ವಚನ ಸಾಹಿತ್ಯ ವಿಶ್ವ ಶ್ರೇಷ್ಠ ಸಾಹಿತ್ಯ.
ವಚನ ಸಾಹಿತ್ಯ ವಿಶ್ವ ಶ್ರೇಷ್ಠ ಸಾಹಿತ್ಯ.
ಚಿಟಗುಪ್ಪ: ಶರಣರ ವಚನ ಸಾಹಿತ್ಯ ವಿಶ್ವ ಶ್ರೇಷ್ಠ ಸಾಹಿತ್ಯ,ಪ್ರಜಾಪ್ರಭುತ್ವ ಮೌಲ್ಯಗಳನ್ನು ಸಾರುವ ವಿಶ್ವ ಸಂವಿಧಾನವಾಗಿದ್ದು, ವಚನಗಳಲ್ಲಿರುವ ಅಂಶಗಳು ಸಂವಿಧಾನದ ಚೌಕಟ್ಟಿನಲ್ಲಿ ಕಾಣುತ್ತೇವೆ ಎಂದು ಚಿಟಗುಪ್ಪ ನಗರದ ಪಿಎಸ್ಐ ಭಾಷುಮಿಯಾ ಸರ್ ಹೇಳಿದರು.
ಕಂದಗೋಳ ಗ್ರಾಮದ ಪೂಜ್ಯ ಚನ್ನಬಸವ ಪಟ್ಟದ್ದೇವರು ಗುರುಕುಲ ಶಾಲೆಯಲ್ಲಿ ಅನುಭವ ಮಂಟಪ ಉತ್ಸವ ಅಂಗವಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಪಂಚಕ್ಕೆ ಸಮಾನತೆ ಸಂದೇಶ ಸಾರುವ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೊಟ್ಟ ಮೊದಲು ಬಾರಿ ಜಾಗತಿಕ ಪ್ರಪಂಚಕ್ಕೆ ಕೊಟ್ಟವರು ಅಣ್ಣ ಬಸವಣ್ಣನವರು. ಅನುಭವ ಮಂಟಪದ ಮೂಲಕ ಇಡೀ ಮನುಕುಲದ ಉದ್ಧಾರಕ್ಕಾಗಿ,ಸರ್ವರ ಕಲ್ಯಾಣಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ತಂದ ಕೀರ್ತಿ ಬಸವಣ್ಣನವರ ಆದಿಯಾಗಿ ಇಡೀ ಶರಣ ಸಂಕುಲಕ್ಕೆ ಸಲ್ಲುತ್ತದೆ.ವಚನಗಳಲ್ಲಿ ವಿಶ್ವಸಂಸ್ಥೆ ಘೋಷಿಸಿದ ಎಲ್ಲಾ ಮಾನವ ಹಕ್ಕುಗಳ ವಿಚಾರಗಳೆಲ್ಲವೋ ಸೇರಿವೆಎಂದರು.
ಕಾರ್ಯಕ್ರಮದ ಸಂಚಾಲಕರಾದ ಸಂಗಮೇಶ ಎನ್ ಜವಾದಿ ಮಾತನಾಡಿ ಬಸವಣ್ಣನವರು ಒಬ್ಬ ಪ್ರಜಾವಾದಿ, ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ಪ್ರತಿಪಾದಕ. ಪ್ರಜಾಪ್ರಭುತ್ವದ ಪಿತಾಮಹ. ಮ್ಯಾಗ್ನಕಾರ್ಟ್ ಒಪ್ಪಂದಕ್ಕಿಂತ ಅರ್ಧ ಶತಮಾನದ ಹಿಂದೆಯೇ ಕಲ್ಯಾಣದಲ್ಲಿ ಅನುಭವ ಮಂಟಪವೆಂಬ ವಿಶ್ವಮಾನ್ಯ ಪ್ರಜಾಪ್ರಭುತ್ವದ ಸಂಸತ್ತನ್ನು ನಿರ್ಮಿಸಿದರರು.ಇಂದು ವಿಶ್ವವು ಬಸವಣ್ಣನವರ
ಪ್ರಜಾಪ್ರಭುತ್ವ ವ್ಯವಸ್ಥೆ ಬಗೆ ಮಾತನಾಡುತ್ತದೆ. ಬಸವಣ್ಣನವರು ನೀಡಿರುವ ಪ್ರಜಾಪ್ರಭುತ್ವ ವಚನ ಸಾಹಿತ್ಯವನ್ನು ಅರಿತು ನಾವೆಲ್ಲರೂ ಬಾಳಬೇಕಾಗಿದೆ ಎಂದರು.
ಮುಖ್ಯೋಪಾಧ್ಯಾಯರಾದ ರೇಖಾ ಮಂಜುನಾಥ ಮಾತನಾಡಿ ಪ್ರಜಾಪ್ರಭುತ್ವ ಕಲ್ಪನೆಯ
ವಚನಗಳು ನಮ್ಮ ಬದುಕಿಗೆ ದಾರಿದೀಪವಾಗಿವೆ ಎನ್ನುವುದು ಸತ್ಯ. ಕಳಬೇಡ, ಕೊಲಬೇಡ ಎಂಬ ಸಪ್ತಶೀಲದ ವಚನವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯರಾದ ಬಂಡೆಪ್ಪ ಮೂಲೆಗೆ ಮಾತನಾಡಿ ಸಾಮರಸ್ಯ ಸಮೃದ್ಧ
ನಾಡು ಕಟ್ಟುವ ಕನಸು ಕಂಡು ಬಸವಣ್ಣನವರು,ಅದೇ ನಿಟ್ಟಿನಲ್ಲಿ ಪ್ರಜಾಪ್ರಭುತ್ವ ಸಿದ್ಧಾಂತವನ್ನು ಜಾಗತಿಕ ಮಟ್ಟದಲ್ಲಿ ಪ್ರತಿಪಾದಿಸಿದ್ದಾರೆ. ಸಹಬಾಳ್ವೆ,ಕಾಯಕ,ದಯೇ,ಕರುಣೆ, ದಾಸೋಹ, ಅರಿವು, ಸಮಾನತೆಯ ವೈಚಾರಿಕ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವ ದಳದ ತಾಲೂಕು ಅಧ್ಯಕ್ಷ ರಾಜಶೇಖರ ದೇವಣಿ, ಉಪಾಧ್ಯಕ್ಷ ಅನಿಲಕುಮಾರ ಸಿರಿಗಿರಿ, ಭೀಮಶೆಟ್ಟಿ ವಡ್ಡನಕೇರಾ, ಸಂಜುಕುಮಾರ ಸೇರಿದಂತೆ
ತಾಲೂಕು ಮಟ್ಟದ ವಿವಿಧ ಶಾಲಾ ಕಾಲೇಜು ಶಿಕ್ಷಕರು ಶಿಕ್ಷಕಿಯರು, ಗಣ್ಯರು, ವಿಧ್ಯಾರ್ಥಿಗಳು ಭಾಗವಹಿಸಿದ್ದರು.
ಇದೆ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ಪ್ರಧಾನ ಮಾಡಲಾಯಿತು.