ಶ್ರೀ ಕ್ಷೇತ್ರ ಕೈವಾರದಲ್ಲಿ ಮಲ್ಲಾರ ಮಾಸಪತ್ರಿಕೆಯ ರಜತ ಸಂಚಿಕೆ ವಿಶೇಷಾಂಕ ಬಿಡುಗಡೆ :ಲೇಖಕರಿಗೆ ಗೌರವಾರ್ಪಣೆ'

'ಶ್ರೀ ಕ್ಷೇತ್ರ ಕೈವಾರದಲ್ಲಿ ಮಲ್ಲಾರ ಮಾಸಪತ್ರಿಕೆಯ ರಜತ ಸಂಚಿಕೆ ವಿಶೇಷಾಂಕ ಬಿಡುಗಡೆ :ಲೇಖಕರಿಗೆ ಗೌರವಾರ್ಪಣೆ'
ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲೂಕಿನ ಶ್ರೀ ಕ್ಷೇತ್ರ ಕೈವಾರದಲ್ಲಿ ಶ್ರೀ ಸದ್ಗುರು ಯೋಗಿ ನಾರೇಯಣ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವದ ಅಂಗವಾಗಿ ಸದ್ಗುರು ಶ್ರೀ ಯೋಗಿ ನಾರೇಯಣ ವರಕವಿಗಳ ಗುರು ಪೂಜಾ ಸಂಗೀತೋತ್ಸವದ ಸಂಭ್ರಮ.
ಕಳೆದ ಮೂರು ದಿನಗಳಿಂದ ನಡೆದ ಕಾರ್ಯಕ್ರಮದ ಸಮಾರೋಪದ ಅಂಗವಾಗಿ ಯೋಗಿ ನಾರೇಯಣ ಯತೀಂದ್ರರಿಗೆ ಭಕ್ತರ ಜಯ ಘೋಷದೊಡನೆ ವಿಶೇಷ ಪೂಜಾ ಕೈಂಕರ್ಯ ನೆರವೇರಿತು.
ಪೂಜ್ಯ ಧರ್ಮಾಧಿಕಾರಿಗಳಾದ ಡಾ ಎಂ ಆರ್ ಜಯರಾಮ್ ರವರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಕತ್ತರನ್ನು ಉದ್ದೇಶಿಸಿ ಧರ್ಮ ಚಿಂತನ ಸಭೆಯಲ್ಲಿ ಮಾತನಾಡುತ್ತಾ ಗುರುಪೂರ್ಣಿಮಾ ಮಹೋತ್ಸವದ ಮಹತ್ವ ತಿಳಿಸಿ ತಾತಯ್ಯನವರು ಆತ್ಮಜ್ಞಾನವನ್ನು ಪಡೆದು ಸಿದ್ದರಾಗಿ ಯೋಗಿಗಳಾಗಿ ಗಹನವಾದ ವೇದೋಪನಿಷತ್ತುಗಳ ಸಾರವನ್ನು ಸರಳ ಸುಂದರ ನುಡಿಯಲ್ಲಿ ನಮಗೆ ನೀಡಿ ಮುಮುಕ್ಷು ಮಾರ್ಗದಲ್ಲಿ ನಡೆಯುವ ಸಂದೇಶವನ್ನು ನೀಡಿ ಮಹದುಪಕಾರ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಯೋಗಿನಾರೇಯಣ ಇಂಡಾಲಜಿ ಕೇಂದ್ರದ ಆಶ್ರಯದಲ್ಲಿ ಕಳೆದ 25 ವರ್ಷಗಳಿಂದ ಪ್ರಕಟಗೊಳ್ಳುತ್ತಿರುವ ವ್ಯಕ್ತಿತ್ವ ವಿಕಸನ ಅಧ್ಯಾತ್ಮ ಮಾಸಪತ್ರಿಕೆ ' ಮಲ್ಲಾರ ' ರಜತ ಸಂಚಿಕೆ ವಿಶೇಷಾಂಕವನ್ನು ಲೋಕಾರ್ಪಣೆಗೊಳಿಸಿದರು.
ಡಾ.ಬಾಬು ಕೃಷ್ಣಮೂರ್ತಿ ರವರ ಸಂಪಾದಕತ್ವದಲ್ಲಿ ಕೈವಾರ ತಾತಯ್ಯನವರ ಸಾಹಿತ್ಯದ ಕುರಿತು ವಿವಿಧ ಆಯಾಮಗಳಲ್ಲಿ ಲೇಖನಗಳನ್ನು ಬರೆದ ಲೇಖಕರಾದ ಮೈಸೂರಿನ ಡಾ.ನೀ. ಕೃ.ರಾಮಶೇಷನ್, ಡಾ ಗುರುರಾಜ ಪೋಶೆಟ್ಟಿಹಳ್ಳಿ, ನಂ ನಾಗಲಕ್ಷ್ಮಿ, ಎನ್.ಎಸ್ ಶ್ರೀಧರ ಮೂರ್ತಿ, ಡಾ ಬೆಳವಾಡಿ ಮಂಜುನಾಥ್, ಕೆ ಭೀಮರಾವ್, ವಿದ್ವಾನ್ ವನರಾಶಿ ಬಾಲಕೃಷ್ಣ ಭಾಗವತರ್, ತಳಗವಾರ ಆನಂದ್, ಜಿ.ಸಿ ಸೋಮಶೇಖರ್ ಮೊದಲಾದವರನ್ನು ಗುರುರಕ್ಷೆ ವಸ್ತ್ರದೊಂದಿಗೆ ಗೌರವಿಸಿದರು.