ಚಿತ್ತಾಪುರದಲ್ಲಿ ಅಸಂಘಟಿತ ಕಾರ್ಮಿಕರಗೆ ಕಾನೂನು ಅರಿವು ನೆರವು ಕಾರ್ಯಗಾರ

ಚಿತ್ತಾಪುರದಲ್ಲಿ ಅಸಂಘಟಿತ ಕಾರ್ಮಿಕರಗೆ ಕಾನೂನು ಅರಿವು ನೆರವು ಕಾರ್ಯಗಾರ

ಚಿತ್ತಾಪುರದಲ್ಲಿ ಅಸಂಘಟಿತ ಕಾರ್ಮಿಕರಗೆ ಕಾನೂನು ಅರಿವು ನೆರವು ಕಾರ್ಯಗಾರ

 ಚಿತ್ತಾಪುರ್ ಆ ಸಂಘಟಿತ ಕಾರ್ಮಿಕರು ಕಾನೂನುಗಳನ್ನು ತಿಳಿದುಕೊಂಡು ಯೋಜನೆ ಉಪಯೋಗಗಳನ್ನು ಪಡೆಯಬೇಕೆಂದು ಕಲ್ಬುರ್ಗಿ ಉಪ ವಿಭಾಗದ ಕಾರ್ಮಿಕ ಅಧಿಕಾರಿಗಳಾದ ಶರಣಪ್ಪ ಹಳಿಮನಿ ಅವರು ಹೇಳಿದರು

 ಅವರು ಕರ್ನಾಟಕ ಸರ್ಕಾರ ಹಮ್ಮಿಕೊಂಡ ಕಾರ್ಮಿಕ ಇಲಾಖೆ ಜಿಲ್ಲಾ ಬಾಲಕಾರ್ಮಿಕ ಯೋಜನೆ ಸೊಸೈಟಿ ಕಲ್ಬುರ್ಗಿ ಮತ್ತು ಕಾರ್ಮಿಕ ಇಲಾಖೆ ಚಿತ್ತಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಮಿಕ ಇಲಾಖೆ ಅನುಷ್ಠಾನಗೊಳ್ಳುತ್ತಿರುವ ವಿವಿಧ ಕಾರ್ಮಿಕ ಕಾಯ್ದೆಗಳ ಯೋಜನೆಗಳು ಹಾಗೂ ಆ ಸಂಘಟನೆ ಕಾರ್ಮಿಕ ಯೋಜನೆಗಳ ಅನುಷ್ಠಾನ ಕುರಿತು ಒಂದು ದಿನದ ತಾಲೂಕ ಮಟ್ಟದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು

 ಕಾರ್ಮಿಕ ಇಲಾಖೆ ವಿವಿಧ ಯೋಜನೆಗಳು ಮತ್ತು ಕಾನೂನುಗಳನ್ನು ಬಹಳ ಜನರಿಗೆ ಗೊತ್ತಿಲ್ಲ ಅದಕ್ಕಾಗಿ ಆ ಸಂಘಟಿತ ಕಾರ್ಮಿಕರ ಕಾನೂನುಗಳು ಮತ್ತು ಸಂಘಟಿತ ಕಾರ್ಮಿಕ ಕಾನೂನುಗಳು ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು ಜಿಲ್ಲಾ ಮತ್ತು ತಾಲೂಕ ಮಟ್ಟದಲ್ಲಿ ಕಾರ್ಮಿಕರ ಕಾನೂನು ಮತ್ತು ಯೋಜನೆಗಳು ಒಂದು ದಿನ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಾರ್ಮಿಕರ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಕರೆ ನೀಡಿದರು

