು ಡಾ ಅವಿನಾಶ, ಎಸ್. ದೇವನೂರ