ಜೇವರ್ಗಿಯಲ್ಲಿ ರಾಜ್ಯಮಟ್ಟದ ಗಮಕ ಸಮ್ಮೇಳನ
ಜೇವರ್ಗಿಯಲ್ಲಿ ರಾಜ್ಯಮಟ್ಟದ ಗಮಕ ಸಮ್ಮೇಳನ
ಕಲಬುರಗಿ : ಜೇವರ್ಗಿ ಸೆಪ್ಟೆಂಬರ್ 21-22 ರಂದು ಶನಿವಾರ ಮತ್ತು ಭಾನುವಾರ ರಾಜ್ಯಮಟ್ಟದ ಗಮಕ ಸಮ್ಮೇಳನ ನಡೆಯಲಿದ್ದು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಎ ವಿ ಪ್ರಸನ್ನ ವಹಿಸಲಿದ್ದಾರೆ ಎಂದು ಜೇವರ್ಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು , ಕೋಳಕೂರ ವಲಯ ಘಟಕದ ಅಧ್ಯಕ್ಷ ಶಾಂತಲಿಂಗ ಪಾಟೀಲ ಕೋಳಕೂರ ತಿಳಿಸಿದರು.
ಸೆ.10 ರಂದು ಕಲಬುರಗಿ ನಗರದ ಪತ್ರಿಕ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು . ಅಧ್ಯಕ್ಷತೆಯನ್ನು ಶಾಸಕ ಮತ್ತು ಕಲ್ಯಾಣ ಕರ್ನಾಟಕ ಪರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯಸಿಂಗ್ ಅವರು ವಹಿಸುವರು ಎಂದರು.
ಸೆಪ್ಟೆಂಬರ್ 21ರಂದು ಜೇವರ್ಗಿಯ ಮಿನಿ ವಿಧಾನಸೌಧದಿಂದ ಕನ್ನಡ ಭವನವರೆಗೆ ಭವ್ಯ ಮೆರವಣಿಗೆ ಜರುಗಲಿದೆ. ಉದ್ಘಾಟನೆಯನ್ನು ಶಾಸಕ ಡಾ. ಅಜಯಸಿಂಗ್ ಅವರು ಮಾಡುವರು. ಸಮ್ಮೇಳನವನ್ನು ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಉದ್ಘಾಟಿಸುವರು. ದಿವ್ಯ ಸಾನಿಧ್ಯವನ್ನು ದಾಕ್ಷಾಯಣಿ ಎಸ್. ಅಪ್ಪಾ ಅವರು ವಹಿಸುವರು.
ಶ್ರೀನಿವಾಸ್ ಕುಷ್ಟಗಿ ಅವರ ಗೌರವ ಸಂಪಾದನೆದಲ್ಲಿ "ಗಮಕ ಭಿಮಾ"ಸ್ಮರಣ ಸಂಚಿಕೆಯ ರಾಜ್ಯದ ಸಣ್ಣ ಕೈಗಾರಿಕೆ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ್ ಅವರು ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡುವರು.
ಪುಸ್ತಕ ಮಳಿಗೆ ಪ್ರಾಯೋಜಕ, ಜಗದೀಶ ಗಾಜರೆ, ಮಾಡಲಿದ್ದಾರೆ.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ಮುಖಂಡ ಕೇದಾರಲಿಂಗಯ್ಯ ಹಿರೇಮಠ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೆವಾಡಗಿ ಅವರು ಜ್ಯೋತಿ ಬೆಳಗಿಸುವರು. ಅಧ್ಯಕ್ಷತೆಯನ್ನು ಮೈಸೂರು ಪರಂಪರೆ ಮುಖ್ಯಸ್ಥ ಕೃಷ್ಣಕುಮಾರ್ ಪ್ಯಾಪಲೀಕರ್ ಅವರು ವಹಿಸುವರು ಎಂದು ಅವರು ಹೇಳಿದರು
ಮುಖ್ಯ ಅತಿಥಿಗಳಾಗಿ ಶಾಲಾ ಶಿಕ್ಷಣ ಇಲಾಖೆ ಪಿಯುಸಿ ಉಪ ನಿರ್ದೇಶಕ ಶಿವಶರಣಪ್ಪ ಮೂಳೆಗಾಂವ್, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸೂರ್ಯಕಾಂತ್ ಮದಾನೆ, ಕರ್ನಾಟಕ ಗಮಕ ಕಲಾ ಪರಿಷತ್ ಕಾರ್ಯದರ್ಶಿ ಜಿ. ದಕ್ಷಿಣಾಮೂರ್ತಿ ಅವರು ಆಗಮಿಸುವರು. ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಕಡಕೋಳ್, ಬಿ.ವಿ. ಪಾಟೀಲ್ ಹಳ್ಳಿ, ಡಾ. ನಾಗಾಬಾಯಿ ಬುಳ್ಳಾ, ಶ್ರೀಮತಿ ಶೈಲಜಾ ಕೊಪ್ಪರ್, ಡಾ. ವಿಜಯಲಕ್ಷ್ಮೀ ದೇಶಮಾನೆ, ಡಾ. ಚಂದ್ರಕಲಾ ಬಿದರಿ, ಶ್ರೀಮತಿ ಕಾವ್ಯಶ್ರೀ ಮಹಾಗಾಂವಕರ್, ಗಿರಿಮಲ್ಲಪ್ಪ ಹರವಾಳ್, ಪ್ರಲ್ಹಾದ್ ಎಂ. ಮಟಮರಿ, ಅಂಬಾರಾವ್ ಮಹಾಗಾಂವಕರ್, ಬಿ. ಅಯ್ಯಣಗೌಡ ನಂದಿಹಳ್ಳಿ ಅವರಿಗೆ ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.
