ಸಮಾಜದ ನ್ಯೂನತೆ ಕಾವ್ಯ ಎತ್ತಿ ಹೇಳಲಿ-ಡಾ.ದೊಡ್ಡಮನಿ

ಸಮಾಜದ ನ್ಯೂನತೆ ಕಾವ್ಯ ಎತ್ತಿ  ಹೇಳಲಿ-ಡಾ.ದೊಡ್ಡಮನಿ

ಅಕಾಡೆಮಿ ಚಕೋರದಿಂದ ಭಾವೈಕ್ಯತೆ ಕವಿಗೋ಼ಷ್ಠಿ

ಸಮಾಜದ ನ್ಯೂನತೆ ಕಾವ್ಯ ಎತ್ತಿ ಹೇಳಲಿ-ಡಾ.ದೊಡ್ಡಮನಿ

ಕಲಬುರಗಿ: ಕಾವ್ಯಕ್ಕೆ ಯಶಸ್ವಿ ಆದಾಗ ಶಕ್ತಿ ತುಂಬುತ್ತದೆ.ಪ್ರೀತಿ,ಪ್ರೇಮದ ಕುರಿತು ಬರೆಯದೇ ಸಮಾಜ ಮುಖಿಯಾದ ಸಮಾಜದಲ್ಲಿ ನಡೆಯುವ ಭ್ರಷ್ಟಾಚಾರ, ಅನೀತಿಗಳ ನ್ಯೂನ್ಯತೆಗಳ ಕುರಿತು ಕವಿಗಳು ಕಾವ್ಯದಲ್ಲಿ ಎತ್ತಿ ಹೇಳಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಹನುಮಂತರಾವ ಬಿ.ದೊಡ್ಡಮನಿ ಕರೆ ನೀಡಿದರು.

      ಕೃಷ್ಣಾ ನಗರದ ವೇಣುವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಚಕೋರ ಸಾಹಿತ್ಯ ವೇದಿಕೆ ಮತ್ತು ರಾಮಪ್ಪ ಗೋನಾಲ ಸಾಹಿತ್ಯ, ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗ ದೊಂದಿಗೆ ಏರ್ಪಡಿಸಿದ ಯುಗಾದಿ-ರಂಜಾನ್ ಹಬ್ಬದ ಪ್ರಯುಕ್ತ ಏರ್ಪಡಿಸಿದ ಭಾವೈಕ್ಯತೆ ಕವಿಗೋಷ್ಠಿಯನ್ನು ಉದ್ಘಾಡಿಸಿ ಮಾತನಾಡಿ ಅವರು ಕವಿಗಳ ಅಂತರಂಗದ ಭಾವನೆಗಳನ್ನು ಅಭಿವ್ಯಕ್ತಿಸುವ ದಿಟ್ಟ ನಿಲುವು ಹೊಂದಬೇ ಕು ವಿಮರ್ಶೆ ಮುಖ ನೋಡಿ ಮಾಡಬಾರದು.ವಿಶ್ವವಿದ್ಯಾ ಲಯದ ಪ್ರಾಧ್ಯಾಪಕರು, ಪಿಎಚ್. ಡಿಗಳು ದುಸ್ಥಿಗೆ ಬಂದಿ ವೆ ಎಂದು ಕಳವಳ ವ್ಯಕ್ತಪಡಿಸಿದರು.

       ಸಾಹಿತಿ ಡಾ ಸದಾನಂದ ಪೆರ್ಲ ಮಾತನಾಡಿದ ಅವರು

ಸಾಹಿತಿಗಳ ಬರಹ ಹಾದಿ ತಪ್ಪಿವೆ.ಒಂದು ಸಮುದಾಯ ಓಲೈಕೈಗಾಗಿ ಜಾತಿ,ಮತ,ಧರ್ಮಗಳ ಹೆಸರಲ್ಲಿ ಅಧಃಪತನ ನಡೆಯುತ್ತಿದೆ,ಇದು ತಪ್ಪಿ ಭಾವೈಕ್ಯತೆ, ಸಮನ್ವಯತೆ ಹೊಂದುವ ನಮ್ಮ ಪರಂಪರೆ ಅರಿಯಲು ವಿಶಾಲ ದೃಷ್ಟಿ ಹೊಂದುವುದಿಲ್ಲವೇಕೆ ಎಂದು ಸಾಹಿತಿಗಳನ್ನು ಪ್ರಶ್ನಿಸಿದರು.

