ಚಬನೂರ: ಸಮಾನತೆಯ ದೃಷ್ಟಿಯೇ ಗುರುಗುಣ – ಉಜ್ಜಯಿನಿ ಜಗದ್ಗುರು ಡಾ. ಸಿದ್ದಲಿಂಗ ರಾಜ ದೇಶೀಕೇಂದ್ರ ಶಿವಾಚಾರ್ಯ

ಚಬನೂರ: ಸಮಾನತೆಯ ದೃಷ್ಟಿಯೇ ಗುರುಗುಣ – ಉಜ್ಜಯಿನಿ  ಜಗದ್ಗುರು ಡಾ. ಸಿದ್ದಲಿಂಗ ರಾಜ ದೇಶೀಕೇಂದ್ರ ಶಿವಾಚಾರ್ಯ

ಚಬನೂರ: ಸಮಾನತೆಯ ದೃಷ್ಟಿಯೇ ಗುರುಗುಣ – ಉಜ್ಜಯಿನಿ 

 ಜಗದ್ಗುರು ಡಾ. ಸಿದ್ದಲಿಂಗ ರಾಜ ದೇಶೀಕೇಂದ್ರ ಶಿವಾಚಾರ್ಯ

ತಾಳಿಕೋಟೆ: ಎಲ್ಲವರನ್ನೂ ಪ್ರೀತಿಯಿಂದ ಕಾಣುತ್ತಾ, ಭಿನ್ನತೆಯನ್ನು ಕಾಣದೆ ಸಮಾನತೆಯಿಂದ ನೋಡುವವನೇ ನಿಜವಾದ ಗುರು ಎಂದು ಉಜ್ಜಯಿನಿ ಶ್ರೀ ಜಗದ್ಗುರು ಡಾ. ಸಿದ್ದಲಿಂಗ ರಾಜ ದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರು ಆಶೀರ್ವಚನ ನೀಡಿದರು.

ತಾಳಿಕೋಟೆ ತಾಲೂಕಿನ ಚಬನೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕಲ್ಯಾಣ ಮಂಟಪ , ನೂತನ ಮಠ ಉದ್ಘಾಟನೆ ಹಾಗೂ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಮಲಿಂಗೇಶ್ವರರ ಲೀಲೆಗಳು ಜನರ ಹಿತ, ಏಳಿಗೆಗಾಗಿ ಹಗಲಿರುಳು ಶ್ರಮಿಸುವ ಸಂದೇಶವನ್ನು ನೀಡುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ 300ಕ್ಕೂ ಹೆಚ್ಚು ತಾಯಂದಿರು ಪುರಾಣ ಪ್ರವಚನದಲ್ಲಿ ಭಾಗವಹಿಸಿದರು. ರೈತ ಸಮಾವೇಶ ಹಾಗೂ ರೈತ ಯಾತ್ರೆಯನ್ನು 50 ಬಂಡಿಗಳೊಂದಿಗೆ ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ 400 ಸರ್ಕಾರಿ ನೌಕರರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು.

ಬೆಂಗಳೂರು ಕಲಕೇರಿ ಗ್ರಾಮದ ಪ್ರಭುಗೌಡ, ದಲಿತ ಯುವಕ, ಮುಂಬೈನಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಯುವಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಗೌರವ ನೀಡಿ ಸನ್ಮಾನಿಸಲಾಯಿತು. ಒಟ್ಟು 11 ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ನಡೆದವು.

ಕೊಡೆಕಲ್ ಚನ್ನಬಸವ ಶ್ರೀಗಳು, ದೇವರಹಿಪ್ಪರಗಿ ಶ್ರೀಗಳು, ಕಲಕೇರಿ ಶ್ರೀಗಳು, ಗಜದಂಡ, ನೀಲೂರ ಪೂಜ್ಯ ಶರಣಯ್ಯ ಸ್ವಾಮಿಗಳು, ಮಾಗಣಗೇರಿ ಶ್ರೀಗಳು ಪುರಾಣ ಆರಂಭಕ್ಕೆ ಚಾಲನೆ ನೀಡಿದರು. ಗದುಗಿನ ಶ್ರೀ ಪಂಚಾಕ್ಷರಿ ಪ್ರವಚನಕಾರರು ಪುರಾಣ ಪ್ರವಚನ ನಡೆಸಿದರೆ, ನಾಗರಾಜ್ ಹೂಗಾರ ಅವರ ಸಂಗೀತ ಕಾರ್ಯಕ್ರಮ ಭಕ್ತರನ್ನು ಆಕರ್ಷಿಸಿತು.

ಕಲಾವಿದರಾದ ಹಣಮಂತ ಲಮಾಣಿ,ಮಾನ್ಯ ಪಾಟೀಲ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಚಬನೂರ ಗ್ರಾಮದ ರಾಜಬೀದಿಯಲ್ಲಿ ಉಜ್ಜಯಿನಿ ಶ್ರೀ ಜಗದ್ಗುರು ಡಾ. ಸಿದ್ದಲಿಂಗ ರಾಜ ದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರ ಅಡ್ಡ ಪಲ್ಲಕ್ಕಿ ಉತ್ಸವ ಸಾವಿರಾರು ಭಕ್ತರು ,ಮುತ್ತೈದೆಯರು ಭಾಗವಹಿಸಿದ್ದರು,

ಶ್ರೀ ರಾಮಲಿಂಗೇಶ್ವರ ಮಠದ ಧರ್ಮಾಧಿಕಾರಿಗಳಾದ ಜ್ಯೋತಿಷ್ಯ ರತ್ನ ರಾಮಲಿಂಗಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಉದ್ಯಮಿ ಸಿ.ಬಿ. ಅಸ್ಕಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರಭು ಡೇರದ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಪ್ರಭುಗೌಡ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಪತ್ರಕರ್ತ ಶರಣಗೌಡ ಪಾಟೀಲ್ ಪಾಳಾ,ಅಂಬಾರಾಯ ಕೋಣೆ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.

ಮಠ ಮಂದಿರಗಳಲ್ಲಿ ಅನ್ನದ ಜೊತೆಗೆ ಜ್ಞಾನ ದಾಸೋಹ ನಡೆದರೆ, ಆ ಗ್ರಾಮ ಹಾಗೂ ದೇಶ ಮಾದರಿಯಾಗಿ ಬೆಳೆಯುತ್ತದೆ 

-ಉಜ್ಜಯಿನಿ ಜಗದ್ಗುರು ಡಾ. ಸಿದ್ದಲಿಂಗ ರಾಜ ದೇಶೀಕೇಂದ್ರ ಶಿವಾಚಾರ್ಯ