 ಸಂಘಟಿತ ಕಾರ್ಮಿಕರಿಗೆ ಮಾಲೀಕರು ಇರುತ್ತಾರೆ ಮತ್ತು ಸೇವಾ ಭದ್ರತೆನೀಡುತ್ತಾರೆ. ಆಸಂಘಟಿಕ ಕಾರ್ಮಿಕರಿಗೆ ಅವರೇ ಮಾಲೀಕರು ಸೇವಾ ಭದ್ರತೆಇರುವುದಿಲ್ಲ. ಆ ಸಂಘಟಿತ ಯೋಜನೆ ಅಡಿಯಲ್ಲಿ 20 ವರ್ಗಗಳಾದ ಹಮಾಲರು .ಗೃಹ ಕಾರ್ಮಿಕರು. ಟೇಲರ.ಅಗಸರು.ಅಕ್ಕಸಾಲಿಗರು.ಕಮ್ಮಾರ. ಕುಂಬಾರರು. ಕ್ಷೌರಿಕರು.ಭಟ್ಟಿ ಕಾರ್ಮಿಕರು. ಸಿನಿಕಾರ್ಮಿಕರು. ನೇಕಾರರು..ಬೀದಿವ್ಯಾಪಾರಿಗಳು. ಹೋಟೆಲ್ ಕಾರ್ಮಿಕರು. ಫೋಟೋಗ್ರಾಫಿಗಳು. ಸ್ವತಂತ್ರ ಲೇಖನ ಬರಹಗಾರ ರು. ಬಿಡಿಕಾರ್ಮಿಕರು. ಕಲ್ಯಾಣ ಮಂಟಪ ಕಾರ್ಮಿಕರು. ಸಭಾಭವನ ಕಾರ್ಮಿಕರು.ಟೆಂಟ್ ಪೆಂಡಲ್ ಕೆಲಸ ಮಾಡುವ ಕಾರ್ಮಿಕರು. ಸೇರಿದಂತೆ ವಿವಿಧ ವರ್ಗಗಳ ಜನರು ಈ ಒಂದುಯೋಜನೆಯ ಲಾಭ ಪಡೆದುಕೊಳ್ಳಬಹುದು ಆ ಸಂಘಟಿತ ಕಾರ್ಮಿಕರಿಗೆ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಅಡಿಯಲ್ಲಿ ಯೋಜನೆಯಲ್ಲಿ ಸ್ಮಾರ್ಟ್ ಕಾರ್ಡು ಪಡೆದುಕೊಳ್ಳಬೇಕೆಂದು ತಿಳಿಸಿದರು.

 ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಲ್ಬುರ್ಗಿ ಜಿಲ್ಲೆಯ ಹಿರಿಯ ಕಾರ್ಮಿಕ ನಿರೀಕ್ಷಕ ರವೀಂದ್ರ ಕುಮಾರ್ ಬಲ್ಲೂರ್. ಕಟ್ಟಡ ಕಾರ್ಮಿಕ ಸಂಘದ ತಾಲೂಕ ಅಧ್ಯಕ್ಷ ಅಬ್ದುಲ್ ಖಾಲಿದ್ ಮೇಮಾರ್.ರಾಷ್ಟ್ರ ಪ್ರಶಸ್ತಿ ವಿಜೇತ ಪಿಆರ್ ಪಾಂಡು. ಅಂಬೇಡ್ಕರ್ ಪ್ರಶಸ್ತಿ ವಿಜೇತ ಉದಯಕುಮಾರ್ ಸಾಗರ್. ಸುರೇಶ್ ಕುಡಿ ಮಾತನಾಡಿದರು.

 ಮುಖ್ಯ ಅತಿಥಿಗಳಾಗಿ ಬಾರ್ ರೆಸ್ಟೋರೆಂಟ್ ಅಸೋಸಿಯೇಷನ್ ತಾಲೂಕ ಅಧ್ಯಕ್ಷ ಸಾಬಣ್ಣ ವೈ ಕಾಶಿ. ಪತ್ರಕರ್ತ ಮಂಜುನಾಥ್ ಸ್ವಾಮಿ ಕಪಡ ಬಜಾರ್ ಅ ಸೋಸಿಯೇಷನ್ ನ ಅಧ್ಯಕ್ಷ ಅಮೂಲ್ ತ್ರಿಮಲ್. ಶಾಮಿಯಾನ್ ಡೆಕೋರೇಷನ್ ಅಧ್ಯಕ್ಷ ರಮೇಶ್ ಮತಗುಂಟಿ. ನಾಗಾವಿ ನಾಡಿನ ಛಾಯಾಗ್ರಕ ಸಂಘದ ಕಾರ್ಯದರ್ಶಿ ರವಿ ಪಂಚಾಳ್. ಭವಾನಿ ಪಬ್ಲಿಕ್ ಸಿಟಿ ಮಾಲೀಕ ರಾಜು ಬೆಣ್ಣೆ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕ ಕಾರ್ಮಿಕ ನಿರೀಕ್ಷಕ ವಿಕ್ರಂ ಬಡಿಗೇರ ವಹಿಸಿದರು ಸೇಡಂ ತಾಲೂಕು ಕಾರ್ಮಿಕ ನಿರೀಕ್ಷಕ ಶಿವರಾಜ್ ಪಾಟೀಲ್ ಸ್ವಾಗತಿಸಿದರು ಜಿಲ್ಲಾ ಬಾಲಕಾರ್ಮಿಕ ಯೋಜನೆ ಯೋಜನೆ ನಿರ್ದೇಶಕ ಸಂತೋಷ್ ಕುಲಕರ್ಣಿ ಅವರು ನಿರೂಪಿಸಿ ವಂದಿಸಿದರು.