    ‌‌‌ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿದ್ಧರಾಮ ಹೊನ್ಕಲ್ ಮಾತನಾಡಿ ಜನರ ನೋವಿಗೆ ಮಿಡಿಯುವ‌ಬಪ್ರಾಣ ಮಿತ್ರ ದಂತೆ ಕವಿಗಳು ಕೆಲಸ ಮಾಡಬೇಕೆಂದರು.

ವಿವಿಧ ಕ್ಷೇತ್ರದ ಸಾಧಕರಾದ ಡಾ.ಬಸವರಾಜ ಕೊನೇಕ್, ಡಾ.ಜಯದೇವಿ ಗಾಯಕವಾಡ,ಈಶ್ವರಪ್ಪ ಕಟ್ಟಿಮನಿ,ಡಾ.ಚಂದ್ರಕಲಾ ಬಿದರಿ, ಡಾ.ಸಿದ್ಧರಾಮ ಹೊನ್ಕಲ್, ಅವರನ್ನು ರಾಮಪ್ಪ ಗೋನಾಲ ಪ್ರತಿಷ್ಠಾನ ದಿಂದ ಸನ್ಮಾನಿಸಲಾಯಿತು.

                     ಕಾವ್ಯಗಳು ಸಮಕಾಲೀನ ಸಮಸ್ಯೆಗಳಿಗೆ ಮುಖಾಮುಖಿಯಾಗಬೇಕು. ಕವಿಯಾದವನು ತನ್ನ ಸುತ್ತಲಿನ ಜನರೊಂದಿಗೆ ಬೆರೆತ ಜೀವನಕ್ರಮಗಳನ್ನು ತನ್ನ ಕಾವ್ಯದಲ್ಲಿ ಅಡಕಗೊಳಿಸುತ್ತಾನೆ. ಕವಿ ಇಲ್ಲವಾದರೂ ಅವನ ಕಾವ್ಯವು ತಲೆತಲಾಂತರ ಉಳಿದುಕೊಳ್ಳುತ್ತದೆ. ಪಂಪ ಇಂದಿಗೂ ನೆನಪಿಗೆ ಉಳಿದಿರುವುದು ಅವನ ಕಾವ್ಯದ ಮೂಲಕನೆ. ಅಂದು ಕಾವ್ಯವು ಕೆಲವೇ ಕೆಲವು ಜನರು ರಚಿಸಿ ಕೆಲವೇ ಜನರ ಮಧ್ಯ ವಾಚಿಸಲಾಗುತ್ತಿತ್ತು ಆದರ ಇಂದು ಜನಸಾಮಾನ್ಯರು ಕಾವ್ಯ ರಚಿಸುತ್ತಿದ್ದಾರೆ. ಏನು ಓದು ಬರಹ ಬಾರದ ಜನರು ಸಹ ಕಾವ್ಯ ವಾಚನ ಕೇಳಬಹುದಾಗಿದೆ. ಆದರೆ ಜನರು ಕಾವ್ಯ ಕೇಳಲು ಬಾರದಿರುವುದು ಬೇಸರದ ಸಂಗತಿಯಾಗಿದೆ. ಇಂದು ಸುಮಾರು ೩೦ ಗಿಂತಲೂ ಹೆಚ್ಚು ಕವಿಗಳು ಸಮಾನತೆ, ಸೌಹಾರ್ದತೆ, ಭಾವೈಕ್ಯತೆ, ಮಹಿಳಾ ಪರವಾದ ಚಿಂತನೆಗಳ ಕುರಿತು ಕಾವ್ಯ ವಾಚಿಸಿರುವುದು ಸಂತೋಷದ ವಿಷಯವಾಗಿದೆ ಎಂದು ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಲಿಂಗಪ್ಪ ಗೋನಾಲ ಅಧ್ಯಕ್ಷೀಯ ನುಡಿ ಆಡಿದರು.

