ಧಾರ್ಮಿಕ ಕ್ಷೇತ್ರಗಳು ಜಾತ್ಯಾತೀತತೆಯ ಸಂಕೇತ – ಸಚಿವ ಈಶ್ವರ ಖಂಡ್ರೆ
ಧಾರ್ಮಿಕ ಕ್ಷೇತ್ರಗಳು ಜಾತ್ಯಾತೀತತೆಯ ಸಂಕೇತ – ಸಚಿವ ಈಶ್ವರ ಖಂಡ್ರೆ
ಕಲಬುರಗಿ: ಭಾರತದ ಸಾಂಸ್ಕೃತಿಕ ಪರಂಪರೆ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಋಷಿ–ಮುನಿಗಳು, ಮಹಾತ್ಮರು ಜನಿಸಿದ ಈ ನಾಡಿನಲ್ಲಿ ಧಾರ್ಮಿಕ ಕ್ಷೇತ್ರಗಳು ಜಾತ್ಯಾತೀತತೆಗೆ ಸಂಕೇತಗಳಾಗಿವೆ ಎಂದುಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದ ಶ್ರೀನಿವಾಸ ಸರಡಗಿ ಮಹಾಲಕ್ಷ್ಮಿ ಶಕ್ತಿಪೀಠದ ಜಾತ್ರಾ ಮಹೋತ್ಸವ, ಕಲ್ಯಾಣ ಮಂಟಪ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಆಸ್ತಿಗಾಗಿ ಸಂಬಂಧಗಳನ್ನು ಒಡೆಯುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದು, ಸರ್ವಧರ್ಮಗಳಲ್ಲೂ ಅಶಾಂತಿ ಮೂಡಿಸುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಲಿಂಗ, ಮತ, ಭೇದ ಮರೆತು ಮಾನವ ಧರ್ಮವನ್ನು ಪಾಲಿಸಿದಾಗ ಮಾತ್ರ ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆ ಸಾಧ್ಯವಾಗುತ್ತದೆ. ಅದರಿಂದ ಒಳ್ಳೆಯ ರಾಷ್ಟ್ರ ನಿರ್ಮಾಣ ಸಾಧ್ಯವೆಂದು ಅಭಿಪ್ರಾಯಪಟ್ಟರು.
ವೀರಶೈವ ಧರ್ಮದ ಒಳಿತಿಗಾಗಿ ಹಾಗೂ ಅದರ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮುಗಳನಾಗಾಂವ ಶ್ರೀಗಳು, ನೀಲೂರ ಶರಣಯ್ಯ ಸ್ವಾಮಿಗಳು, ಭರತನೂರ ಶ್ರೀಗಳು, ಚಲಗೇರಿ ಶ್ರೀಗಳು, ವರನಾಳ ಶ್ರೀಗಳು, ಯಳಸಂಗಿ ಶ್ರೀಗಳು ಸಾನಿಧ್ಯ ವಹಿಸಿದ್ದರು.
ಮಹಾಲಕ್ಷ್ಮಿ ಶಕ್ತಿಪೀಠದ ಅಧಿಪತಿಗಳಾದ ಪರಮಪೂಜ್ಯ ಅಪ್ಪಾರಾವ್ ದೇವಿ ಮುತ್ಯಾ ಅವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ಶಾಸಕ ಬಸವರಾಜ ಮತ್ತಿಮೂಡ, ಶಾಸಕ ಸಿದ್ದು ಪಾಟೀಲ (ಹುಮನಾಬಾದ್), ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಚಂದು ಪಾಟೀಲ, ಶರಣು ಮೋದಿ, ಶಿವಕುಮಾರ್ ಪಾಟೀಲ ಮರತೂರ, ನೀಲಕಂಠರಾವ ಮೂಲಗೆ, ಸಂಗಮೇಶ ನಾಗನಹಳ್ಳಿ, ವಿನೋದ ಪಾಟೀಲ, ಸಂತೋಷ ಪಾಟೀಲ, ಅರುಣಕುಮಾರ ಪಾಟೀಲ ಕೊಡಲಹಂಗರಗಾ, ರಮೇಶ ತಿಪನೂರ, ಸಂತೋಷ ಪಾಟೀಲ ಸೇರಿದಂತೆ ಅನೇಕ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶಾಲಾಮಕ್ಕಳಿಂದ ಕಿರು ನಾಟಕ ಪ್ರದರ್ಶನ, ನೃತ್ಯ , ಸಂಗೀತ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು,
ಅನೇಕ ಗಣ್ಯಾತಿಗಣ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಅಣ್ಣಾರಾಯ ಸೇಳ್ಳಿಗಿ ಮತ್ತಿಮಡು ಅವರಿಂದ ಪ್ರಾರ್ಥನೆ ಗೀತೆ ಹಾಡಿದರು, ವಿಶ್ವನಾಥ ಪಾಟೀಲ ಸ್ವಾಗತಿಸಿದರು, ನವಲಿಂಗ ಪಾಟೀಲ್, ನಿರೂಪಿಸಿದರು.
ಶರಣಗೌಡ ಪಾಟೀಲ ಪಾಳಾ,ಗುರು ಹೂಗಾರ, ಅಂಬಾರಾಯ ಕೋಣೆ, ಸೇರಿದಂತೆ ಅನೇಕ ಉಪಸ್ಥಿತರಿದ್ದರು.
