ಭಾರತದ ಐಕ್ಯತೆಗೆ ಒಂದು ರಾಷ್ಟ್ರೀಯ ಭಾಷೆ ಆವಶ್ಯಕ: ಡಾ. ಚವ್ಹಾಣ

ಭಾರತದ ಐಕ್ಯತೆಗೆ ಒಂದು ರಾಷ್ಟ್ರೀಯ ಭಾಷೆ ಆವಶ್ಯಕ: ಡಾ. ಚವ್ಹಾಣ

ಭಾರತದ ಐಕ್ಯತೆಗೆ ಒಂದು ರಾಷ್ಟ್ರೀಯ ಭಾಷೆ ಆವಶ್ಯಕ: ಡಾ. ಚವ್ಹಾಣ

ಕಲಬುರಗಿ: ಭಾರತದ ಐಕ್ಯತೆಗಾಗಿ ಒಂದು ಸಂವಿಧಾನ, ಒಂದು ರಾಷ್ಟ್ರ ಗಾನ, ಒಂದು ರಾಷ್ಟ್ರ ಧ್ವಜ, ಇದ್ದು, ಕೇವಲ ಒಂದು ರಾಷ್ಟ್ರ ಭಾಷೆ ಇಲ್ಲದ್ದು ವಿಷಾದನೀಯ ಎಂದು ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಪ್ರೇಮಚಂದ ಚವ್ಹಾಣ ಅವರು ನುಡಿದರು.

ನಗರದ ನೂತನ ವಿದ್ಯಾಲಯ ಪದವಿ ಕಾಲೇಜಿನ ಹಿಂದಿ ವಿಭಾಗವು ಆಯೋಜಿಸಿದ ವಿಶ್ವ ಹಿಂದಿ ದಿವಸ್ - 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತ ದೇಶವು ಅನೇಕ ಸಂಸ್ಕೃತಿ, ಉಡುಗೆ - ತೊಡುಗೆ ಜೊತೆಗೆ ವಿವಿಧ ಭಾಷೆಗಳನ್ನು ಹೊಂದಿದೆ. ನಮ್ಮ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಲು ನಮ್ಮದೇ ಒಂದು ರಾಷ್ಟ್ರೀಯ ಭಾಷೆಯ ಆವಶ್ಯಕತೆ ಇದೆ ಎಂದು ನುಡಿದರು. ಇಂದು ಹಿಂದಿ ವಿಶ್ವದಲ್ಲಿ 3ನೆಯ ಅತಿ ಹೆಚ್ಚು ಮಾತ ನಾಡುವ ಭಾಷೆಯಾಗಿದೆ. ವಿಶ್ವದಲ್ಲಿ ಸುಮಾರು 80 ಕೋಟಿ ಜನರು ಹಿಂದಿ ಬಲ್ಲವರಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ದಯಾನಂದ ಶಾಸ್ತ್ರಿಯವರು ಹಿಂದಿ ಇಂದು ವಿಶ್ವಕ್ಕೆ ಮಾದರಿಯಾಗಿದೆ ಹೊರಹೊಮ್ಮುತ್ತಿದೆ ಎಂದು ನುಡಿದರು. 

ಕಾರ್ಯಕ್ರಮದ ವೇದಿಕೆಯಲ್ಲಿ ಡಾ. ಯು.ಜಿ. ಸರದೇಸಾಯಿ, ಪ್ರಸನ್ನ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರೊ. ಶ್ರೀಪಾದ ಜೋಶಿ, ಡಾ. ಬಾಬುರಾವ್ ಸಜ್ಜನ್, ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ನಿರೂಪಣೆ ಸಂಸ್ಕೃತ ವಿಭಾಗದ ಡಾ. ವಿಷ್ಣು ಗುಂಡಗುರ್ಕಿ ಮಾಡಿದರು. ವಂದನಾರ್ಪಣೆಯನ್ನು ಡಾ. ಮಲ್ಲಿನಾಥ ತಳವಾರ ಮಾಡಿದರು. ಸ್ವಾಗತ ಗೀತೆಯನ್ನು ಕು. ಸ್ಪೂರ್ತಿ ಹಾಡಿದರು.