ಒಳಮೀಸಲಾತಿ ಜಾರಿ ಮಾಡುವಂತೆ ಡಾ: ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ

ಒಳಮೀಸಲಾತಿ ಜಾರಿ ಮಾಡುವಂತೆ ಡಾ: ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ

ಕಲಬುರಗಿ ಜಿಲ್ಲಾ ಮಾದಿಗ ಸಮಾಜದ ಸಂಘಟನೆಗಳ ಒಕ್ಕೂಟದ ವತಿಯಿಂದ ಒಳಮೀಸಲಾತಿ ಜಾರಿ ಮಾಡುವಂತೆ ಡಾ: ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ

ಕಲಬುರಗಿ : ಜಿಲ್ಲಾ ಮಾದಿಗ ಸಮಾಜದ ಸಂಘಟನೆಗಳ ಒಕ್ಕೂಟದ ವತಿಯಿಂದ ಒಳಮೀಸಲಾತಿ ಜಾರಿ ಮಾಡುವಂತೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮಾರ್ಗದರ್ಶನ ನೀಡುವಂತೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಡಾ: ಮಲ್ಲಿಕಾರ್ಜುನ ಖರ್ಗೆ ಜೀ ರವರಿಗೆ ಮನವಿ ಪತ್ರ ನೀಡುವುದರೊಂದಿಗೆ ಅವರ ಜೊತೆ ಚರ್ಚಿಸಲಾಯಿತು. 

ರಾಜ್ಯದ ಮುಖ್ಯಮಂತ್ರಿಗಳು ಒಳಮೀಸಲಾತಿ ಬಗ್ಗೆ ವರಿಷ್ಟರೊಂದಿಗೆ ಚರ್ಚಿಸಿ ಮುಂದಿನ ನಿಲುವನ್ನು ತಿಳಿಸುತ್ತೇನೆಂದು ಹೇಳುತ್ತಿದ್ದಾರೆ ಎಂದು ನಾವು ಕೇಳಿದ್ದಕ್ಕೆ. ಅವರು ನಾನು ರಾಷ್ಟ್ರೀಯ ಅಧ್ಯಕ್ಷನಾಗಿರುವುದರಿಂದ ನಾನು ಒಂದು ರಾಜ್ಯದ ಬಗ್ಗೆ ಮಾತನಾಡುವುದಕ್ಕೆ ಆಗುವುದಿಲ್ಲ ಮತ್ತು ಆಯಾ ರಾಜ್ಯದ ಮುಖ್ಯಮಂತ್ರಿಗಳಿಗೆ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಆಯಾ ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ಅಧಿಕಾರ ಇದೆ ಎಂದು ಹೇಳಿರುವುದರೊಂದಿಗೆ ಎಲ್ಲಾ ನಾಯಕರ ಜೊತೆ ಚರ್ಚಿಸಿ ಒಳಮೀಸಲಾತಿ ಜಾರಿ ಮಾಡುವುದಾದರೆ ನಮ್ಮದೇನು ಅಭ್ಯಂತರ ಇರುವುದಿಲ್ಲ. ಒಂದೊAದು ರಾಜ್ಯದಲ್ಲಿ ಒಂದೊAದು ಸಮುದಾಯವು ಒಂದೊAದು ರೀತಿಯಲ್ಲಿ ಮೀಸಲಾತಿ ಪಡೆದುಕೊಳ್ಳುತ್ತಿದ್ದಾರೆ. ಅದಕ್ಕಾಗಿ ನಾನು ಯಾವುದೇ ರಾಜ್ಯದಲ್ಲಿ ಮೀಸಲಾತಿ ಬಗ್ಗೆ ಮಾತನಾಡುವುದಿಲ್ಲ. 

ಅದರಂತೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಿಗೆ ಯಾವುದೇ ಮಾರ್ಗದರ್ಶನ ನೀಡಿರುವುದಿಲ್ಲ ಮತ್ತು ವರಿಷ್ಟರ ಜೊತೆ ಚರ್ಚಿಸಿ ತೀರ್ಮಾನಿಸುತ್ತೇನೆ ಎಂದು ಹೇಳುತ್ತಿದ್ದ ಮುಖ್ಯಮಂತ್ರಿಗಳ ಮಾತಿಗೆ ತೆರೆ ಎಳೆದಂತಾಗಿದೆ. ಮತ್ತು ಇನ್ನೂ ಹಲವಾರು ವಿಷಯದ ಬಗ್ಗೆ ಚರ್ಚಿಸಲಾಯಿತು. 

ಈ ಸಂದರ್ಭದಲ್ಲಿ ದಶರಥ ಕಲಗುರ್ತಿ, ಲಿಂಗರಾಜ ತಾರಫೈಲ್, ಮಲ್ಲಿಕಾರ್ಜುನ ಜಿನಕೇರಿ, ಶ್ಯಾಮ್ ನಾಟೀಕರ್, ಗೋಪಿಕೃಷ್ಣ ಗುಡೇನವರ್, ಮಲ್ಲಪ್ಪ ಅಬಿಷ್ಯಾಳ, ಪರಮೇಶ್ವರ ಖಾನಾಪೂರ, ರಮೇಶ ವಾಡೇಕರ್, ರಾಜು ಕಟ್ಟಿಮನಿ, ಬಂಡೇಶ ರತ್ನಡಗಿ, ರಂಜೀತ ಮೂಲಿಮನಿ, ಗುಂಡು ಸಂಜ್ವಾರ, ಮಲ್ಲಪ್ಪ ಚಿಗನೂರ, ಶ್ರೀನಿವಾಸ ರಾಮನಾಳಕರ್, ಶ್ರೀಮಂತ ಭಂಡಾರಿ, ಪ್ರಕಾಶ ಮಾಳಗೆ, ಸಚಿನ ಕಟ್ಟಿಮನಿ, ದೇವಿಂದ್ರ ಹಸನಾಪೂರ, ಪ್ರೇಮ ಹಿಪ್ಪರಗಿ, ಮನೋಹರ ಬೀರನೂರ ಸೇರಿದಂತೆ ಹಿರಿಯ ನಾಯಕರು ಮತ್ತು ಯುವ ನಾಯಕರು ಭಾಗವಹಿಸಿದ್ದರು.