ಸಂತ ಜೋಸೆಫ್ ಶಿಕ್ಷಣ ಸಂಸ್ಥೆಯಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ.
ಸಂತ ಜೋಸೆಫ್ ಶಿಕ್ಷಣ ಸಂಸ್ಥೆಯಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ.
ನಾಗರಾಜ್ ದಂಡಾವತಿ ವರದಿ ಕಲ್ಬುರ್ಗಿ ನಗರದ ಸಂತ ಜೋಸೆಫ್ ಶಿಕ್ಷಣ ಸಂಸ್ಥೆಯಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಕ್ರಿಸ್ಮಸ್ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಆಗಮಿಸಿದ ಫಾದರ್ ಸ್ಟಾನಿ ಅವರು ವಿದ್ಯಾರ್ಥಿಗಳು ಮಾಡಿದ ಸಾಂಸ್ಕೃತಿಕ ಕಾರ್ಯಕ್ರಮ ನೋಡಿ ಸಂತೋಷ ಗೊಂಡರು, ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತ ಕ್ರಿಸ್ತನ ಜನನ ಹೊಸ ವರ್ಷದ ಆಗಮನವನ್ನು ಜಗತ್ತಿನ ಜನರೆಲ್ಲರೂ ಹರ್ಷದಿಂದ ಸ್ವಾಗತಿಸೋಣ ಪ್ರಪಂಚದಲ್ಲಿ ಸುಖಶಾಂತಿ, ಪ್ರಗತಿಯನ್ನು ಆ ಯೇಸು ಸ್ವಾಮಿ ದಯಪಾಲಿಸಲಿ ಎಂದು ಈ ಸಂದರ್ಭದಲ್ಲಿ ಸಂದೇಶ ನೀಡಿದರು ಸಂಸ್ಥೆಯ ಮುಖ್ಯಸ್ಥರಾದ ಸಿಸ್ಟರ್ ಶ್ರುತಿ, ಪ್ರಿನ್ಸಿಪಾಲ ಸಿಸ್ಟರ್ ಶರಣಲತಾ, ಸಿಸ್ಟರ್ ನಿಕಿತಾ ಹಾಗೂ ಸಿಬ್ಬಂದಿ ವರ್ಗದವರು ಭಾಗಿಯಾದ್ದರು.
