ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮ
ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮ
ಕಲಬುರಗಿ: ನಗರದ ಕುಸನೂರ ರಸ್ತೆಯಲ್ಲಿರುವ ವಿವಿಎಸ್ ಮಿಡಿಯಾ ಸಭಾಂಗಣದಲ್ಲಿ ಜನಪ್ರಿಯ ಸಾಂಸ್ಕೃತಿಕ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮ ಜರುಗಿತು.
ಜನಪ್ರಿಯ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಶಾಂತಲಿAಗಯ್ಯ ಎಸ್. ಮಠಪತಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕಾರಿಣಿ ಸಮಿತಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸದಸ್ಯೆ ಶ್ರೀಮತಿ ಜ್ಯೋತಿ ಎಂ. ಮರಗೋಳ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿ, ಇವತ್ತಿನ ಮಕ್ಕಳಲ್ಲಿ ಸಾಂಸ್ಕೃತಿಕ ಕಲೆಗಳ ಅರಿವು ಮೂಡಿಸುವದು ಅಗತ್ಯವಿದೆ ಎಂದರು. ಮುಖ್ಯ ಅತಿಥಿಗಳಾಗಿ ವಿವಿಎಸ್ ಮಿಡಿಯಾ ವ್ಯವಸ್ಥಾಪಕ ವಿಜೇಂದ್ರ ಕೊಡ್ಲಾ ಹಾಗೂ ಅತಿಥಿಗಳಾಗಿ ಡಾ. ಅಶೋಕ ಶಟಕಾರ ಅವರು ಕಾರ್ಯಕ್ರಮದ ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಶಾಸ್ತ್ರೀಯ ನೃತ್ಯ ಕಲಾವಿದೆ ಕು. ಅಕ್ಷರ ರಾಜಶೇಖರ್ ಅಣಕಲ್ ಭರತನಾಟ್ಯ ಪ್ರದರ್ಶಿಸಿದರು. ಆಕಾಶವಾಣಿಯ ಕಲಾವಿದ ವೀರಭದ್ರಯ್ಯ ಸ್ಥಾವರ ಮಠ ಅವರಿಂದ ವಚನ ಗಾಯನ, ಬಸಯ್ಯ ಬಿ ಗುತ್ತೇದಾರ್ ಅವರಿಂದ ಸುಮಗ ಸಂಗೀತ ಕಾರ್ಯಕ್ರಮಗಳು ಜರುಗಿ ಎಲ್ಲರನ್ನು ಮಂತ್ರಮುಗ್ಧರಾಗಿಸಿದವು. ಇದಾದ ನಂತರ ಕು. ಶ್ರೀಶಾ ಶಿವರಾಜ್ ಚವ್ಹಾಣ್ ಹಾಗೂ ಸಂಗಡಿಗರಿAದ ಸಾಮೂಹಿಕ ಬಂಜಾರಾ ನೃತ್ಯ ಮತ್ತು ಕು. ಪ್ರೀತಿ ದೇವರಾಜ್ ರಾಠೋಡ್ ಅವರಿಂದ ಜಾನಪದ ನೃತ್ಯ ಪ್ರದರ್ಶನಗೊಂಡು ಎಲ್ಲರ ಗಮನ ಸೆಳೆದವು. ಕಾರ್ಯಕ್ರಮದ ಕೊನೆಯಲ್ಲಿ ಚಂದ್ರಶೇಖರ ಪಾಟೀಲ ರಚಿಸಿದ ಟಿಂಗರ್ ಬುಡ್ಡಾ ನಾಟಕವನ್ನು ಮಹೇಶ ಗುತ್ತೆದಾರ ಹಾಗೂ ತಂಡದವರು ಅಭಿನಯಿಸಿ ಜನಪದ ಸೊಗಡನ್ನು ರಂಗದ ಮೇಲೆ ಪಸರಿಸಿದರು. ಕಾರ್ಯಕ್ರಮವನ್ನು ಮಣಿಕಂಠ ಮಠಪತಿ ನಿರೂಪಿಸಿದರು. ಗಂಗೋತ್ರಿ ಮಠಪತಿ ವಂದಿಸಿದರು.