ಸುಸ್ಥಿರ ಆರೋಗ್ಯಕ್ಕೆ ದೇಸಿ ಆಹಾರ ಅಗತ್ಯ : ಡಾ.ಖಾದರ್ ವಲಿ
ಭಾರತೀಯ ಸಂಸ್ಕೃತಿ ಉತ್ಸವ ನಿಮಿತ್ತ ವಿಶೇಷ ಉಪನ್ಯಾಸ
ಸುಸ್ಥಿರ ಆರೋಗ್ಯಕ್ಕೆ ದೇಸಿ ಆಹಾರ ಅಗತ್ಯ : ಡಾ.ಖಾದರ್ ವಲಿ
ಸೇಡಂ :ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಸೇವನೆಯಿಂದ ಸುಸ್ಥಿರ ಆರೋಗ್ಯ ಹೊಂದಲು ಸಾಧ್ಯ ಎಂದು ಮೈಸೂರಿನ ದೇಸಿ ಆಹಾರ ತಜ್ಞ, ಪದ್ಮಶ್ರೀ ಪುರಸ್ಕೃತ ವಿಜ್ಞಾನಿ ಡಾ.ಖಾದರ್ ವಲಿ ಹೇಳಿದರು.
ಸೇಡಂನ ನೀಲಗಂಗಮ್ಮ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಕೊತ್ತಲ ಸ್ವರ್ಣ ಮತ್ತು ಭಾರತೀಯ ಸಂಸ್ಕೃತಿ ಉತ್ಸವ ನಿಮಿತ್ತ ಭಾನುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ದಲ್ಲಿ ಮಾತನಾಡಿದರು. ಭಾರತೀಯ ಮೂಲದ ಆಹಾರ ಸಿರಿ ಧಾನ್ಯಗಳನ್ನು ಮಾತ್ರ ಬಳಸಿದ ಆಹಾರ ಸೇವನೆಯಿಂದ ಅನೇಕ ರೋಗಗಳು ಬಾರದಂತೆ ತಡೆಯಲು ಸಾಧ್ಯವಿದೆ. ವೈದ್ಯಕೀಯ ವಿಜ್ಞಾನ ಸಾಕಷ್ಟು ಬೆಳೆದಿದ್ದರೂ ರೋಗ ನಿರ್ಮೂಲನೆ ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಗಳು ಹೆಚ್ಚಾದಷ್ಟು ರೋಗಗಳು ಹೆಚ್ಚಾಗುತ್ತಿವೆ. ವಿಜ್ಞಾನದಿಂದ ಆರೋಗ್ಯ ಕ್ಷೇತ್ರಕ್ಕೆ ಪ್ರಯೋಜನ ಕಡಿಮೆ. ರೋಗಕ್ಕೆ ಔಷಧ ಸೂಚಿಸುತ್ತಾರೆಯೇ ಹೊರತು ರೋಗ ಬಾರದಂತೆ ತಡೆಯುವ ವೈದ್ಯಕೀಯ ಆವಿಷ್ಕಾರ ಸಾಧ್ಯವಾಗಿಲ್ಲ. ಇದಕ್ಕೆ ಪರಿಹಾರವೆಂದರೆ ಸಿರಿಧಾನ್ಯಗಳ ಮೊರೆ ಹೋಗುವುದೊಂದೇ ದಾರಿ ಎಂದರು.
ಆಯುರ್ವೇದ ವೈದ್ಯ ಡಾ.ಗುರುರಾಜ ಜೀವಣಗಿ ಅತಿಥಿಗಳಾಗಿದ್ದರು. ಕೋಶಾಧ್ಯಕ್ಷ ಶಿವಾರೆಡ್ಡಿ ಹೂವಿನಬಾವಿ ಅಧ್ಯಕ್ಷತೆ ವಹಿಸಿದ್ದರು. ತೊಟ್ನಳ್ಳಿಯ ಶ್ರೀಮಠದ ಪೂಜ್ಯಶ್ರೀ ಡಾ.ತ್ರಿಮೂರ್ತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಪ್ರಗತಿಪರ ರೈತ ಅನಂತರೆಡ್ಡಿ ಹಾಶನಪಲ್ಲಿ, ಹದಿನೈದು ಹಳ್ಳಿಗಳ ಪ್ರಮುಖ ಭಗವಂತರಾವ ಪಾಟೀಲ ಕೊಂಕನಳ್ಳಿ ಉಪಸ್ಥಿತರಿದ್ದರು. ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಅನುರಾಧಾ ಪಾಟೀಲ ಸ್ವಾಗತಿಸಿದರು. ಸ್ವರ್ಣ ಜಯಂತಿ ಕಾರ್ಯಾಲಯ ಪ್ರಮುಖ ವಿಶ್ವನಾಥ ಕೋರಿ ಪ್ರಾಸ್ತಾವಿಕ ಮಾತನಾಡಿದರು. ಶಿವಲೀಲಾ ಜೀವಣಗಿ ಪ್ರಾರ್ಥಿಸಿದರು. ಜಗದೀಶ್ವರಿ ವಂದಿಸಿದರು. ಪ್ರಮುಖರಾದ ಸಿದ್ದಪ್ಪ ತಳ್ಳಳ್ಳಿ, ನಾಗೇಶ್ವರರಾವ ಮಾಲಿಪಾಟೀಲ,
ಪಿ. ಭೀಮರೆಡ್ಡಿ, ಸಿದ್ದಯ್ಯಸ್ವಾಮಿ ರುದ್ನೂರ, ಡಾ.ಜಗನ್ನಾಥ ತರನಳ್ಳಿ, ಪ್ರಭಾಕರ ಜೋಷಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.