ಕರ್ನಾಟಕ ರಾಜ್ಯ ಬರಹಗಾರ ಸಂಘದ ಜಿಲ್ಲಾ ಘಟಕ ಉದ್ಘಾಟನೆ- ಜಿಲ್ಲಾ ಮಟ್ಟದ ಕವಿಗೋಷ್ಠಿ

ಕರ್ನಾಟಕ ರಾಜ್ಯ ಬರಹಗಾರ ಸಂಘದ ಜಿಲ್ಲಾ ಘಟಕ ಉದ್ಘಾಟನೆ- ಜಿಲ್ಲಾ ಮಟ್ಟದ ಕವಿಗೋಷ್ಠಿ

ಕರ್ನಾಟಕ ರಾಜ್ಯ ಬರಹಗಾರ ಸಂಘದ ಜಿಲ್ಲಾ ಘಟಕ ಉದ್ಘಾಟನೆ- ಜಿಲ್ಲಾ ಮಟ್ಟದ ಕವಿಗೋಷ್ಠಿ

ಸಮಾಜ ಜಾಗೃತಿಗೆ ಕಾವ್ಯ ರಚನೆ ಅಗತ್ಯ-ಡಾ.ಗವಿಸಿದ್ಧಪ್ಪ

ಹುಮನಾಬಾದ:ಸಮಾಜ ಜಾಗೃತಿಗಾಗಿ ಕಾವ್ಯ ರಚನೆ ಅಗತ್ಯ.ನಮ್ಮ ಕಾವ್ಯ ಪರಂಪರೆಗೆ ಬುದ್ಧ,ಬಸವ,ಅಂ ಬೇಡ್ಕರ್ ತತ್ತ್ವ ಸಿದ್ದಾಂತಗಳನ್ನು ಕಾವ್ಯದಲ್ಲಿ ತಂದರೆ ಸಾಮಾಜದ ಏಳ್ಗೆಗೆ ಕವಿ ಕಾವ್ಯ ರಚಿಸಬೇಕೆಂದು ಕಲಬುರಗಿ ಹಿರಿಯ ಸಾಹಿತಿ ಡಾ.ಗವಿಸಿದ್ಧಪ್ಪ ಎಚ್.ಪಾ ಟೀಲ ಅಭಿಮತ ವ್ಯಕ್ತಪಡಿಸಿದರು.

     ಪಟ್ಟಣದ ಮಾತೋಶ್ರೀ ಪ್ಯಾರಾಮೆಡಿಕಲ್ ಅಲೈಡ್ ಹೆಲ್ತ್ ಸೈನ್ಸ್‌ ಕಾಲೇಜಿನಲ್ಲಿ ಜರುಗಿದ ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿಯ ಜಿಲ್ಲಾ ಘಟಕ ಮತ್ತು ತಾಲೂಕು ಘಟಕ,ಹಾಗೂ ಬೀದರ ಜಿಲ್ಲಾ ಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ನಾಡು,ನುಡಿ,ಭಾಷೆ, ಸಾಹಿತ್ಯ, ನೆಲ,ಜ ಲ,ಸಂಸ್ಕೃತಿ ಉಳಿಸುವಿಕಾಗಿ ಕರ್ನಾಟಕ ನಾಮಕರಣ ವಾಯಿತು.೧೯೫೬ರಲ್ಲಿ ಮೈಸೂರು ರಾಜ್ಯ,೧೯೬೩ ರ ನವೆಂಬರ್ ೧ ರಂದು ವಿಶಾಲ ಕರ್ನಾಟಕ ದೇವರಾಜ ಅರಸು ನಾಮಕರಣ ಮಾಡಿದರು.ಅಂದಿನಿಂದ ಇಂದಿನ ವರೆಗೂ ನಿರಂತರ ಭಾಷೆ ಉಳಿಸಿಬೆಳೆಸಿಕೊಂಡು ಬಂದಿ ದೆ.ಸಂಘಗಳು ಅನೇಕವಾದರೂ ಮಾಡುವ ಕೆಲಸ ಕನ್ನ ಡ ವಾಗಿರಬೇಕಾಗಿದೆ ಎಂದರು.

