ಮಹಾಸಭೆ ನಿರ್ಣಯ ಪಾಲಿಸದಿದ್ದರೆ, ಗುರುಗಳು, ಗಣ್ಯರು ಭಾಗವಹಿಸಿಲ್ಲ. ವೀರಶೈವ ಲಿಂಗಾಯತರಿಂದ ಐತಿಹಾಸಿಕ ನಿರ್ಣಯ ಪ್ರತಿಜ್ಞಾ ವಿಧಿ ಸ್ವೀಕಾರ

ಮಹಾಸಭೆ ನಿರ್ಣಯ ಪಾಲಿಸದಿದ್ದರೆ, ಗುರುಗಳು, ಗಣ್ಯರು ಭಾಗವಹಿಸಿಲ್ಲ.  ವೀರಶೈವ ಲಿಂಗಾಯತರಿಂದ ಐತಿಹಾಸಿಕ ನಿರ್ಣಯ ಪ್ರತಿಜ್ಞಾ ವಿಧಿ ಸ್ವೀಕಾರ

ಮಹಾಸಭೆ ನಿರ್ಣಯ ಪಾಲಿಸದಿದ್ದರೆ, ಗುರುಗಳು, ಗಣ್ಯರು ಭಾಗವಹಿಸಿಲ್ಲ. 

ವೀರಶೈವ ಲಿಂಗಾಯತರಿಂದ ಐತಿಹಾಸಿಕ ನಿರ್ಣಯ ಪ್ರತಿಜ್ಞಾ ವಿಧಿ ಸ್ವೀಕಾರ 

ಆಳಂದ: ಪಟ್ಟಣದ ಲಿಂಗಾಯತ್ ಭವನದಲ್ಲಿ ಸೋಮವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಹತ್ವಪೂರ್ಣ ನಿರ್ಣಯಗಳನ್ನು ಪ್ರಕಟಿಸಿ ಸಮಾಜಕ್ಕೆ ಸಂದೇಶ ರವಾನಿಸಲಾಯಿತು. 

ಸಮಾರಂಭದಲ್ಲಿ ಭಾಗವಹಿಸಿದ ಮುಖ್ಯಮಂತ್ರಿಗಳ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ ಸೇರಿದಂತೆ ಗಣ್ಯರು ಮತ್ತು ವಿವಿಧ ಮಠಗಳ ಪೂಜ್ಯರು ತಮ್ಮ ಆಶೀರ್ವಚನ ಮೊದಲು, ಕೇವಲ ಧಾರ್ಮಿಕ ಮಾತ್ರವಲ್ಲದೆ, ಸಾಮಾಜಿಕ ಉದ್ದೇಶಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕೈಗೊಂಡ ಐತಿಹಾಸಿಕ ಅನೇಕ ನಿರ್ಧಾರಗಳನ್ನು ಪ್ರತಿಜ್ಞೆ ಕೈಗೊಂಡು ಸಮಾಜ ಬಾಂಧವರು ಸಂದೇಶ ಪಾಲಿಸುವಂತೆ ಕಟ್ಟಪ್ಪಣೆ ಘೋಷಿಸಿದರು. 

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಂಭೆಯತಲ್ಲಿ ಪ್ರತಿಜ್ಞೆ ಮಾಡುತ್ತಿದ್ದೇವೆ. ನಾವು ಇದ್ದಿನಿಂದ ದಿನ ನಿತ್ಯ ವಿಭೂತಿ, ಲಿಂಗಧಾರಣೆ, ಲಿಂಗ ಪೂಜೆ ಮಾಡುತ್ತೇವೆ.

ಇನ್ನು ಮುಂದೆ ಕುಟುಂಬಗಳಲ್ಲಿ ನಿಶ್ಚಿತಾರ್ಥ ಮದುವೆ, ಮಕ್ಕಳ ನಾಮಕರಣ, ಹುಟ್ಟು ಹಬ್ಬ, ಸರಳತೆ ಇಂದ ದುಂದು ವೆಚ್ಚ ಮಾಡದೆ ಆಚರಣೆ ಮಾಡುತ್ತೇವೆ ಎಂದು ಪ್ರತಿಜ್ಞೆ ಕೈಗೊಳ್ಳಲಾಯಿತು. 

