ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಕರೆ
ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಕರೆ
ಕಲಬುರಗಿ: ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಪಿ. ಜಿ. ಬಿಲ್ಡಿಂಗ್ ಸಭಾಂಗಣದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ), (ನ್ಯಾಕ್ ನಿಂದ ಬಿ+ ಶ್ರೇಣಿ ಮರು ಮಾನ್ಯತೆ ಪಡೆದಿದೆ), 2025-26 ನೇಯ ಶೈಕ್ಷಣಿಕ ