ಮೂಳೆ ಮಜ್ಜೆ ಕಸಿ ಶಸ್ತ್ರ ಚಿಕಿತ್ಸೆಗೆ ನೆರವಿನ ಹಸ್ತ ಚಾಚುವಂತೆ ವಿಕಲಚೇತನ ಮನವಿ
ಮೂಳೆ ಮಜ್ಜೆ ಕಸಿ ಶಸ್ತ್ರ ಚಿಕಿತ್ಸೆಗೆ ನೆರವಿನ ಹಸ್ತ ಚಾಚುವಂತೆ ವಿಕಲಚೇತನ ಮನವಿ
ಕಲಬುರಗಿ :ಬಾಚನಾಳ ಗ್ರಾಮದ ವಿಜಯಕುಮಾರ ತಂದೆ ಪರಮೇಶ್ವರ ಅವರ ಐದು ವರ್ಷದ ಪುತ್ರ ಮಂಜುನಾಥ್ ಎಂಬ ಬಾಲಕ ಜನನದ ಮೂರು ತಿಂಗಳಿನಿಂದಲೇ *ಥಾಲಸೆಮಿಯಾ* ಎಂಬ ಮಾರಣಾಂತಿಕ ರಕ್ತ ಕಾಯಿಲೆಯಿಂದ ಬಳಲುತ್ತಿದ್ದು, ಜೀವ ಉಳಿಸಿಕೊಳ್ಳಲು ಪ್ರತೀ ತಿಂಗಳು ರಕ್ತ ಏರಿಸುವುದು ಅನಿವಾರ್ಯವಾಗಿದೆ. ಇದಕ್ಕಾಗಿ ಪ್ರತೀ ತಿಂಗಳು ಸುಮಾರು 5 ರಿಂದ 6 ಸಾವಿರ ರೂಪಾಯಿ ವೆಚ್ಚವಾಗುತ್ತಿದ್ದು, ಈಗಾಗಲೇ ಚಿಕಿತ್ಸೆಗಾಗಿ 3 ರಿಂದ 4 ಲಕ್ಷ ರೂಪಾಯಿ ಸಾಲದ ಬಾಧೆ ಕುಟುಂಬದ ಮೇಲೆ ಬಿದ್ದಿದೆ.
ವಿಜಯಕುಮಾರ ಅವರು ವಿಕಲಚೇತನರಾಗಿದ್ದು, ಕುಟುಂಬದ ಸಂಪೂರ್ಣ ಜವಾಬ್ದಾರಿ ಪತ್ನಿಯ ಮೇಲಿದೆ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ಅವರ ಪತ್ನಿಗೆ ತಿಂಗಳಿಗೆ ಕೇವಲ 10 ಸಾವಿರ ರೂಪಾಯಿ ಸಂಬಳ ದೊರೆಯುತ್ತಿದ್ದು, ಅದರಲ್ಲಿ ಮಗನ ಚಿಕಿತ್ಸೆ ಹಾಗೂ ಕುಟುಂಬದ ಜೀವನ ನಿರ್ವಹಣೆ ಅತ್ಯಂತ ಕಷ್ಟಕರವಾಗುತ್ತಿದೆ.
ಇತ್ತೀಚೆಗೆ ಬೆಂಗಳೂರಿನ HCG ಕ್ಯಾನ್ಸರ್ ಕೇರ್ ಆಸ್ಪತ್ರೆಯ ವೈದ್ಯರು, ಮಂಜುನಾಥನ ಜೀವ ಉಳಿಸಲು ಮೂಳೆ ಮಜ್ಜೆ ಕಸಿ (Bone Marrow Transplant) ಶಸ್ತ್ರ ಚಿಕಿತ್ಸೆ ಅವಶ್ಯಕ ಎಂದು ತಿಳಿಸಿದ್ದು, ಇದಕ್ಕೆ ಸುಮಾರು 30 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ಹೇಳಿದ್ದಾರೆ. ಆದರೆ ಈಗಾಗಲೇ ಸಾಲದ ಒತ್ತಡದಲ್ಲಿರುವ ಈ ಕುಟುಂಬಕ್ಕೆ ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸುವುದು ಅಸಾಧ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಪತ್ರಿಕಾ ಗೋಷ್ಠಿಯ ಮೂಲಕ ರಾಜ್ಯದ ಜನತೆ, ಸಮಾಜ ಸೇವಕರು, ಸಂಘ–ಸಂಸ್ಥೆಗಳು, ದಾನಿಗಳು ಹಾಗೂ ಸರ್ಕಾರದ ಗಮನಕ್ಕೆ ತಂದು, ಮಂಜುನಾಥನ ಪ್ರಾಣ ಉಳಿಸಲು ನೆರವಿನ ಹಸ್ತ ಚಾಚುವಂತೆ ಕುಟುಂಬವು ಮನವಿ ಮಾಡಿಕೊಂಡಿದೆ.
ಮಾನವೀಯ ಮನಸ್ಸುಳ್ಳವರು ನೆರವು ನೀಡಲು ಮುಂದಾಗಿ, ಕೆಳಗೆ ನೀಡಿರುವ ಬ್ಯಾಂಕ್ ಖಾತೆಗೆ ದೇಣಿಗೆ ನೀಡುವಂತೆ ಕುಟುಂಬವು ಕೋರಿದೆ.
A/C64198555507
IFSC-SBIN0041110
State Bank of India
Branch Kamalapur
Phone-pay-8197021784
ವಿಳಾಸ,ವಿಜಯಕುಮಾರ ತಂದೆ ಪರಮೇಶ್ವರ
ಸಾ: ಬಾಚನಾಳ ತಾ.ಕಮಲಾಪುರ, ಮೂ. 8197021784
