ಹಿಂದೂ ಸಾಮ್ರಾಜ್ಯ ಸ್ಥಾಪನೆಯ ಶ್ರೇಯಸ್ಸು ಶಿವಾಜಿ ಮಹಾರಾಜರಿಗೆ – ಪ್ರೊ. ಶಿವರಾಜ ಪಾಟೀಲ

ಹಿಂದೂ ಸಾಮ್ರಾಜ್ಯ ಸ್ಥಾಪನೆಯ ಶ್ರೇಯಸ್ಸು ಶಿವಾಜಿ ಮಹಾರಾಜರಿಗೆ – ಪ್ರೊ. ಶಿವರಾಜ ಪಾಟೀಲ
ಕಲಬುರಗಿ:ದಿನಾಂಕ: ೩ ಆಗಸ್ಟ್ ೨೦೨೫ “ಭಾರತದಲ್ಲಿ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದ ಕೀರ್ತಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ” ಎಂದು ಪ್ರೊ. ಶಿವರಾಜ ಪಾಟೀಲ ತಿಳಿಸಿದ್ದಾರೆ.
ನಗರದ ಕಲಾಮಂಡಳದಲ್ಲಿ ನಡೆದ ಕರ್ನಾಟಕ ವಿಕಾಸ ರಂಗ ಸಂಘದ ಕಲಬುರಗಿ ಜಿಲ್ಲಾ ಘಟಕ ಉದ್ಘಾಟನೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿವಾಜಿ ಮಹಾರಾಜರು ದೇಶ ಕಂಡ ಅಪ್ರತಿಮ ರಾಜರಾಗಿದ್ದರು. ತಮ್ಮ ತಾಯಿಯ ಆಶಯದಂತೆ ಹಿಂದೂ ಸಾಮ್ರಾಜ್ಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ಮಹಾನ್ ಶಕ್ತಿಯಾಗಿದ್ದರು. ಕೇವಲ ೫೩ ವರ್ಷಗಳ ಜೀವನದಲ್ಲಿಯೇ ಅವರು ಎಳವೆಯಲ್ಲಿಯೇ ಸಾಮ್ರಾಜ್ಯ ಸ್ಥಾಪಿಸಿ, ಯುದ್ಧನೀತಿ, ರಾಜತಂತ್ರದಲ್ಲಿ ಮಾದರಿ ಬದಲು ಇಟ್ಟಿದ್ದಾರೆ ಎಂದು ಹೇಳಿದರು.
ಇಂದು ವಿಯೆಟ್ನಾಂ ಸಂಸತ್ ಕೂಡ ಶಿವಾಜಿ ಮಹಾರಾಜರ ಭಾವಚಿತ್ರವನ್ನು ಗೌರವದಿಂದ ಪ್ರದರ್ಶಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅವರು ಔರಂಗಜೇಬನ ಸಾಮ್ರಾಜ್ಯವನ್ನೆ ಟಕ್ಕರ್ ಕೊಟ್ಟರು. ಅಫಜಲ್ ಖಾನ್ ನಯವಂಚನೆಯ ಮೂಲಕ ಶಿವಾಜಿ ಮಹಾರಾಜರನ್ನು ಕೊಲ್ಲಲು ಪ್ರಯತ್ನಿಸಿದ ಘಟನೆ ನೆನಪಿಸಿಕೊಂಡು, ಹುಲಿಯ ಉಗುರುಗಳಿಂದ ಅದನ್ನು ತಡೆದ ಮಹಾನ್ ಧೈರ್ಯದ ಕುರಿತಾಗಿ ವಿವರಿಸಿದರು.
ಶಿವಾಜಿ ಮತ್ತು ಅವರ ತಂದೆ ಸಂಭಾಜಿಯನ್ನು ಮುಘಲ್ ಸಾಮ್ರಾಜ್ಯವು ಬಂಧಿಸಿದ್ದನ್ನು, ಸಂಭಾಜಿಗೆ ನೀಡಲಾದ ಕ್ರೂರ ಚಿತ್ರಹಿಂಸೆ ಮತ್ತು ಕೊಲೆಯ ಕುರಿತು ಅವರು ಉಲ್ಲೇಖಿಸಿದರು.
ದಾದಾಜಿ ಕೊಂಡದೇವ, ಜ್ಞಾನೇಶ್ವರ, ತುಕಾರಾಮ ಅವರ ಮಾರ್ಗದರ್ಶನದೊಂದಿಗೆ ಶಿವಾಜಿ ಮಹಾರಾಜರು ಸಾಮ್ರಾಜ್ಯ ಕಟ್ಟಿದ ಮಹಾನ್ ಸಾಧನೆಯ ಬಗ್ಗೆ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಕೊನೇಕ ಅವರು ಕಾರ್ಯಕ್ರಮ ಮಾತನಾಡಿದರು,ಶರಣಪ್ಪ ತಳವಾರ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಆರ್.ಬಿ. ಜಗದಿಳೆ ಅವರು ಅತಿಥಿಗಳಾಗಿ, ಡಾ. ಎಸ್.ಎಸ್. ಗುಬ್ಬಿಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು,ಡಾ.ಚಿ.ಸಿ. ನಿಂಗಣ್ಣಅವರು ಪ್ರಾಸ್ತಾವಿಕವಾಗಿ ಮಾತನಾಡಿದರು ಶಂಕರ ಬಾಳಿ ಕಾರ್ಯಕ್ರಮವನ್ನು ನಿರೂಪಿಸಿದರು.
ಪ್ರೊ.ಬಿ.ಎಸ್.ಪಾಟೀಲ ಶರಣಗೌಡ ಪಾಟೀಲ ಪಾಳಾ, ವೆಂಕಟೇಶ್ ನೀರಡಗಿ,ಪಮನು ಸಗರ, ವಿಶ್ವನಾಥ್ ಬಕರೆ, ಸಿದ್ದರಾಮ ರಾಜಮಾನೆ,ಅನೀಲ ಸಕ್ರಿ,ಅಂಬಾರಾಯ ಕೋಣೆ, ರಾಜೇಂದ್ರ ಝಳಕಿ, ಹಣಮಂತರಾಯ ಮಂಗಾಣಿ,ಶರಣಯ್ಯ ಹಿರೇಮಠ,ಡಿ.ಎಮ್, ನದಾಫ್, ಇದ್ದರು