  ‌‌‌‌ಕವಿ ಗೋಷ್ಠಿಯಲ್ಲಿ ಕಾವ್ಯ ವಾಚಿಸಿದವರು.ಬಂಕಲಗಿ,ಶ್ರವಣಕುಮಾರ,ಸುನೀತಾ ಪುಂಡಲೀಕ, ಲಕ್ಷ್ಮಿಕಾಂತ ಕೂಬಾಳಕರ,ಡಾ.ಸುಬ್ಬಣ್ಣ ಕರಕನಳ್ಳಿ,ರವಿದಾಸ ಕಾಂಬಳೆ,ರವಿದಾಸ,ಮೊಹಿನುದ್ದೀನ್ ಹಣಕುಣಿ,ವೀರಶೆಟ್ಟಿ ಪಾಟೀಲ, ಸಂಗಮೇಶ ಮುರ್ಕೆ, ಭಗವಾನ್,ರಮೇಶ ಸಲಗರ,ಗಣಪತಿ ಹದಿನಾಲ್ಕು ಜನ ಕವಿಗಳು ತಮ್ಮ ಕವನ ವಾಚನ ಮಾಡಿದರು.

   ‌ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಬರಹಗಾರರ ಬಳಗದ ಜಿಲ್ಲಾಧ್ಯಕ್ಷ ವಿಜಯಕುಮಾರ ಚಟ್ಟಿ ವಹಿಸಿ ಜಿ ಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪ್ರತಿ ತಿಂಗಳ ಒಂದಾದರೂ ಕಾರ್ಯಕ್ರಮ ಮಾಡಬೇಕು,ಸಾಹಿತಿ,ಕವಿ ಗಳನ್ನು ಗುರುತಿಸುವ ಜವಬ್ದಾರಿ ಇದೆ.ಮುಂದಿನ ದಿನಗಳಲ್ಲಿ ಸಾಧಕರ ಗುರುತಿಸಿ ಪ್ರಶಸ್ತಿ ನೀಡಲಾಗುವು ದು ಎಂದರು.ತಾಲೂಕಾ ಕಸಾಪ ಅಧ್ಯಕ್ಷ ಸಿದ್ದಲಿಂಗ ನಿ ರ್ಣಾ,ಸಾಹಿತಿ ಡಾ.ಬಸವರಾಜ ದಯಾಸಾಗರ,ದಸಾಪ ತಾಲೂಕಾಧ್ಯಕ್ಷ ಶಿವರಾಜ ಡಿ.ಮೇತ್ರೆ,ಕಲಾವಿದ ಡಾ.ಸಿದ್ರಾಮ ಡಿ ವಾಘಮಾರೆ,ಸಾಹಿತಿ ಶ್ರೀಕಾಂತ ಸೂಗಿ ಐ.ಎಸ್.ಶಕೀಲ್ ಮಾತನಾಡಿದರು.

  ತಾಲೂಕಾಧ್ಯಕ್ಷರಾದ ಹುಮನಾಬಾದ-ಸಿದ್ಧಾರ್ಥ ಮಿತ್ರ,ಚಿಟಗುಪ್ಪ-ಡಾ.ಸಂಗೀತಾ ಪಾಟೀಲ, ಬೀದರ- ಡಾ.ಸುನೀತಾ ಪಂಕಜ,ಕಮಲನಗರ-ಗಣಪತಿ ದಶರಥ

ಭಾಲ್ಕಿ-ಬಾಲಾಜಿ ಇವರನ್ನು ಆಯ್ಕೆಮಾಡಿ ಸನ್ಮಾನಿಸಿ ತಾಲೂಕಿನಲ್ಲಿ ಕಾರ್ಯ ನಿರ್ವಹಿಸಲು ಸೂಚಿಸಿದರು.

ವಿ.ಎಂ.ಬಂಕಲಗಿ ಪ್ರಾರ್ಥನೆ ಗೀತೆ ಹಾಡಿದರು,ಈಶ್ವರ ತಡೋಳಾ ಸ್ವಾಗತಿಸಿದರು.ಸಿದ್ದಾರ್ಥ ಮಿತ್ರ ನಿರೂಪಿಸಿ ವಂದಿಸಿದರು.