ಸಣ್ಣೂರ ತಾಂಡದಲ್ಲಿ ದೀಪಾವಳಿ ಉತ್ಸಾಹ ಆಚರಿಸಲಾಯಿತು

ಸಣ್ಣೂರ ತಾಂಡದಲ್ಲಿ ದೀಪಾವಳಿ ಉತ್ಸಾಹ ಆಚರಿಸಲಾಯಿತು

ಸಣ್ಣೂರ ತಾಂಡದಲ್ಲಿ ದೀಪಾವಳಿ ಉತ್ಸಾಹ ಆಚರಿಸಲಾಯಿತು  

ಕಲಬುರಗಿ : ಪ್ರತಿವರ್ಷದಂತೆ ದೀಪಾವಳಿ ಹಬ್ಬವನ್ನು ಅಚ್ಚುಕಟ್ಟಾಗಿ ತಾಂಡಾದ ಹಿರಿಯರು ಮಹಿಳೆಯರು ಕೂಡಿಕೊಂಡು ವಿಜೃಂಭಣೆಯಿಂದ ಆಚರಿಸಿದರು.

ದಿನಾಂಕ 01/11/2024 ರಂದು ಸಾಯಂಕಾಲದ ಸಣ್ಣೂರು ಗ್ರಾಮದ ತಾಂಡಾದಲ್ಲಿ  ಏರ್ಪಡಿಸಿದ ದೀಪಾವಳಿ ಹಬ್ಬದ ಪ್ರಯುಕ್ತ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

 ತ್ರೆತಾ ಯೂಗದಲ್ಲಿ ಪ್ರಭು ಶ್ರೀ ರಾಮ 14 ವರ್ಷಗಳ ವನವಾಸ ವನ್ನು ಕಳೆದು ಆಯೋಧ್ಯೆಗೆ ಮರಳಿ ಬಂದ ಖುಷಿಯಲ್ಲಿ ದೀಪಬೆಳಗಿ ಸ್ವಾಗತ ಮಾಡಲಾಗಿತ್ತು ಅದೇ ಪರಂಪರೆಯನ್ನು ಮುಂದುವರಿಸುವ ಮೂಲಕ ಬಂಜಾರ ಸಮಾಜದಲ್ಲಿ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ ಎಂದು ಹೇಳಲಾಗುತ್ತದೆ ಹಾಗೂ ದಿನಾಂಕ 02/11/2024 ದಂದು ಗೌಧನ ಪುಜೆ ಮಾಡುವ ಮೂಲಕ ಗೋ ಮಾತೆಯ ಸಗಣಿಯನ್ನು ಹೊಲ ಗಳಲ್ಲಿ ಸಿಗುವ ಯಲ್ಲಾರೀತಿಯ ಹೂವು ಗಳನ್ನು ತಂದು ಸಗಣಿಯನ್ನು ಅಲಂಕರಿಸುವ ಮೂಲಕ ಪೂಜೆಯನ್ನು ಮಾಡಲಾಗುತ್ತದೆ ಈ ಪರಂಪರೆಯು ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಗೋವರ್ಧನ ಪರ್ವತವನ್ನು ತನ್ನ ಚಿಕ್ಕ ಬೆರಳಿನ ಮೇಲೆ ಯತ್ತಿಕೊಳ್ಳುವ ಮೂಲಕ ತನ್ನ ಗ್ರಾಮಸ್ಥರಿಗೂ ಹಾಗೂ ಗೋವುಗಳ ರಕ್ಷಣೆ ಮಾಡಿದರು ಹಾಗೂ ಗೋ ಮಾತೆಯ ಸಗಣಿಯ ಪೂಜೆ ಮಾಡಿದರು ಈ ಪರಂಪರವನ್ನು ಮುಂದುವರಿಸುವ ಮೂಲಕ ಹಲವಾರು ರಿತಿಯ ಹುವುಗಳನ್ನು ಸಗಣಿ ಮೇಲೆ ಇಟ್ಟು ಪೂಜೆ ಮಾಡುತ್ತಾರೆ ಇದನ್ನು ಬಂಜಾರ ಸಮಾಜದಲ್ಲಿ ಗೋದಣ ಪೂಜೆ ಎಂದು ಕರೆಯಲಾಗುತ್ತದೆ

ಗ್ರಾಮ ಪಂಚಾಯತ ಸದಸ್ಯರಾದ ಭಾರತ ರಾಠೋಡ ಹಾಗೂತಾಂಡದ ನಾಯಕರು ಮತ್ತು ಕಾರಭರಿಗಳು ಶ್ರೀ ಬಾಬು ನಾಯಕ ಶ್ರೀ ಹರೀಶಚಂದ್ರ ನಾಯಕ ಶ್ರೀ ಖಿರು ನಾಯಕ ಶ್ರೀ ಮೇರು ಕರಭಾರಿ ಶ್ರೀ ಕಾಶೀನಾಥ ಕರಭಾರಿ ಶ್ರೀ ರಾಮೇಶ ಕರಭಾರಿ ತಂಡದ ಮುಖಂಡರಾದ ಶ್ರೀ ಹರಿಶ್ಚಂದ್ರ (pdo) ಶ್ರೀ ಬಲರಾಮ ಪ್ರಥಮ ದರ್ಜೆ ಗುತ್ತಿಗೆದಾರರು ಹಾಗೂ ತಾಂಡದ ಯಲ್ಲಾ ಯುವಕರು ಉಪಸ್ಥಿತರಿದ್ದರು