              ಕವಿಗೋಷ್ಠಿಯಲ್ಲಿ ಡಾ.ಶೀಲಾದೇವಿ ಬಿರಾದಾರ,ಡಾ.ದೇವೇಂದ್ರಪ್ಪ ಕಟ್ಡಿಮನಿ,ಉಷಾ ಗಬ್ಬೂರು,ಸಿದ್ಧರಾಮ ಸರಸಂಬಿ,ರೇಣುಕಾಬೆಸ್.ಎಚ್.

ಡಾ.ಸುನೀತಾ ಮಾಳಗೆ,ಡಾ.ನಾಗಪಗಪ ಗೋಗಿ,ಪ್ರಿಯಾಂಕ ಮಾವಿನ,ಭೀಮರಾವ್ ಹೇಮನೂರು, ರಮೇಶ ಯಾಳಗಿ,ಮಮತಾ ಜಾನೆ,ಡಾ.ಅವಿನಾಶ ದೇವನೂರು, ರೇಣುಕಾ ಹೆಳವರ,ಡಾ.ರಾಜಶೇಖರ ಮಾಂಗ್,ಡಾ.ಸುಖದೇವಿ ಘಂಟಿ, ಡಾ.ಕಪಿಲ್ ಚಕ್ರವರ್ತಿ, ಸುಹಾಸಿನಿ.ಜಿ.ಸಾಕ್ಷಿ ಜಿ.,ವಿಕಾಶ್ ಹಿರೇಮಠ, ಅನಸೂಯಾ ಬಾಯಿ ನಾಗನಳ್ಳಿ,ಸಿ.ಎಸ್.ಮಾಲಿಪಾಟೀಲ ಸಂತೋಷಕುಮಾರ ಕರಹರಿ,ಬಸಮ್ಮ ಸಜ್ಜನ,ಸುರೇಶ ಹೇರೂರು,ವೆಂಕಟೇಶ ಕೆ.ಜನಾದ್ರಿ, ಹಿರಗಪ್ಪ ಬರಗಾಲಿ, ದೇವರಾಜ ಭಂಡಾರಿ ಇತರರು ಕವನ ವಾಚಿಸಿ ರಂಜಿಸಿದರು.

              ಪ್ರಾರ್ಥನೆಯನ್ನು ಸಿಯುಕೆ ಸಂಗೀತ ವಿಭಾಗದ ಡಾ.ಸ್ವಪ್ನಿಲ್ ಚಂದ್ರಕಾಂತ ಚಾಫೆಕರ್ ನಡೆಸಿದರು

ಸ್ವಾಗತ ಪ್ರಸ್ತಾವಿಕ ನುಡಿಯನ್ನು ಕರ್ನಾಟಕ ಸಾಹಿತ್ಯ ಅಕಾ ಡೆಮಿ ಸದಸ್ಯರಾದ ಡಾ.ಚಂದ್ರಕಲಾ ಬಿದರಿ ಆಡಿದರು. ಚಕೋರ ವೇದಿಕೆ ಸಂಚಾಲಕ ಡಾ.ಗವಿಸಿದ್ಧಪ್ಪ ಪಾಟೀಲ ಮತ್ತು ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು. ಡಿ.ಪಿ ಸಜಗಜನ ವಂದಿಸಿದರು.

ವರದಿ ಡಾ. ಅವಿನಾಶ್ s ದೇವನೂರ.ಆಳಂದ