ಜೀವ ಮರಣದ ಮಧ್ಯೆ ಹೋರಾಡುತ್ತಿದ್ದ ಗರ್ಭಿಣಿಗೆ ಯಶಸ್ವಿ ಚಿಕಿತ್ಸೆ ನೀಡಿ ತಾಯಿ ಮಗುವನ್ನು ರಕ್ಷಿಸಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು

ಜೀವ ಮರಣದ ಮಧ್ಯೆ ಹೋರಾಡುತ್ತಿದ್ದ ಗರ್ಭಿಣಿಗೆ ಯಶಸ್ವಿ ಚಿಕಿತ್ಸೆ ನೀಡಿ ತಾಯಿ ಮಗುವನ್ನು ರಕ್ಷಿಸಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು

*ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ಗರ್ಭಿಣಿಗೆ ಯಶಸ್ವಿ ಚಿಕಿತ್ಸೆ ನೀಡಿ ತಾಯಿ ಮಗುವನ್ನು ರಕ್ಷಿಸಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು*

ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಆಸ್ಪತ್ರೆಯ ವೈದ್ಯರು ಸಮಯಕ್ಕೆ ಸರಿಯಾಗಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ಗರ್ಭಿಣಿ ಮಹಿಳೆಗೆ ಯಶಸ್ವಿ ಚಿಕಿತ್ಸೆ ನೀಡಿ ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ರಕ್ಷಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜಮಖಂಡಿ ಗ್ರಾಮದ 35 ವರ್ಷದ ಸುಮಿತ್ರಾ ಎಂಬ ಗರ್ಭಿಣಿಯು ಅಪಾಯದ ಸ್ಥಿತಿಯಲ್ಲಿ 39 ವಾರಗಳು 4 ದಿನಗಳ ನಂತರ 6 ನೇಯ ಹೆರಿಗೆಗಾಗಿ ಬಸವೇಶ್ವರ ಆಸ್ಪತ್ರೆಗೆ ದಾಖಲಾಗುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಜರಾಯು ಬೇರ್ಪಡುವಿಕೆ (ಪ್ರೆಸೆಂಟಲ್ ಅಬ್ರಫ್ಷನ್) ಪ್ರಾರಂಭವಾಗಿತ್ತು ಇದು ಗರ್ಭಿಣಿಗೆ ಅತ್ಯಂತ ಅಪಾಯಕಾರಿ ಪರಿಣಮಿಸಿ ರಕ್ತಸ್ರಾವ ಪ್ರಾರಂಭವಾಗಿತ್ತು ಇದೆ ಸಂಧರ್ಭದಲ್ಲಿ ಒಳಗಿನ ರಕ್ತನಾಳದಲ್ಲಿನ ರಕ್ತ ತಿಳಿಯಾಗಿತ್ತು (ಡಿಐಸಿ) ಇದರಿಂದಾಗಿ ಅವರ ಹೆರಿಗೆ ಸಂದರ್ಭದಲ್ಲಿ ತೀವ್ರ ರಕ್ತಸ್ರಾವದಿಂದ ಅವರಿಗೆ ಪೋಸ್ಟಪರ್ಟಮ್ ಹೇಮರೇಜ್ (ಪಿಪಿಎಚ್) ಕಂಡು ಬಂದಿತು ಇದರಿಂದಾಗಿ ಎಕ್ಯೂಟ್ ಕಿಡ್ನಿ ಇಂಜೂರಿ ಹಾನಿಯುಂಟಾಯಿತು(ಎಕೆಐ) ರಕ್ತದ ಹರಿವಿನಲ್ಲಿ ಏರುಪೇರಾಗಿ ಅಪಾಯದ ಸ್ಥಿತಿ ಗೆ ತಲುಪಿದ್ದರು ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ ಆಸ್ಪತ್ರೆಯ ನುರಿತ ವೈದ್ಯರ ತಂಡ ತಕ್ಷಣವೇ ತಾಯಿ ಹಾಗೂ ಮಗುವನ್ನು ರಕ್ಷಿಸಲು ವ್ಯಾಕ್ಯೂಮ್ ಸಹಾಯದಿಂದ ಯೋನಿ ಪ್ರಸವ ಮಾಡಲು ನಿರ್ಧರಿಸಿ ತುರ್ತು ಚಿಕಿತ್ಸೆ ಆರಂಭಿಸಲಾಯಿತು.