ಸಮಾನತೆ ಮತ್ತು ನ್ಯಾಯದ ಹೋರಾಟದ ಪಥದಲ್ಲಿ ಬಿ. ಶ್ಯಾಮ ಸುಂದರ ಸಾಹೇಬರು : ಬಾಬುರಾವ ಯಡ್ರಾಮಿ
ಸಮಾನತೆ ಮತ್ತು ನ್ಯಾಯದ ಹೋರಾಟದ ಪಥದಲ್ಲಿ ಬಿ. ಶ್ಯಾಮ ಸುಂದರ ಸಾಹೇಬರು : ಬಾಬುರಾವ ಯಡ್ರಾಮಿ
ಕಲಬುರಗಿ: ನಗರದ ಅನ್ನಪೂರ್ಣ ಕ್ರಾಸ್‌ನಲ್ಲಿರುವ ಕಲಾ ಮಂಡಲದಲ್ಲಿ ಕರ್ನಾಟಕ ಸಮತಾ ಸೈನಿಕ ದಳ (ಕೆಎಸ್‌ಎಸ್‌ಡಿ) ಜಿಲ್ಲಾ ಸಮಿತಿಯ ವತಿಯಿಂದ ಸಮಾಜ ಸುಧಾರಕ ಶ್ರೀ ಬಿ. ಶ್ಯಾಮ ಸುಂದರ ಸಾಹೇಬರವರ 117ನೇ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಬಾಬುರಾವ ಯಡ್ರಾಮಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಿ. ಶ್ಯಾಮ ಸುಂದರ ಸಾಹೇಬರು ಡಾ. ಬಾಬಾಸಾಹೇಬ ಅಂಬೇಡ್ಕರರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳಿಗಾಗಿ ಹೋರಾಟ ನಡೆಸಿದವರು ಎಂದು ಹೇಳಿದರು.
ಇಂದಿನ ಯುವಕರು ಬೌದ್ಧ ಧರ್ಮದ ತತ್ವಾದರ್ಶಗಳನ್ನು ಅನುಸರಿಸಿ ಶಾಂತಿಪೂರ್ಣ ಹಾಗೂ ಸಮಾನತೆಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಭಾಷಣಕಾರರಾಗಿ ಆಗಮಿಸಿದ ಡಾ. ಪುಟ್ಟಮಣಿ ದೇವದಾಸ ಅವರು ಬಿ. ಶ್ಯಾಮ ಸುಂದರ ಅವರ ಹೋರಾಟದ ಕುರಿತು ಮಾತನಾಡಿ ಇನ್ನು ಮುಂದೆ ಎಲ್ಲರೂ ಶಿಕ್ಷಣಪಡೆದು ಜಾಗರುಕರಾಗಿ ಬಿ. ಶ್ಯಾಮ ಸುಂದರ ಅವರು ಮತ್ತು ಡಾ. ಬಾಬಾ ಸಾಬ ಅಂಬೇಡ್ಕರ ಹಾಗೂ ಬೌದ್ಧ ತತ್ವಗಳನ್ನು ನಮ್ಮ ಮನೆಯಲ್ಲಿ ಮತ್ತು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಅತಿಥಿಗಳಾಗಿ ಆಗಮಿಸಿದ ಡಾ. ದೇವೇಂದ್ರಪ್ಪ ಕಮಲಾಪುರ ಅವರು ಬಿ. ಶ್ಯಾಮ ಸುಂದರ ಅವರ ಹೋರಾಟದ ಕುರಿತು ಮಾತನಾಡಿದರು. ಹಿರಿಯ ವಕೀಲರಾದ ಚಂದ್ರಕಾಂತ ಗದ್ದಗಿ ಅವರು ಎಚ್ ಶ್ರೇಯಸ್ಕರ ಮತ್ತು ಬಿ. ಶ್ಯಾಮ ಸುಂದರ ಅವರ ಕುರಿತು ವಿವರವಾಗಿ ಹೇಳಿದರು.
ಪರ್ತಕರ್ತ ಶಿವರಾಯ ದೊಡಮನಿ ಮಾತನಾಡಿ ಮನೆಯಲ್ಲಿ ಎಲ್ಲರೂ ಹೊಂದಾಣಿಕೆಯಿಂದ ಇದ್ದು ಬೌದ್ಧ ತತ್ವಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಕೆಎಸ್‌ಎಸ್‌ಡಿ ರಾಜ್ಯ ಗೌರವ ಅದ್ಯಕ್ಷರಾದ ಶಂಕರ ಫಿರಂಗೆ ಬೀದರ ಇವರು ಮಾತನಾಡುತ್ತ ಬಿ ಶಾಮಸುಂದರವರು ನಿಜಾಮ ಸರಕಾರದಲ್ಲಿ ಸಭಾದ್ಯಕ್ಷರಾಗಿದ್ದು ಬಡವರಿಗಾಗಿ ಭೂ ಒಡೆತನ ಯೋಜನೆ ಸೌಲಭ್ಯಗಳನ್ನು ಜಾರಿಗೆತಂದರು. ಎಂದರು. ರಾಜ್ಯ ಉಪಾದ್ಯಕ್ಷರಾದ ಸಂಜೀವ ಟಿ ಮಾಲೆಯವರು ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿ ಬಿ ಶಾಮಸುಂದರ ಸಾಹೇಬರು ದೇವದಾಸಿ ಪದ್ಧತಿ ಮತ್ತು ದೇವಿಯ ಹರಕೆಯಂತಹ ಅನಿಷ್ಟ ಪದ್ಧತಿಗಳನ್ನು ನಿಲ್ಲಿಸಿದರು ಎಂದು ಹೇಳಿದರು.
ವೇದಿಕೆಯ ಮೇಲೆ ಕೆಎಸ್‌ಎಸ್‌ಡಿ ವಿಭಾಗೀಯ ಅಧ್ಯಕ್ಷರಾದ ಜೆ ಶಂಕರ ಕೊಪ್ಪಳ ಮತ್ತು ಗೌತಮಿ ಹಿರೋಳಿ, ಜಿಲ್ಲಾಧ್ಯಕ್ಷ ಈಲಣ್ಣ ಜಾನೆ, ಕಾರ್ಮಿಕ ಘಟಕದ ಅದ್ಯಕ್ಷ ವಿಜಯಕುಮಾರ ಉದ್ದಾ, ಶರಣು ಮುದ್ನಾಳ, ಮಲ್ಲಿಕಾರ್ಜುನ ಉದಯಕರ, ಮಲ್ಲು ನಂದುರ, ಪದ್ಮಾ ಅಟ್ಟುರ, ಇಂದುಬಾಯಿ ಭರತನುರ, ವಿಜಯಕುಮಾರ ಸಾವಳಗಿ, ಶಿವಮೂರ್ತಿ ಬಳಿಚಕ್ರ, ಅಮೃತ ನಾಯಕೊಡಿ ಇದ್ದರು. ಮಿಲಿಂದ ಕಣಮಸ್ ನಿರುಪಣೆ ಮಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಪ್ಪಾರಾವ ಭಾವಿಮನಿ ಸ್ವಾಗತಿಸಿದರು, ಮಹಾದೇವ ನಾಟಿಕರ ವಂದಿಸಿದರು. ಬೀದರ ಜಿಲ್ಲೆಯಿಂದ ಅನೇಕ ಕಾರ್ಯಕರ್ತರು ಆಗಮಿಸಿದರು.
