ಕಲಬುರಗಿ ಅಭಿವೃದ್ಧಿಪರ ಸಮಿತಿ ವತಿಯಿಂದ ಪಾಲಿಕೆ ಆಯುಕ್ತರಿಗೆ ಹಾಗೂ ಅವರಿಗೆ ಮನವಿ

ಕಲಬುರಗಿ ಅಭಿವೃದ್ಧಿಪರ ಸಮಿತಿ ವತಿಯಿಂದ ಪಾಲಿಕೆ ಆಯುಕ್ತರಿಗೆ ಹಾಗೂ ಅವರಿಗೆ ಮನವಿ

ಕಲಬುರಗಿ ಅಭಿವೃದ್ಧಿಪರ ಸಮಿತಿ ವತಿಯಿಂದ ಪಾಲಿಕೆ ಆಯುಕ್ತರಿಗೆ ಹಾಗೂ ಅವರಿಗೆ ಮನವಿ

ಕಲಬುರಗಿ: ವಲಯ ಕಛೇರಿ 2ರಿಂದ ವಲಯ ಕಚೇರಿ ವರ್ಗಾವಣೆಯಾಗಿ ಬಿಡುಗಡೆ ಗೊಂಡಿರುವ ರವೀಂದ್ರ ಚವ್ಹಾಣ ಕಿರಿಯ ಅಭಿಯಂತರರು ನಿರ್ವಹಿಸುತ್ತಿರುವ ಕಾಮಗಾರಿ ಕಡತಗಳನ್ನು ಹಸ್ತಾಂತರಿಸದೆ ತಮ್ಮ ಅಧೀನದಲ್ಲಿ ಉಳಿಸಿಕೊಂಡಿರುತ್ತಾರೆ. ಹಾಗೂ ಕಿರಿಯ ಅಭಿಯಂತರಾದ ಶಿವಮೂರ್ತಿ ಅವರಿಗೆ ವಾರ್ಡ ನಂ. 37 ಮತ್ತು 38 ಎಲ್ಲಾ ಕಾಮಗಾರಿಗಳು ಹಸ್ತಾಂತರಿಸಬೇಕು ಎಂದು ಕಲಬುರಗಿ ಅಭಿವೃದ್ಧಿಪರ ಸಮಿತಿ ವತಿಯಿಂದ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಪಾಲಿಕೆ ಮೇಯರ್ ಯಲ್ಲಪ್ಪ ನಾಯಕೋಡಿ ಅವರಿಗೆ ಮನವಿ ಸಲ್ಲಿಸಿದರು.

ರವೀಂದ್ರ ಚವ್ಹಾಣ ಕಿರಿಯ ಅಭಿಯಂತರರು ತಮ್ಮ ಕಛೇರಿ ಆದೇಶ ಸಂ. ಮ.ನ.ಪ ಜಿಎಡಿ ಸಿಬ್ಬಂದಿ/ಎ/06/2024-25 ದಿನಾಂಕ 21-10-2024ರ ಪ್ರಕಾರ ವಲಯ ಕಚೇರಿ 2 ರಿಂದ ವಲಯ ಕಚೇರಿ 1.ಕ್ಕೆ ಕಾರ್ಯ ಹಂಚಿಕೆ ಮಾಡಲಾಗಿರುತ್ತದೆ. ಮುಂದುವರೆದು ವಾರ್ಡಗಳಲ್ಲಿ ಸಂಬAಧ ಪಟ್ಟವರಿಂದ ಪ್ರಭಾರ ವಹಿಸಿಕೊಂಡು ಕೆಲಸ ನಿರ್ವಹಿಸಲು ಆದೇಶಿಸಲಾಗಿರುತ್ತದೆ. ಆದರೆ ಸದರಿ ಇವರು ವಲಯ ಕಚೇರಿ 2 ರಿಂದ ಬಿಡುಗಡೆ ಹೊಂದುವ ಸಮಯದಲ್ಲಿ ಅವರ ಸ್ಥಾನದಲ್ಲಿ ಕಾರ್ಯ ಹಂಚಿಕೆ ಮಾಡಲಾದ ಶ್ರೀ ಶಿವಮೂರ್ತಿ ಕಿರಿಯ ಅಭಿಯಂತರರು ಅವರಿಗೆ ವಲಯ ಕಚೇರಿ 2 ರಲ್ಲಿ ತಾವು ಕೆಲಸ ನಿರ್ವಹಿಸುತ್ತಿರುವ ಕಾಮಗಾರಿಗಳ ಕಡತಗಳನ್ನು ಹಸ್ತಾಂತರಿಸದೇ ತಮ್ಮ ಅಧೀನದಲ್ಲಿಯೇ ಉಳಿಸಿಕೊಂಡು ವಲಯ ಕಚೇರಿ ಒಂದಕ್ಕೆ ಬಿಡುಗಡೆ ಹೊಂದಿರುತ್ತಾರೆ.

