ಕೇಂದ್ರದ ಬಜೆಟನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಬೇಡಿಕೆಗಳಿಗಾಗಿ ಮುತ್ತಣ್ಣ ಎಸ ನಡೆಗೇರಿ ಆಗ್ರಹ

ಕೇಂದ್ರದ ಬಜೆಟನಲ್ಲಿ ಕಲ್ಯಾಣ ಕರ್ನಾಟಕಕ್ಕೆ  ಬೇಡಿಕೆಗಳಿಗಾಗಿ  ಮುತ್ತಣ್ಣ ಎಸ ನಡೆಗೇರಿ ಆಗ್ರಹ

ಕೇಂದ್ರದ ಬಜೆಟನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಬೇಡಿಕೆಗಳಿಗಾಗಿ ಮುತ್ತಣ್ಣ ಎಸ ನಡೆಗೇರಿ ಆಗ್ರಹ

ಕಲಬುರಗಿ : ಕೇಂದ್ರ ಸರ್ಕಾರವು ಕಳೆದ ಹನ್ನೊಂದು ವರ್ಷಗಳಿಂದ ಕಲ್ಯಾಣ ಕರ್ನಾಟಕ ಮತ್ತು ವಿಶೇಷವಾಗಿ ಕಲಬುರಗಿ ಜಿಲ್ಲೆಗೆ ಅಭಿವೃದ್ಧಿ ವಿಷಯದಲ್ಲಿ ಮಲತಾಯಿ ಧೋರಣೆ ತೋರಿ ಅನ್ಯಾಯ ಮಾಡುತ್ತಿದ್ದು, ಈ ಕೂಡಲೇ ನಮ್ಮ ಭಾಗದ ಬೇಡಿಕೆಗಳನ್ನು ಈಡೇರಿಸಿ ನ್ಯಾಯ ದೊರಕಿಸಬೇಕು ಎಂದು ಮುತ್ತಣ್ಣ ಎಸ ನಡೆಗೇರಿ ಹೇಳಿದರು.

ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೈದರಾಬಾದ ನಿಜಮರ ಅಳ್ವಿಕೆಗೆ ಒಳಪಟ್ಟ ಕಲಬುರಗಿ ವಿಭಾಗವು ರಾಜ್ಯದಲ್ಲಿ ಮತ್ತು ದೇಶದಲ್ಲಿ ಅತಿ ಹಿಂದುಳಿದ ಪ್ರದೇಶವಾಗಿದೆ. ಕಲಬುರಗಿ ವಿಭಾಗ ಮತ್ತು ಜಿಲ್ಲೆಗೆ ಯಾವುದೇ ಯೋಜನೆ ಬರಬೇಕಾದರೆ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

 ಪ್ರಧಾನಿಯವರು ದೇಶದ ಪ್ರತಿಯೊಂದು ಜಿಲ್ಲೆಗಳನ್ನು ಸಬ್ ಕಾ ಸಾಥ ಸಬ್ ಕಾ ವಿಕಾಸ ಎನ್ನುವ ಘೋಷ ವಾಕ್ಯದೊಂದಿಗೆ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಕಲಬುರಗಿ ಜಿಲ್ಲೆಯ ವಿಷಯದಲ್ಲಿ ಮಾತ್ರ ಸಬ್ ಕಾ ಸಾಥ ಕೇವಲ ಮಾತಿನಲ್ಲಿ ನಡೆಯುತ್ತದೆ.ಕೇಂದ್ರ ಸರ್ಕಾರದ ಹಲವಾರು ಯೋಜನೆಗಳು ಕಲಬುರಗಿಗೆ ಬಂದಿಲ್ಲ ಮತ್ತು ಕೆಲವು ಬೇರೆ ಜಿಲ್ಲೆಗಳಿಗೆ ಹೋಗಿವೆ.

