ಮೂಕ ಪ್ರಾಣಿಗಳಿಗೆ ಮೀಸಲಿಟ್ಟ ಸರಕಾರಿ ಗೋಮಾಳ ಭೂಮಿ ಅಕ್ರಮ, ಒತ್ತುವರಿ : ಪ್ರತಿಭಟನೆ ಒತ್ತುವರಿಗೆ ಅಧಿಕಾರಿಗಳ ಕುಮಕ್ಕು : ಆರೋಪ
ಮೂಕ ಪ್ರಾಣಿಗಳಿಗೆ ಮೀಸಲಿಟ್ಟ ಸರಕಾರಿ ಗೋಮಾಳ ಭೂಮಿ ಅಕ್ರಮ, ಒತ್ತುವರಿ : ಪ್ರತಿಭಟನೆ
ಒತ್ತುವರಿಗೆ ಅಧಿಕಾರಿಗಳ ಕುಮಕ್ಕು : ಆರೋಪ
ಚಿಂಚೋಳಿ : ತಾಲೂಕಿನ ಕೋಟಗಾ ಗ್ರಾಮದ 156 ಸರ್ವೆ ನಂಬರನ 40 ಎಕರೆ ಸರಕಾರಿ ಗೋಮಾಳ ಗೈರಾಣಿ ಭೂಮಿಯನ್ನು ಕಾನೂನು ಉಲ್ಲಂಘಸಿ ಅಕ್ರಮವಾಗಿ ಒತ್ತುವರಿ ಮಾಡಿಕೊಳಲಾಗುತ್ತಿದೆ ಎಂದು ಆರೋಪಿಸಿ, ಆದಿವಾಸಿ ಅಲೆಮಾರಿ ಬುಡಕಟ್ಟು ಅಸಂಘಟಿತ ಕುರಿಗಾಯಿಗಳ ಮತ್ತು ಗೋಮಾಳ ಭೂಮಿ ಹೋರಾಟ ಸಮಿತಿ ತಾಲೂಕ ಆಡಳಿತ ಸೌಧ ತಹಸೀಲ್ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿತು.
ಕುರಿ, ಮೇಕೆ, ಧನ ಕರುಗಳು ಬದುಕಿ ಉಳಿಯಲು ಸರಕಾರ 40 ಎಕರೆ ಗೋಮಾಳ ಪ್ರದೇಶ ಭೂಮಿ ಮೀಸಲಿಟ್ಟಿದೆ. ಆದರೆ ಇದನ್ನು ದುಡ್ಡಿನ ಆಸೆಗಾಗಿ ಅಧಿಕಾರಿಗಳು ಗ್ರಾಮದ ಬಂಡವಾಳ ಶಾಹಿಗಳೊಂದಿಗೆ ಕೈ ಮಿಲಾಸಿ ಮೀಸಲಿಟ್ಟಿರುವ ಗೋಮಾಳ ಭೂಮಿಯನ್ನು ಅಕ್ರಮವಾಗಿ ಒತ್ತುವರಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ ಪ್ರತಿಭಟನೆಕಾರರು ದೂರಿದ್ದಾರೆ. ಸರಕಾರದ ಅಧಿಕಾರಿಗಳು ಉಸಿರಾಡುವ ಮೂಕ ಪ್ರಾಣಿಗಳು ಬದುಕಿ ಉಳಿಯಲು ಮೀಸಲಿಟ್ಟ ಗೋಮಾಳ ಪ್ರದೇಶದ ಸ್ಥಳವನ್ನು ಒತ್ತುವರಿ ಮಾಡಿಕೊಳ್ಳುತ್ತಿರುವ ಕೋಟಗಾ ಗ್ರಾಮದ ವ್ಯಕ್ತಿಯ ವಿರುದ್ದ ಕಾನೂನು ಕ್ರಮ ಜರುಗಿಸಬೇಕು. ದುಡ್ಡಿನ ಆಸೆಗಾಗಿ ಕರ್ತವ್ಯ ಮರೆತು ಅಕ್ರಮ ಒತ್ತುವರಿಗೆ ಸಹಕರಿಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಗೋಮಾಳ ಪ್ರದೇಶ ರಕ್ಷಿಸಬೇಕೆಂದು ಆಗ್ರಹಿಸಿ ಗ್ರೇಡ್-2 ತಹಸೀಲ್ದಾರ್ ವೆಂಕಟೇಶ ದುಗ್ಗನ್ ಅವರಿಗೆ ಸಂಘಟನೆ ಹೋರಾಟಗಾರ ಗೋಪಾಲ ಗಾರಂಪಳ್ಳಿ ನೇತೃತ್ವದಲ್ಲಿ ಗ್ರಾಮದ ಅಶೋಕ ಪೂಜಾರಿ, ಶಾಮರಾವ ಹಳ್ಳಿಖೆಡ, ಮಾಣಿಕ, ಭೀಮರಾವ, ಪಾಷಾ ಪಟೇಲ್, ಅನೀಲ್, ಮಲ್ಲಶೆಟ್ಟಿ, ನಾಗಪ್ಪ ನಾಟಿಕಾರ ಅವರುಗಳ ಸಹಿಯೊಂದಿಗೆ ಮನವಿ ಪತ್ರ ಸಲ್ಲಿಸಿ, ಒತ್ತಾಯಿಸಿದರು.