ಕುಮಾರವ್ಯಾಸ ಭಾರತ ಪಾಶುಪತಾಸ್ತ್ರ ಪ್ರದಾನ, ಮಂಕು ತಿಮ್ಮನ ಕಗ್ಗ, ಚಾಮರಸನ ಪ್ರಭುಲಿಂಗ ಲೀಲೆ- ಅಕ್ಕಮಹಾದೇವಿಯ ಪ್ರಸಂಗ, ಪಠ್ಯಾಧಾರಿತ ಗಮಕ ಪ್ರಾತ್ಯಕ್ಷಿಕೆ, ರನ್ನಗ ಗದಾಯುದ್ಧ, ಹರಿಶ್ವಂದ್ರ ಕಾವ್ಯ- ಪರಮೇಶ್ವರ ಸಾಕ್ಷಾತ್ಕಾರ ಮುಂತಾದ ಆರು ಗೋಷ್ಠಿಗಳು ಜರುಗಲಿವೆ ಎಂದು ಅವರು ತಿಳಿಸಿದರು.
ಸೆಪ್ಟೆಂಬರ್ 22ರಂದು ಸಂಜೆ 5ಕ್ಕೆ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ದಿವ್ಯ ಸಾನಿಧ್ಯವನ್ನು ಯಡ್ರಾಮಿಯ ಸಿದ್ದಲಿಂಗ ಮಹಾಸ್ವಾಮೀಜಿ, ಅಧ್ಯಕ್ಷತೆಯನ್ನು ರಾಜ್ಯಸಭಾ ಮಾಜಿ ಸದಸ್ಯ ಡಾ. ಬಸವರಾಜ್ ಪಾಟೀಲ್ ಸೇಡಂ ಅವರು ವಹಿಸುವರು ಎಂದು ಅವರು ಹೇಳಿದರು.
ಸಮ್ಮೇಳನದ ರೂವಾರಿಗಳಾದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್ .ಕೆ. ಬಿರಾದಾರ್ ಗೌರವಾಧ್ಯ ಅಧ್ಯಕ್ಷ, ಚನ್ನಮಲ್ಲಯ್ಯ ಹಿರೇಮಠ ,ಕಲ್ಯಾಣ ಕುಮಾರ ಸಂಗಾವಿ, ಶ್ರೀಹರಿ ಕರ್ಕಿಹಳ್ಳಿ , ಎಸ್ ಟಿ ಬಿರಾದಾರ್, ಚಂದ್ರಶೇಖರ್ ತುಂಬಿಗಿ, ಸುಭಾಷ್ ದೊಡ್ಡಮನಿ ಗುಡೂರ್, ಧರ್ಮಣ್ಣ ಬಡಿಗೇರ್
ವಹಿಸುವರು.ಎಂದು ಹೇಳಿದರು .ಸುದ್ದಿಗೋಷ್ಟಿಯಲ್ಲಿ ಎ.ವಿ. ಬಿರಾದಾರ್ ,ಪ್ರಹ್ಲಾದ್ ಮಠಮಾರೆ, ಪ್ರಕಾಶ್ ಕುಲಾರೆ, ಭೀಮರೆಡ್ಡಿ, ಉಪಸ್ಥಿತರಿದ್ದರು