ಕಲಬುರಗಿ ಬರಬೇಕಾದ ಬೇಡಿಕೆ :-

2018 ರಲ್ಲಿನ ಕೇಂದ್ರ ಸರ್ಕಾರದ ಪಾರ್ಲಿಮೆಂಟರಿ ಅಕೌಂಟ್ ಕಮಿಟಿ ವರದಿಯ ಶಿಫಾರಸ್ಸು ಮತ್ತು 2020 ರ ಮದ್ರಾಸ ಉಚ್ಚ ನ್ಯಾಯಾಲಯದ ತೀರ್ಪುಗಳ ಪ್ರಕಾರ ದೇಶದ ಇ ಎಸ್ ಐ ಸಿ ಆಸ್ಪತ್ರೆಗಳನ್ನು ಏು ಆಗಿ ಮೇಲ್ದರ್ಜೆಗೆ ಏರಿಸಬೇಕು. ನಂಜುಂಡಪ್ಪ ಸಮಿತಿ ವರದಿಯು ಹಿಂದುಳಿದ ಕಲಬುರಗಿಯಲ್ಲಿ ಸ್ಥಾಪಿಸಬೇಕೆಂದು ಹೇಳಿದೆ.

ಮುಖ್ಯ ಮಂತ್ರಿಯಾಗಿದ್ದ ಶ್ರೀ ಬಿ ಎಸ ಯಡ್ಡಿಯೂರಪ್ಪನವರು ದಿನಾಂಕ 24-8-2020 ರಲ್ಲಿ ಕಲಬುರಗಿಯ ಇಎಸ್ಐ ಸಿ ಆಸ್ಪತ್ರೆಯನ್ನು ಏಮ್ಸ್ ಆಗಿ ಮೇಲ್ದರ್ಜೆಗೆ ಏರಿಸಬೇಕೆಂದು ಕೇಂದ್ರಕ್ಕೆ ಪತ್ರ ಬರೆದಿದ್ದರು. ಮತ್ತು 31-8-2020 ರಂದು ಬಳ್ಳಾರಿಯ ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯ ಉದ್ಘಾಟನೆ ಸಮಯದಲ್ಲಿ ಕೇಂದ್ರದ ಆರೋಗ್ಯ ಸಚಿವರಾಗಿದ್ದ ಶ್ರೀ ಹರ್ಷವರ್ಧನ ರವರಿಗೆ ವಿಡಿಯೋ ಸಂವಾದದಲ್ಲಿ ಮನವಿ ಮಾಡಿದ್ದರು. ಅದಕ್ಕೆ ಪೂರಕವಾಗಿ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವರು ದಿನಾಂಕ 3-9-2020 ರಂದು ಪತ್ರ ಮುಖೇನ ಆಶ್ವಾಸನೆ ನೀಡಿದ್ದರು. ಇವೆಲ್ಲವುಗಳಿಗೆ ಬದ್ಧವಾಗಿ ಕೇಂದ್ರ ಸರ್ಕಾರವು ಕೂಡಲೇ ಏಮ್ಸ್ ಸಂಸ್ಥೆಯನ್ನು ಕಲಬುರಗಿಯಲ್ಲಿ ಸ್ಥಾಪನೆ ಮಾಡಬೇಕು.

ಕರ್ನಾಟಕದಲ್ಲಿ ಏಮ್ಸ್ ಸ್ಥಾಪನೆಗೆ ಬೇಕಾದ ಎಲ್ಲ ರೀತಿಯ ಸೌಲಭ್ಯಗಳು ಕಲಬುರಗಿಯ ಇಎಸಐಸಿ ಯಲ್ಲಿವೆ. ಸುಸಜ್ಜಿತ ಆಸ್ಪತ್ರೆ, ವೈದ್ಯಕೀಯ, ಪ್ಯಾರಾ ಮೆಡಿಕಲ, ಡೆಂಟಲ, ನಸಿರ್ಂಗ ಮಹಾವಿದ್ಯಾಲಯಗಳಿವೆ. ಹೆಚ್ಚುವರಿ ಭೂಮಿಯು ಲಭ್ಯವಿದೆ. ಈಗಿನ ಅಂದಾಜು ಎರಡು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ಕಟ್ಟಿರುವ ಆಸ್ಪತ್ರೆಯನ್ನು ಮೇಲ ಮೇಲ್ದರ್ಜೆಗೆ ಏರಿಸಿದರೆ ಕೇಂದ್ರ ಸರ್ಕಾರಕ್ಕೆ ಆರ್ಥಿಕವಾಗಿ ಹೊರೆಯಾಗುವುದಿಲ್ಲ. ಕಲಬುರಗಿಯಲ್ಲಿ ಏಮ್ಸ್ ಸ್ಥಾಪನೆಯಿಂದ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಜನರಿಗೆ ಉತ್ತಮ ರೀತಿಯಲ್ಲಿ ಅರೋಗ್ಯ ಸೇವೆಗಳು ದೊರೆಯುತ್ತವೆ.