ಕುಟುಂಬದ ತಂದೆ, ತಾಯಿ ಅಣ್ಣ ತಮ್ಮ ಹಾಗೂ ಮಕ್ಕಳು ಜೋತೆಗುಡಿ ರಾತ್ರಿ ಸಹ ಭೂಜನ ಮಾಡಿ ಕುಟುಂಬದ ವಿಚಾರ ವಿನಿಮಯ ಒತ್ತು ನೀಡುತ್ತೇವೆ. ನಾವು ವೀರಶೈವ ಲಿಂಗಾಯತಗಳಲ್ಲಿ ಇರುವ ಉಪಜಾತಿ ಪಂಗಡಗಳನ್ನು ಬೇಧ,ಭಾವ ಮಾಡದೆ ರಕ್ತ ಸಂಭದ ಬೇಳೆಸುತ್ತೇವೆ. ನಾವು ಇವತ್ತಿನಿಂದ ವೀರಶೈವ ಲಿಂಗಾಯತ ಧರ್ಮದ ಆಚರಣೆಗಳನ್ನು ಮಾಡುತಿರುವ ದಲಿತ ಹಿಂದೂಳಿದ ವರ್ಗದವರನ್ನು ಹತ್ತಿರಕರೆದುಕೊಂಡು ಅವರ ಜೋತೆಗೆ ಉತ್ತಮ ಭಾಂದವ್ಯ ಬೇಳೆಸಿ ಸಮಾಜದಲ್ಲಿ ಸಾಮರಸ್ಯ ಬೆಳೆಸುತ್ತೇವೆ. ಮತ್ತು ಲಿಂಗಧಾರಣೆ ಮಾಡಿದ ಯಾವುದೆ ಜಾತಿಗೆ ಸೇರಿಸರರಾದರು ಅವರುಗಳಿಗೆ ಮಠ ಮಂದಿರಗಳಲ್ಲಿ ಪ್ರವೇಶಕ್ಕೆ ಅನುಮಾಡಿಕೋಟ್ಟು ಹಾಗೂ ಅವರ ಆತ್ಮ ಗೌರವನು ಕಾಪಾಡಿ ಅಸ್ಪಶ್ರತೆ (ಮುಟಿ ತಟ್ಟಿ) ಪಾಲಿಸದೆ ಅವರನ್ನು ಗೌರವಾಗಿ ಕಾಣುತೇವೆ ಎಂದರು. 

ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲಿ ಹಾಗೂ ಸಮಾಜದ ಯಾವುದೆ ವಿಷಯ ಬಂದಾಗ ಪಕ್ಷ ರಾಜಕೀಯ ಮಾಡದೆ ಬೇದ-ಭಾವಮರೆತು ಸಮಾಜ ಸಂಘಟನೆ ಗಟ್ಟಿಗೊಳ್ಳಿಸುತ್ತೇವೆ. ವೀರಶೈವ ಲಿಂಗಾಯತ ಧರ್ಮದ ಮೇಲೆ ವೈಚಾರಿಕ ವಿಷಯಗಳ ಪ್ರಭಾವ ಬೀರುವಂತಹ ಅಣ್ಣ ಬಸವಣ್ಣ ನವರ ವಚನಗಳನ್ನು ದಿನ ನಿತ್ಯ ಓದಬೇಕು ಮತ್ತು ಜೀವನದ್ದಲಿ ಪಾಲಿಸ ಬೇಕು. ಮಾನವ ಮರ್ಧದ ಮಾನವಿಯತೆ ದೃಷ್ಟಿಯಿಂದ ಬೇದ ಭಾವ ಮಾಡದೆ ಎಲ್ಲಾ ಜಾತಿ, ಧರ್ಮದವರಿಗೆ ದೇವಸ್ಥಾನಗಳಲ್ಲಿ ಮುಕ್ತ ಅವಕಾಶ ನೀಡುತ್ತೇವೆ. ಕಡ್ಡಾಯವಾಗಿ ಸಾಲ ತೆಗೆದು ಕೋಳ್ಳದೆ ಕೌಟುಂಬಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ಮಾಡದೆ ಸರಳತ್ತೇಯಾಗಿ ನಡೆಸುತ್ತೇವೆ. ಸಮಾಜದ ಒಳತಿಗಾಗಿ ಕೈಗೊಂಡ ಎಲ್ಲಾ ನಿರ್ಣಯಗಳನ್ನು ಯಾರಾದರು ಪಾಲೀಸದಿದ್ದರೆ ಅಂತವರ ಕಾರ್ಯಕ್ರಮಗಳಿಗೆ ಪೂಜ್ಯರು ಮತ್ತು ಗಣ್ಯರು ಭಾಗವಹಿಸಬಾರದೆಂದು ಐತಿಜಾಸಿಕ ನಿರ್ಣಯದ ಪ್ರತಿಜ್ಞೆ ಕೈಗೊಂಡು ಪ್ರಮಾಣವಚನ ಸ್ವೀಕರಿಸಿದರು. ಸಮಾಜ ಅಧ್ಯಕ್ಷ ಶರಣಬಸಪ್ಪಾ ಪಾಟೀಲ ಸೇರಿದಂತೆ ತಾಲೂಕಿನ ಸರ್ವ ಪದಾಧಿಕಾರಿಗಳಿಗೆ ಪದಗೃಹಣ ನಿಮಿತ್ತ ಸನ್ಮಾನಿಸಿ ಪ್ರಮಾಣಪತ್ರ ನೀಡಿ ಅಧಿಕಾರ ವಹಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಮುಖರು ಮಠಾಧೀಶರು ವಿವಿಧ ಪಕ್ಷಗಳಲ್ಲಿನ ಪ್ರಮುಖರು ಮತ್ತು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾಜದ ಮುಂದಿನ ನಡೆಯ ಕುರಿತು ಚರ್ಚಿಸಿದರು. 

ವರದಿಗಾರರು ಡಾ ಅವಿನಾಶ, ಎಸ್. ದೇವನೂರ