ದಾಸಿಮಯ್ಯ ಸಂಸ್ಥೆಯಲ್ಲಿ, ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ

ದಾಸಿಮಯ್ಯ ಸಂಸ್ಥೆಯಲ್ಲಿ, ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ

ದಾಸಿಮಯ್ಯ ಸಂಸ್ಥೆಯಲ್ಲಿ, ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ 

ದಿ.9.11.24 ರಂದು ಸಂಜೆ 7 ಗಂಟೆಗೆ, ದಾಸಿಮಯ್ಯ ಕಾನೂನು ಸೇವಾ ಸಂಸ್ಥೆ ಕಾರ್ಯಾಲಯದಲ್ಲಿ 29 ನೇ ರಾಷ್ಟ್ರೀಯ ಕಾನೂನು ದಿನಾಚರಣೆ ಕಾರ್ಯಕ್ರಮ ಜರಗಿತ್ತು. 

ಪ್ರೊ.ಅನಾದಿ ಚಂದ್ರಶೇಖರ ಅವರನ್ನು ಸಂಸ್ಥೆಯ ಗೌರವಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಜೇ. ಎಸ್. ವಿನೋದ ಕುಮಾರ ತಿಳಿಸಿದರು.

ರಾಷ್ಟ್ರೀಯ ಕಾನೂನು ಸೇವೆಗಳ ದಿನದಂದು, ಕಾರ್ಯಕ್ರಮದಲ್ಲಿ, ಅವರನ್ನು ಗೌರವಿಸಿ, ಜವಾಬ್ದಾರಿಯನ್ನು ವಹಿಸಿಕೊಟ್ಟರು.

ನಂತರ ಮಾತನಾಡಿದ ಅವರು ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಯಲು ತನು, ಮನ, ಧನದಿಂದ ಸಮರ್ಪಕವಾಗಿ ಮುನ್ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ,

 ಆದರೆ ನಮಗೆ ಇತಿಹಾಸದ ಅರಿವು ಇರಬೇಕು ,ನೇಕಾರ ಸಮುದಾಯದ ನಾವುಗಳು ವಿಭಜನೆಯಾದರೆ ಶಕ್ತಿ ಹೀನರಾಗುತ್ತೇವೆ, ಸಮನ್ವಯ ಸಾಧಿಸಿ ಒಗ್ಗಟ್ಟಾದರೆ ಬಲಶಾಲಿಯಾಗುವುದರಲ್ಲಿ ಸಂಶಯವೇ ಬೇಡ ಎಂದು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥಾಪಕ ಅಧ್ಯಕ್ಷರಾದ ಶಿವಲಿಂಗಪ್ಪಾ ಅಷ್ಟಗಿ ಯವರು ಮಾತನಾಡುತ್ತ ಈ ಸಂಸ್ಥೆಗೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಪ್ತ ನೇಕಾರ ನ್ಯಾಯವಾದಿಗಳು ಮತ್ತು ಪಂಚ ಮಹಿಳಾ ನ್ಯಾಯವಾದಿಗಳು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯರು ಹಾಗೂ ಛಾಯಾಗ್ರಾಹಕರಾದ ರಾಜು ಕೋಷ್ಟಿ ಯವರು ವಂದಿಸಿದರು.