ರಾಷ್ಟ್ರೀಯ ಹೆದ್ದಾರಿಗಳ ಬೇಡಿಕೆಗಳು :-

ಆರ್ಥಿಕ ಅಭಿವೃದ್ಧಿಗೆ ರಸ್ತೆ ಸಂಪರ್ಕ ಜಾಲವು ಪ್ರಮುಖ ಪಾತ್ರ ವಹಿಸುತ್ತದೆ. ವಿಭಾಗೀಯ ಕೇಂದ್ರು ಅಬುರಗಿಯನ್ನು ಹೊರತು ಪಡಿಸಿ ರಾಜ್ಯದ ಪ್ರತಿಯೊಂದು ಜಿಲ್ಲೆಗಳು ನಾಲ್ಕು ಪಥದ ಹೆದ್ದಾರಿಗಳನ್ನು ಹೊಂದಿವೆ.

ಕಲ್ಯಾಣ ಕರ್ನಾಟಕ ಮತ್ತು ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಜೇವರ್ಗಿ ಸಿಂಧನೂರು ಬಳ್ಳಾರಿ ನಡುವಿನ ಉಷ್ಟ್ರೀಯ ಹೆದ್ದಾರಿ 150 ಎ ಮತ್ತು ಬೀದರ ವಿಜಯಪುರ ನಡುವಿನ ರಾಷ್ಟ್ರೀಯ ಹೆದ್ದಾರಿ 50 ನ್ನು ನಾಲ್ಕು ಪಥದ ಹೆದ್ದಾರಿಯಾಗಿ ಅಭಿವೃದ್ಧಿ ಮಾಡಬೇಕು. ಲಾತುರ ಆಳಂದ - ಕಲಬುರಗಿ - ಸೇಡಂ - ಕೋಡಂಗಲ ಮೆಹಬೂಬನಗರಗಳ ನಡುವಿನ ಹೆದ್ದಾರಿಯನ್ನು ಹೊಸ ಚತುಷ್ಪತ ರಾಷ್ಟ್ರೀಯ ಹೆದ್ದಾರಿಯಾಗಿ ನಿರ್ಮಾಣ ಮಾಡಬೇಕು. ಕಲಬುರಗಿ -యాదగిరి ರಾಯಚೂರು ನಡುವಿನ ರಾಷ್ಟ್ರೀಯ ಹೆದ್ದಾರಿ 150 ನ್ನು ನಾಲ್ಕು ಪಥ ಹೆದ್ದಾರಿಯಾಗಿ ಅಭಿವೃದ್ಧಿ ಮಾಡಬೇಕು. ಕಲಬುರಗಿ ನಗರಕ್ಕೆ ಎರಡನೇ ವರ್ತುಲ ರಸ್ತೆ ನಿರ್ಮಾಣ ಮಾಡಬೇಕು. ಶಹಾಬಾದ 02-

ರೈಲು ಸೇವೆಗಳ ಬೇಡಿಕೆಗಳು :-

1984 ರ ಸರೀನ ಸಮೀತಿಯ ಶಿಪ್ಪಾರಾಸ್ಸಿನ ಅನ್ವಯ 2014 ರಲ್ಲಿ ಶಂಕು ಸ್ಥಾಪನೆಯಾಗಿರುವ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿಯನ್ನು ಆರಂಭ ಮಾಡಬೇಕು. ರೈಲ್ವೆ ಮಂಡಳಿ ಫೈನಲ ಲೋಕೇಶನ ಸರ್ವೆ ಮಾಡಿರುವ ಕಲಬುರಗಿ ಲಾತುರ ನಡುವಿನ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಅನುದಾನ ನೀಡಬೇಕು. ಕಲಬುರಗಿಯಿಂದ ಬೆಂಗಳೂರು ಮಾರ್ಗವಾಗಿ ಮೈಸೂರಿಗೆ ಮತ್ತು ಕಲಬುರಗಿಯಿಂದ ರಾಯಚೂರು ಮಾರ್ಗವಾಗಿ ಮಂಗಳೂರಿಗೆ ಹೊಸ ರೈಲು ಸೇವೆಗಳನ್ನು ಪ್ರಾರಂಭ ಮಾಡಬೇಕು. ಬಳ್ಳಾರಿ ಚಿತ್ರದುರ್ಗ ಅರಸೀಕೆರೆ ಹಾಸನ

ವಿಮಾನ ಸೇವೆಗಳ ಬೇಡಿಕೆಗಳು :-

ಕಲಬುರಗಿ ವಿಮಾನಗಳ ಸಂಚಾರ ಪುನಃ ಆರಂಭಿಸಲು ಕೇಂದ್ರ ಸರ್ಕಾರವು ಕಲಬುರಗಿಗೆ ಉಡಾನ ಸೇವೆಯನ್ನು ಹತ್ತು ವರ್ಷಕ್ಕೆ ವಿಸ್ತರಣೆ ಮಾಡಬೇಕು.

ರಾಜ್ಯ ಸರ್ಕಾರವು ಬೆಳಗಾವಿ ಅಧಿವೇಶನದಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವಿಧರ್ಭ ಮಾದರಿ ವಿಶೇಷ ಅನುದಾನ ಕೇಳಲು ಕೇಂದ್ರ ಸರ್ಕಾರದ ಬಳಿ ನಿಯೋಗ ಹೋಗೋಣ ಅಂದಿದ್ದು, ಬಜೆಟ ಮಂಡನೆಗೂ ಮೊದಲು ನಿಯೋಗ ಹೋಗಬೇಕು.

ಅದೇ ರೀತಿಯಲ್ಲಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪ್ರಿಯಾಂಕ ಖರ್ಗೆಯವರು ಕಲಬುರಗಿಯ ಏಮ್ನ, ಚತುಷ್ಪತ ಹೆದ್ದಾರಿ, ರೈಲ್ವೆ ವಿಭಾಗ ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಬಳಿ ನಿಯೋಗ ಹೋಗಬೇಕು.

ಈಗಲಾದರೂ ಕೇಂದ್ರ ಸರ್ಕಾರ ನಮ್ಮ ಭಾಗದ ಬೇಡಿಕೆಗಳನ್ನು ಈಡೇರಿಸುವ ಮೂಲಕ ನಮ್ಮ ಅಭಿವೃದ್ಧಿಗೆ ವೇಗ ನೀಡಬೇಕೆಂದು ಈ ಪತ್ರಿಕಾಗೋಷ್ಠಿ ಮೂಲಕ ಕಲ್ಯಾಣ ಕರ್ನಾಟಕ ಮತ್ತು ಕಲಬುರಗಿ ಜಿಲ್ಲೆಯ ಜನರ ಪರವಾಗಿ ಅಗ್ರಹ ಮಾಡುತ್ತೇವೆ.

,ಬಾಬು ಮದನಕರ,ಮೋಹನ ಸಾಗರ,ದತ್ತು ಜಮಾದಾರ,ನಾಗು ಡೊಂಗರಗಾಂವ್,ಅವಿನಾಶ ಕಪನೂರ