ಶಬನಮ್ ಟ್ರಸ್ಟ್ ವತಿಯಿಂದ ನಿಸಾರ್ ಅಹಮದ್ ಸಾಹಿತ್ಯದ ಜ್ಞಾಪಕೋತ್ಸವ

ಶಬನಮ್ ಟ್ರಸ್ಟ್ ವತಿಯಿಂದ ನಿಸಾರ್ ಅಹಮದ್ ಸಾಹಿತ್ಯದ ಜ್ಞಾಪಕೋತ್ಸವ

ದಿನಾಂಕ 01-12-2025 ರಂದು ಬೀದರನ ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (ನೋಂ) ಭಾಲ್ಕಿ ಅವರು ಕೆ ಎಸ್ ನಿಸಾರ್ ಅಹಮದ್ ಅವರ ಬದುಕು ಬರಹ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಉದ್ಘಾಟಕರಾದ ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಉಪ ಪ್ರಾಚಾರ್ಯರಾದ ಪ್ರೊ ಸೋಮನಾಥ ಬಿರಾದಾರ ಅವರು ಮಾತನಾಡುತ್ತಾ ಕವಿಗಳು, ಸಾಹಿತಿಗಳು, ಅಮರರು. ಅವರ ಬದುಕು ಮತ್ತು ಸಾಹಿತ್ಯ ವಿಶಿಷ್ಟವಾದದ್ದು. ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಮತ್ತೆ ಮತ್ತೆ ಪರಿಚಯಿಸಬೇಕು. ಕೆ ಎಸ್ ನಿಸಾರ್ ಅಹಮದ ಅವರ ಸಾಧನೆಗಳು ಜನಪ್ರಿಯವಾಗಿವೆ. ಅವರನ್ನು ಶ್ಲಾಘನೆ ಮಾಡುವದು ಮುಖ್ಯ ಎಂದು ನುಡಿದರು

ವಿಶೇಷ ಉಪನ್ಯಾಸ ಉದಯೋನ್ಮುಖ ಬಹರಗಾರರಾದ ಪ್ರೇಮ್ ಅವಿನಾಶ್ ಅವರು ಮಾತನಾಡುತ್ತಾ ಕೆ ಎಸ್ ನಿಸಾರ್ ಅಹಮದ್ ಅವರ ಜೀವನ ತುಂಬ ಕಷ್ಟಕರವಾಗಿತ್ತು. ಅವರ ಬರಹಗಳು ತುಂಬಾ ಜನಪ್ರಿಯವಾಗಿವೆ. ನಿತ್ಯೋತ್ಸವ ಗೀತೆ ಅನೇಕ ಸಲ ಮರು ಮುದ್ರಣ ಪಡೆದುಕೊಂಡಿವೆ. ಅವರು ದಸರಾ ಉತ್ಸವದ ಉದ್ಘಾಟನೆಯನ್ನು ಮಾಡಿದ್ದಾರೆಂದು ಹೇಳಲು ಹೆಮ್ಮೆ ಆಗುತ್ತದೆಂದು ಹೇಳಿದರು.

ಆಶಯ ನುಡಿಯನ್ನು ನುಡುದ ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ ಮಹಾನಂದ ಮಡಕಿಯವರು ಮಾತನಾಡುತ್ತಾ ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (ನೋಂ) ಭಾಲ್ಕಿ ಅವರು ಅನೇಕ ಸಾಹಿತ್ಯದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳಿಗೆ ಸಾಹಿತ್ಯದ ಜ್ಞಾನವನ್ನು ಹಂಚುತ್ತಿದ್ದಾರೆ. ಅವರ ಕಾರ್ಯಕ್ರಮಗಳು ಬೀದರ್ ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜುಗಳಲ್ಲಿ ಹಮ್ಮಿಕೊಂಡಿದ್ದಾರೆ. ಅದರಿಂದ ಸಾಹಿತ್ಯದ ಪರಿಚಯ ಆಗುತ್ತಿರುವದು ಖುಷಿಯಾಗುತ್ತಿದೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (ನೋಂ)ನ ಅಧ್ಯಕ್ಷರಾದ ಡಾ ಮಕ್ತುಂಬಿ ಎಂ ಅವರು ಮಾತನಾಡುತ್ತಾ ಮಕ್ಕಳಿಗೆ ಸಾಹಿತ್ಯ ಅರಿವು ಮೂಡಿಸುವದು ಅನಿವಾರ್ಯವಾಗಿದೆ. ಓದುವ ಹವ್ಯಾಸ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಾಯವಾಗುತ್ತವೆ ಎಂದು ನುಡಿದರು.

ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಡಾ ರಾಮಚಂದ್ರ ಗಣಾಪೂರ ಅವರು ಮಾತನಾಡುತ್ತಾ ಕೆ ಎಸ್ ನಿಸಾರ್ ಅಹಮದ್ ಅವರ ಬಗ್ಗೆ ಪಿಎಚ್ ಡಿ ಮಾಡುವಾಗ ನನಗೆ ತುಂಬಾ ಸಹಾಯ ಮಾಡಿದ್ದಾರೆ ಅವರನ್ನು ಎಂದು ಮರೆಯುವಂತಿಲ್ಲ. ಅವರ ಬದುಕು ತುಂಬಾ ಸರಳವಾಗಿತ್ತು. ಅವರ ಸರಳ ವ್ಯಕ್ತಿತ್ವ ಎಲ್ಲರನ್ನೂ ಆಕರ್ಷಿಸುತ್ತದೆ ಎಂದು ನುಡಿದರು.

ಬೀದರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಟಿ ಎಂ ಮಚ್ಚೆಯವರು ಮಾತನಾಡುತ್ತಾ ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (ನೋಂ)ನ ಕಾರ್ಯಕ್ರಮಗಳು ಜನಮನ್ನಣೆಯನ್ನು ಪಡೆತ್ತಿವೆ. ಮಕ್ಕಳಿಗೆ ತುಂಬಾ ಸಹಾಯವಾಗುತ್ತಿವೆ ಇಂತಹ ಕಾರ್ಯಕ್ರಮಗಳು ಮೇಲಿಂದಮೇಲೆ ಆಗುತ್ತಿರಬೇಕು ಎಂದು ನುಡಿದರು.

ಪ್ರಾರ್ಥನೆ ನೇರವೆಸಿದವರು ಅಕ್ಷತಾ ಚನ್ನಪ್ಪನಿರೂಪಣೆ ಶ್ರೀ ಜಗನಾಥ ಕಮಲಾಪುರೆ ಅವರು ನಡೆಸಿಕೊಟ್ಟರು.ಡಾ ಸಂಗೀತಾ ಮಾನಾ ಅವರು ಸ್ವಾಗತಿಸಿದರು. ಶ್ರೀ ಮಲ್ಲಯ್ಯ ಮಠಪತಿ ಅವರು ವಂದಿಸಿದರು.