ರಕ್ತಸ್ರಾವದಿಂದ ಬಳಲುತ್ತಿದ್ದ ಆ ಗರ್ಭಿಣಿ ಮಹಿಳೆಗೆ ತಕ್ಷಣವೇ 4 ಯುನಿಟ್ ಪ್ಯಾಕ್ಡ್ ರೆಡ್ ಬ್ಲಡ್ ಸೆಲ್ಸ (ಪಿಆರ್ ಬಿಸಿ), 4 ಯುನಿಟ್ ಪ್ರೇಶ್ ಪ್ರೋಜೋನ್ ಪ್ಲಾಸ್ಮಾ (ಎಫ್ ಎಫ್ ಪಿ) 2 ಯುನಿಟ್ ಸಿಂಗಲ್ ಡೋನರ್ ಪ್ಲೇಟ್ ಲೇಟ್ಸ (ಎಸ್ ಡಿ ಪಿ), 1 ಯುನಿಟ್ ಕ್ರಯೋಪ್ರೇಸಿಪಿಟೇಟ್ ಬೇಕಾಗಿತ್ತು ಇವುಗಳನ್ನೆಲ್ಲ ಹೊಂದಿಸಿಕೊಂಡು ಆಕೆಯನ್ನು ತಕ್ಷಣವೇ ಐಸಿಯುಗೆ ವರ್ಗಾಯಿಸಿ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ನೀಡಲು ಪ್ರಾರಂಭಿಸಲಾಯಿತು. ರಕ್ತ ಸಂಚಾರದ ಸ್ಥಿರತೆ ಕಾಪಾಡಲು ಇನೋಟ್ರೋಪ್ಸ ಔಷಧಿ ಚಿಕಿತ್ಸೆ, ರಕ್ತದೊತ್ತಡ ನಿಯಂತ್ರಿಸಲು ವ್ಯಾಸೋಪ್ರೇಶರ್ ಚಿಕಿತ್ಸೆ ಪ್ರಾರಂಭಿಸಲಾಯಿತು, ಮೂತ್ರ ಪಿಂಡ ರಕ್ಷಣೆಗೆ ಗಮನ ಹರಿಸಲಾಯಿತು ಇವೆಲ್ಲ ಚಿಕಿತ್ಸೆಗಳಿಗೆ ಸರಿಯಾಗಿ ಸ್ಪಂದಿಸಿದ ಗರ್ಭಿಣಿ ಮಹಿಳೆಯ ಅಪಾಯಕಾರಿ ಸ್ಥಿತಿಗೆ ತಲುಪಿದ್ದ ಮೂತ್ರಪಿಂಡದ ಕಾರ್ಯ ಸುಧಾರಿಸಿತು ನಿಧಾನವಾಗಿ ಆಕೆಯ ಸ್ಥಿತಿ ಸುಧಾರಣೆ ಹಂತಕ್ಕೆ ತಲುಪಿತು ಆಕೆಯ ಹೆರಿಗೆ ಯಶಸ್ವಿಯಾಗಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ಗರ್ಭಿಣಿ ಸುಮಿತ್ರಾ ಹಾಗೂ ಮಗು ಸುರಕ್ಷಿತವಾಗಿವೆ.ಈ ಸೂಕ್ಷ್ಮ ಚಿಕಿತ್ಸೆ ನಡೆಸಿದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾದ ಡಾ ಮೀನಾಕ್ಷಿ ದೇವರಮನಿ ಹಾಗೂ ಅವರ ತಂಡದ ನುರಿತ ವೈದ್ಯರಾದ ಡಾ ಸವಿತಾ ಕೋಣಿನ್, ಡಾ ಭವಾನಿ ಪಾಟೀಲ್, ಡಾ ಅನುಪಮಾ,ಡಾ ವಿಶಾಲಾಕ್ಷಿ, ಅರಿವಳಿಕೆ ಹಾಗೂ ತೀವ್ರ ನಿಗಾ ಘಟಕದ ಡಾ ಯಾಹ್ಯ, ಡಾ ವಿದ್ಯಾ, ಡಾ ಸೋಹೈಲ್,ಡಾ ಪ್ರತೀಕ್, ಡಾ ಸತೀಶ್, ಮತ್ತು ಸ್ನಾತಕೋತ್ತರ ವೈದ್ಯರ ತಂಡ ಈ ಯಶಸ್ವಿ ಚಿಕಿತ್ಸೆ ಕಾರ್ಯದಲ್ಲಿದ್ದರು

ಇವರ ಯಶಸ್ವಿ ಚಿಕಿತ್ಸೆಗೆ ಕಾರಣರಾದ ವೈದ್ಯಕೀಯ ತಂಡವನ್ನು ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ಜಿ ನಮೋಶಿ, ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯಾದರ್ಶಿಗಳಾದ ಡಾ ಕೈಲಾಸ ಪಾಟೀಲ್ ಆಸ್ಪತ್ರೆಯ ಸಂಚಾಲಕರಾದ ಡಾ ಕಿರಣ ದೇಶಮುಖ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ ಮಲ್ಲಿಕಾರ್ಜುನ ತೇಗನೂರ ಅಭಿನಂದಿಸಿದ್ದಾರೆ..