ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗೆ ರಾಧಿಕಾ ಆಯ್ಕೆ
ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗೆ ರಾಧಿಕಾ ಆಯ್ಕೆ
ನರೇಗಲ್ಲ: ನಂಜನಗೂಡಿನಲ್ಲಿ ಜರುಗಿದ ಕುಸ್ತಿ ಪಂದ್ಯಾವಳಿಯಲ್ಲಿ ನರೇಗಲ್ಲ ಪಟ್ಟಣದ ರಾಧಿಕಾ ವಿಶ್ವನಾಥ ತೊಂಡಿಹಾಳ ಉತ್ತಮ ಪ್ರದರ್ಶನ ನೀಡಿ ಬಹುಮಾನವಾಗಿ ಬೆಳ್ಳಿ ಗದೆಯನ್ನು ಪಡೆದಿದ್ದಾಳೆ. ಈ ಮೂಲಕ ಹರಿಯಾಣದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾಳೆ. ರಾಧಿಕಾ ತೊಂಡಿಹಾಳ ಪ್ರಸ್ತುತ ಬೆಳಗಾವಿಯ ಕ್ರೀಡಾ ವಸತಿ ಶಾಲೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾಳೆ. ಅವಳಿಗೆ ಸ್ಮಿತಾ ಪಾಟೀಲ ಅವರು ತರಬೇತಿ ನೀಡುತ್ತಿದ್ದಾರೆ.
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ
