ಶರಣರ ವಚನಗಳು ವೈಜ್ಞಾನಿಕ ಚಿಂತನೆಗಳಾಗಿವೆ.ಡಾ. ರಾಜಶೇಖರ ಮಾoಗ

ಶರಣರ ವಚನಗಳು ವೈಜ್ಞಾನಿಕ ಚಿಂತನೆಗಳಾಗಿವೆ.ಡಾ. ರಾಜಶೇಖರ ಮಾoಗ

ಶರಣರ ವಚನಗಳು ವೈಜ್ಞಾನಿಕ ಚಿಂತನೆಗಳಾಗಿವೆ.ಡಾ.ರಾಜಶೇಖರ ಮಾoಗ

     ಚಿಂಚೋಳಿ - ಹನ್ನೆರಡನೆಯ ಶತಮಾನದಲ್ಲಿ ಶರಣರು ರಚಿಸಿದ ವಚನಗಳು ವೈಜ್ಞಾನಿಕ ಚಿಂತನೆಗಳಾಗಿವೆ. ಅವುಗಳು ಸಮಾಜದಲ್ಲಿನ ಮೌಢ್ಯತೆ, ಕಂದಾಚಾರ, ಅಂಧಾನುಕರಣೆಗಳನ್ನು ವಿರೋಧಿಸುತ್ತವೆ; ಎಂದು ಕೋಡ್ಲಿಯ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯ, ಸಾಹಿತಿ, ಡಾ. ರಾಜಶೇಖರ ಮಾಂಗ ಅಭಿಪ್ರಾಯಪಟ್ಟರು. ಅವರು ಮಂಗಳವಾರ ಇಲ್ಲಿನ ಚಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಚಿಂಚೋಳಿ ತಾಲೂಕ ಘಟಕದ ವತಿಯಿಂದ ಏರ್ಪಡಿಸಿದ ಹೊಸ ವರ್ಷ 2025 ರ ಕ್ಯಾಲೆಂಡರ್ ಬಿಡುಗಡೆ, ವಿಶೇಷ ಉಪನ್ಯಾಸ ಹಾಗೂ ವಚನ ಸಂಗೀತ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತ ಮೇಲಿನಂತೆ ಅಭಿಪ್ರಾಯಪಟ್ಟರು. ನೀರ ಕಂಡಲ್ಲಿ ಮುಳುಗುವರಯ್ಯ ಮರವ ಕಂಡಲ್ಲಿ ಸುತ್ತುವರಯ್ಯ..... ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ.....ದೇವಲೋಕ ಮರ್ತ್ಯ ಲೋಕ ಬೇರಿಲ್ಲ ಕಾಣಿರೋ..... ಮುಂತಾದ ಬಸವಣ್ಣನವರ ವೈಚಾರಿಕ ವಚನಗಳನ್ನು ಉಲ್ಲೇಖಿಸಿ ಮಾತನಾಡಿದರು. ವಿದ್ಯಾರ್ಥಿಗಳು ಮೊಬೈಲ್ ಗೀಳು ಬಿಟ್ಟು, ಅಚ್ಚ ಕನ್ನಡದಲ್ಲಿರುವ ಬಸವಾದಿ ಶರಣರ ವಚನಗಳನ್ನು ಹೆಚ್ಚು ಹೆಚ್ಚು ಅಧ್ಯಯನ ಮಾಡಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಹಿರಿಯ ಉಪನ್ಯಾಸಕ ಹಣಮಂತ ಕೋರೆಯವರು ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಚಿಂಚೋಳಿ ವಲಯದ ಅಬಕಾರಿ ನಿರೀಕ್ಷಕರಾದ ಧನರಾಜ ಹಳ್ಳಿಖೇಡ, ಚಿತ್ರಕಲಾ ಶಿಕ್ಷಕ ನಾಗೇಶ್ ಬಿ ಶೀಲವಂತ, ಹೆಡ್ ಮಾಸ್ಟರ್ ಗೋಪಾಲ ಯಂಪಳ್ಳಿ, ಮುಖ್ಯ ಅತಿಥಿಗಳಾಗಿದ್ದರು. ತಾಲೂಕ ಅಧ್ಯಕ್ಷ ಬಸವರಾಜ ಐನೋಳಿ ವಾಸ್ತವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ರೇವಣಸಿದ್ದಯ್ಯ ಹಿರೇಮಠ, ಶರಣಯ್ಯಸ್ವಾಮಿ ಅಲ್ಲಾಪುರ, ಗುರುರಾಜ ಜೋಶಿ ಐನೂಲಿ ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗೌರವ ಕೋಶ್ಯಾಧ್ಯಕ್ಷ ಗಣಪತ ದೇವಕತ್ತೆ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಶ್ರೀಶೈಲ್ ನಾಗಾವಿ ನಿರೂಪಿಸಿ ವಂದಿಸಿದರು.