ನಾಲವಾರ ಶ್ರೀಕೋರಿಸಿದ್ಧೇಶ್ವರ ಮಠದಲ್ಲಿ ಕಳೆಗಟ್ಟಿದ ಶ್ರಾವಣ.

ನಾಲವಾರ ಶ್ರೀಕೋರಿಸಿದ್ಧೇಶ್ವರ ಮಠದಲ್ಲಿ ಕಳೆಗಟ್ಟಿದ ಶ್ರಾವಣ.

ನಾಲವಾರ ಶ್ರೀಕೋರಿಸಿದ್ಧೇಶ್ವರ ಮಠದಲ್ಲಿ ಕಳೆಗಟ್ಟಿದ ಶ್ರಾವಣ.

ಅ.29 ರಂದು ಅಯ್ಯಾಚಾರ,ಲಿಂಗಧಾರಣೆ, ಭಕ್ತರಿಗೆ ದೀಕ್ಷಾ ಕಾರ್ಯಕ್ರಮ.ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರ, ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ ಮಹಾ ಸಂಸ್ಥಾನ ಮಠದಲ್ಲಿ ನಡೆಯಲಿದೆ.

ಶ್ರಾವಣ ಮಾಸದ ಪ್ರಯುಕ್ತ ಪ್ರತಿವರ್ಷದ ಪದ್ಧತಿಯಂತೆ ಶ್ರಾವಣದ ಕೊನೆಯ ಗುರುವಾರ ಅಗಸ್ಟ್ 29 ರಂದು,ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ, ಜಂಗಮವಟುಗಳಿಗೆ ಅಯ್ಯಾಚಾರ, ದೀಕ್ಷೆ ಹಾಗೂ ಭಕ್ತರಿಗೆ ಲಿಂಗಧಾರಣೆ ಹಾಗೂ ಗುರುದೀಕ್ಷಾ ಕಾರ್ಯಕ್ರಮ ನಡೆಯಲಿದೆ ಎಂದು ಮಠದ ವಕ್ತಾರ ಮಹಾದೇವ ಕೆ ಗಂವ್ಹಾರ ತಿಳಿಸಿದ್ದಾರೆ.

ಪವಿತ್ರ ಶ್ರಾವಣ ಮಾಸದ ಅಂಗವಾಗಿ ನಾಲವಾರ ಶ್ರೀಮಠದ ಕೈಲಾಸ ಮಂಟಪದಲ್ಲಿ ಪ್ರತಿನಿತ್ಯ ಶ್ರೀ ಮಠದ ಪೀಠಾಧಿಪತಿಗಳಾದ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಇಷ್ಟಲಿಂಗ ಸಹಿತ ಮಹಾಪಾದಪೂಜೆಯು ಅತ್ಯಂತ ವೈಭವದಿಂದ ನಡೆಯು ಸಮಯದಲ್ಲಿ ಪ್ರಸಿದ್ಧ ಗಾಯಕರಿಂದ ಭಕ್ತಿಸಂಗೀತದೊಂದಿಗೆ ಸಿದ್ಧಸಿಂಹಾಸನಾರೂಢರಾಗಿ ಪೂಜೆಯಲ್ಲಿ ಪಾಲ್ಗೊಳ್ಳುವ ಶ್ರೀಗಳ ಇಷ್ಟಲಿಂಗ ಸಹಿತ ಮಹಾಪಾದಪೂಜೆ ಭಕ್ತಸಮೂಹವನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಪ್ರತಿವರ್ಷದ ಪದ್ಧತಿಯಂತೆ ಈ ವರ್ಷವೂ ಕೂಡಾ ಕೋರಿಸಿದ್ಧೇಶ್ವರರ ಕರ್ತೃ ಗದ್ದುಗೆ ಹಾಗೂ ಪೂಜ್ಯರ ದರ್ಶನಕ್ಕಾಗಿ ನಾಡಿನ ವಿವಿಧ ಭಾಗಗಳ ಸಾವಿರಾರು ಭಕ್ತರು ತಂಡೋಪತಂಡವಾಗಿ ಪಾದಯಾತ್ರೆಯ ಮೂಲಕವಾಗಿ ಶ್ರೀ ಮಠಕ್ಕೆ ಆಗಮಿಸುತ್ತಿದ್ದಾರೆ.

ಶ್ರೀಮಠದ ದಾಸೋಹಕ್ಕೆ ಸಲ್ಲಿಸಲು ಧಾನ್ಯಗಳನ್ನು ತುಂಬಿದ ಚೀಲಗಳನ್ನು ಭುಜದ ಮೇಲೆ ಹೊತ್ತುಕೊಂಡು,ಮಳೆ-ಗಾಳಿಯ ಮಧ್ಯೆಯೂ ಕುಗ್ಗದೇ ಪಾದಯಾತ್ರೆ ಮೂಲಕ ಆಗಮಿಸುವ ದೃಶ್ಯ ಭಕ್ತರ ಕಣ್ಮನ ಸೆಳೆಯುತ್ತದೆ 

ಗುರುವಾರ ನಡೆಯುವ ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ ಹಾಗೂ ಲಿಂಗಧಾರಣೆ ಮತ್ತು ಗುರುದೀಕ್ಷಾ ಕಾರ್ಯಕ್ರಮದ ಸದುಪಯೋಗವನ್ನು ಸದ್ಭಕ್ತರು ಪಡೆದುಕೊಳ್ಳಬೇಕೆಂದು ಮಹಾದೇವ ಗಂವ್ಹಾರ ಕೋರಿದ್ದಾರೆ.