ರೈತ ಸಂಘಟನೆ ಅಪಮಾನ ಮಾಡಿದ ಕನ್ನಡ ಪ್ರಭ ಪತ್ರಕರ್ತನ ವಿರುದ್ಧ ದೂರು

ರೈತ ಸಂಘಟನೆ ಅಪಮಾನ ಮಾಡಿದ ಕನ್ನಡ ಪ್ರಭ ಪತ್ರಕರ್ತನ ವಿರುದ್ಧ ದೂರು

ರೈತ ಸಂಘಟನೆ ಅಪಮಾನ ಮಾಡಿದ ಕನ್ನಡ ಪ್ರಭ ಪತ್ರಕರ್ತನ ವಿರುದ್ಧ ದೂರು 

ಯಡ್ರಾಮಿ:ರೈತ ಸಂಘಟನೆಗಳಿಗೆ ಅಪಮಾನ ಮಾಡಿದ  ಪತ್ರಕರ್ತನ ವಿರುದ್ಧ  ಆಗ್ರಹಿಸಿ ತಾಲ್ಲೂಕಿನ ರೈತಪರ ಕನ್ನಡಪರ ದಲಿತಪರ ಸಂಘಟನೆ ಸದಸ್ಯರು  ಪ್ರತಿಭಟನೆ ಮಾಡಿದರು.

ಸೋಮುವಾರ ಪಟ್ಟಣದ ಸರ್ದಾರ ಶರಣಗೌಡ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೂ  ರೈತ ವಿರೋಧಿ ಯಡ್ರಾಮಿ ತಾಲೂಕು ಕನ್ನಡ ಪ್ರಭ ಪತ್ರಕರ್ತನನ್ನು ಕೂಡಲೇ ಬಂಧನ ಮಾಡಿ  ಎಂದು ತಹಸೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆ ಉದ್ದೇಶಿಸಿ ಪ್ರತಿಭಟನಾಕಾರರು ಮಾತನಾಡಿ ಯಡ್ರಾಮಿ ತಾಲೂಕು ರೈತರ ಸಂಘಟನೆ ಅಧ್ಯಕ್ಷರುಗಳಿಗೆ 5 ಎಕರೆ ಜಮೀನು ಇಲ್ಲಾ ರೈತರ ಹೆಸರಿನ ಮೇಲೆ ಹಪ್ತ ವಸೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ ಎಂದು ವಾಟ್ಸಾಪ್ ಗ್ರೂಪ್ ನಲ್ಲಿ ಚರ್ಚೆ ಮಾಡಿದ್ದಾರೆ.

ಅದನ್ನು ಕೇಳಲು ಹೋದ ಸಂಘಟನೆ ಸದಸ್ಯರುಗಳ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಎಂದು ದೂರಿದರು.ಜನರಪರ, ರೈತರಪರ ಇರಬೇಕಾದ ಒಬ್ಬ ಪತ್ರಕರ್ತರಾಗಿ ಈ ರೀತಿ ರೈತರ ಪರವಾಗಿ ಕೆಲಸಾ ಮಾಡುವ ಸಂಘಟನೆ ಸದಸ್ಯರ ಇ ಪರಸ್ಥಿತಿಯಾದರೆ ಇನ್ನು ಸಾಮಾನ್ಯ ರೈತನಿಗೆ ನ್ಯಾಯ ದೊರಕಿಸುವ ಕೆಲಸಾ ಹೇಗೆ ಮಾಡಬಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂತಹ ಪತ್ರಕರ್ತನನ್ನು ಕೂಡಲೇ ಸಂಭಂದ ಪಟ್ಟ ಪತ್ರಿಕೆ ಸಂಪಾದಕರು ಪತ್ರಿಕೆಯಿಂದ ತೆಗೆದು ಹಾಕಬೇಕು ಎಂದರು. ಪತ್ರಕರ್ತನಿಗೆ ಪೋಲೀಸ್ ಇಲಾಖೆ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು  ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಸ್ತೆ ಮೇಲೆ ಟೈರಿಗೆ ಬೆಂಕಿ ಹಚ್ಚಿ ಆಕ್ರೋಷ ವ್ಯಕ್ತಪಡಿಸಿದರು.ಪ್ರತಿಭಟಣೆಯಲ್ಲಿ ಈರಣ್ಣ ಬಜಂತ್ರಿ,ಶಪೀ ಉಲ್ಲಾ ದಖನಿ,ವಿಶ್ವನಾಥ ಮಾಗಣಗೇರಿ,ಅಪ್ರೋಜ ಅತ್ನೂರ,ಬಸವರಾಜ ಕಲಕೇರಿ,ಚಂದ್ರು ಮಲ್ಲಾಬಾದಿ, ಲಾಳೆಮಶಾಖ ಮನಿಯಾರ,ಸಲಿಂ ಕಡಕೋಳ, ಅಜಮೀರ ಪಟೇಲ್ ಚಿಂಚೋಳಿ,ಜಗದೀಶ ಕಡ್ಲಿ,ಅಮರನಾಥ ಕುಳಗೇರಿ, ಕಮಲಾಬಾಯ,ಶ್ರೀಶೈಲ ತೆಲಗಬಾಳ,ಚಂದ್ರು ಬಳಬಟ್ಟಿ,ಅಲ್ಲಾಪಟೇಲ ಇಜೇರಿ, ಮಾಳು ಕರಗೊಂಡ, ಮಾನಪ್ಪ ಅಲ್ಲಾಪೂರ,ಗೊಲ್ಲಾಳಪ್ಪ ಚಿಲಾ,ಹಣಮಂತ ಗುತ್ತೇದಾರ ಇತರರು ಇದ್ದರು.