ಪೃಥ್ವಿ ಇರುವ ತನಕ ಲಿಂಗಾಯತ ಧರ್ಮ ಶಾಶ್ವತ: ಶರಣಬಸವ ಸ್ವಾಮೀಜಿ

ಪೃಥ್ವಿ ಇರುವ ತನಕ ಲಿಂಗಾಯತ ಧರ್ಮ ಶಾಶ್ವತ: ಶರಣಬಸವ ಸ್ವಾಮೀಜಿ

ಪೃಥ್ವಿ ಇರುವ ತನಕ ಲಿಂಗಾಯತ ಧರ್ಮ ಶಾಶ್ವತ: ಶರಣಬಸವ ಸ್ವಾಮೀಜಿ

ಕಲಬುರಗಿ, ಜುಲೈ 5:900 ವರ್ಷಗಳ ಹಿಂದೆ ಸಮಾನತೆಯ ದೀಪ ಹಚ್ಚಿದ ಜಗತ್ಪ್ರಸಿದ್ಧ ಅಣ್ಣ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಪೃಥ್ವಿ ಇರುವ ತನಕ ಶಾಶ್ವತವಾಗಿರುತ್ತದೆ ಎಂದು ಶರಣಬಸವ ಸ್ವಾಮೀಜಿ ಹೇಳಿದರು.

ನಗರದ ಬಸವ ಮಂಟಪದಲ್ಲಿ ಗುರುಬಸವ ಪ್ರತಿಷ್ಠಾನದ ನಾಲ್ಕನೇ ವಾರ್ಷಿಕೋತ್ಸವ ಹಾಗೂ ಲಿಂ ಶರಣ ಬಸವರಾಜ ನಾಗೂರ ಅವರ ಐದನೇ ಪುಣ್ಯಸ್ಮರಣಾ ಕಾರ್ಯಕ್ರಮದಲ್ಲಿ ನೇತೃತ್ವ ವಹಿಸಿ ಅವರು ಮಾತನಾಡಿದರು.

“ಲಿಂಗಾಯತ ಧರ್ಮವು ಯಾವುದೇ ಜಾತಿ, ಮತವಿಲ್ಲದೆ ಪ್ರೀತಿ ಮತ್ತು ಸಮಾನತೆಯ ಮೂಲಕ ಎಲ್ಲರನ್ನೂ ಅಪ್ಪಿಕೊಳ್ಳುವ ಧರ್ಮ. ಪೃಥ್ವಿ ಇರುವ ತನಕ ಲಿಂಗಾಯತ ಧರ್ಮ ಇರುತ್ತದೆ ಎಂದು ಹೇಳಿದರು. ಎಲ್ಲ ಶರಣರ ಜಯಂತಿಯಲ್ಲಿ ಬಸವಣ್ಣನವರ ಭಾವಚಿತ್ರ ಇಡಬೇಕು. ಆದರೆ ಬಸವ ಜಯಂತಿಯಂದು ಸಂಬಂಧ ಇಲ್ಲದ ಭಾವಚಿತ್ರಗಳನ್ನು ಹಾಕುವುದು ಸರಿಯಲ್ಲ,” ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಅಮರ್ನಾಥ್ ಪಾಟೀಲ್, ನೀಲಾಂಬಿಕ ಪೊಲೀಸ್ ಪಾಟೀಲ್, ಸಂಜಯ್ ಮಾಕಲ್, ಆರ್.ಜಿ. ಶಟಗಾರ, ಬಸವರಾಜ್ ಧೂಳಾಗುಂಡಿ, ಮಲ್ಲಿಕಾರ್ಜುನ್ ಪಾಲಾಮಾರ್ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶರಣಬಸವ ನಾಗೂರ ಅಧ್ಯಕ್ಷತೆ ವಹಿಸಿದ್ದರು. ರವೀಂದ್ರ ಶಾಬಾದಿ ವಂದಿಸಿದರು.

ಶರಣಗೌಡ ಪಾಟೀಲ್ ಪಾಳಾ, ಡಾ. ಶಿವರಂಜನ್ ಸತ್ಯಮ್ಮಪೇಟ, ಮಾಹಾಗಾಂಕರ್, ಬಸವಾದಿ ಶರಣರು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು