ಹಂಪಿ ಉತ್ಸವ ಕವಿಗೋಷ್ಠಿಗೆ ಸುವರ್ಣ ರಾಠೋಡ ಆಯ್ಕೆ
ಹಂಪಿ ಉತ್ಸವ ಕವಿಗೋಷ್ಠಿಗೆ ಸುವರ್ಣ ರಾಠೋಡ ಆಯ್ಕೆ
ಶಹಾಪುರ : ಕವಯತ್ರಿ ಹಾಗೂ ಶಿಕ್ಷಕಿ ಸುವರ್ಣ ರಾಠೋಡ ಅವರು 2026 ನೇ ಸಾಲಿನ ಮೂರು ದಿನಗಳ ಕಾಲ ಅದ್ದೂರಿಯಾಗಿ ಜರುಗುವ ಹಂಪಿ ಉತ್ಸವದ ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆ.
ಫೆಬ್ರುವರಿ 14 ರಂದು ವಿಜಯನಗರದ ಹಂಪಿಯ ವಿರುಪಾಕ್ಷೇಶ್ವರ ದೇವಸ್ಥಾನದ ವೇದಿಕೆಯಲ್ಲಿ ಹಮ್ಮಿಕೊಂಡಿರುವ ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಸ್ವಾರಚಿತ ಕವನ ವಾಚಿಸಲಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೊಸಕೇರಿ ಗ್ರಾಮದ ಸುವರ್ಣ ರಾಠೋಡ ಅವರು, ನೂರಾರು ಕವಿತೆಗಳು ರಚಿಸಿ,ಹಲವಾರು ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆಗಳಲ್ಲಿ ಸ್ವರಚಿತ ಕವನ ವಾಚಿಸಿ ಸೈ ಎನಿಸಿಕೊಂಡಿದ್ದಾರೆ.
ಇವರ ಹಲವಾರು ಕವಿತೆಗಳಲ್ಲಿ ಸಮಾಜದ ಓರೆ ಕೋರೆಗಳು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ,ಈ ನಾಡಿನ ಐತಿಹಾಸಿಕ ಸಾಹಿತಿಕ ಸಾಂಸ್ಕೃತಿಕವಾಗಿ ಇನ್ನಷ್ಟು ಬೆಳಕು ಚೆಲ್ಲುವ ರೀತಿಯಲ್ಲಿ ಕವನ ರಚಿಸಿದ್ದಾರೆ.
ಇವರ ಆಯ್ಕೆಗೆ ಜಿಲ್ಲೆಯ ಆತ್ಮೀಯ ಬಳಗ ಹಾಗೂ ಸಾಹಿತ್ತಿಕ ಹಾಗೂ ಸಾಂಸ್ಕೃತಿಕ ಬಳಗ ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