ವಾರ್ಡ ನಂ. 37 ಮತ್ತು 38 ಎಲ್ಲಾ ಕಾಮಗಾರಿಗಳು ಶ್ರೀ ಶಿವಮೂರ್ತಿಯವರಿಗೆ ಹಸ್ತಾಂತರಿಸಬೇಕು. ಒಂದು ವೇಳೆ ಈ ಕಾಮಗಾರಿಗಳನ್ನು ಅವರಿಗೆ ಹಸ್ತಾಂತರ ಮಾಡದಿದ್ದಲ್ಲಿ ಬಿದಿಗೆ ಇಳಿದು ಉಗ್ರವಾಗಿ ಹೋರಾಟ ಮಾಡಲಾಗುವುದು.

ಹಳೆಯ ಡೇನ್, ಫೈರಸ್ಟೇಷನ ಒಳಗಡೆಯಿಂದ ಕಂದಕಕ್ಕೆ ಬಿಟ್ಟಂತಹ ಆ ದ್ರೇನನ್ನು ಸ್ವಚ್ಛಗೊಳಿಸಬೇಕಾಗಿ ವಿನಂತಿ. ಆ ಡೇನ್ ಸ್ವಚ್ಚಗೊಳಿಸಿದನಂತರ ಹೊಸದಾಗಿ ದ್ರೇನ ಮಾಡುತ್ತಲಿದ್ದಿರಿ ಆನಂತರ ಮಾಡಬೇಕು. ಏಕೆಂದರೆ ಅಲ್ಲಿನ ಜನರಿಗೆ ದುರ್ವಾಸನೆಯಿಂದ ಡೆಂಗ್ಯೂ ಜ್ವರಕ್ಕೆ ಬಲಿಯಾಗುತ್ತಿದ್ದಾರೆ. ಈ ಕೂಡಲೆ ಈ ಕಾಮಗಾರಿ ತ್ವರಿತ ಗತಿಯಲ್ಲಿ ಮಾಡಬೇಕಾಗಿ ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಲೂಯಿಸ್ ಕೊರಿ, ಗೌರವಾಧ್ಯಕ್ಷ ಶಿವಕುಮಾರಿ ಬಾಳಿ, ನರಸಯ್ಯ ಗುತ್ತೇದಾರ, ಚಂದ್ರಶೇಖರ ಮಡಿವಾಳ, ಮಲ್ಲಿಕಾರ್ಜುನ ಸಾಗರ, ತುಕಾರಾಮ ಕೊಳ್ಳೂರ, ದೇವರಾಜ ಉಮ್ಮರ್ಗಿಕರ್, ಶಿವಲಿಂಗಯ್ಯ ಮಠಪತಿ, ರಾಜಶೇಖರ ಪಾಟೀಲ, ಅಂಬುಸಾ ಗಾಂಗಜಿ ಸೇರಿದಂತೆ ಇತರರು ಇದ್ದರು.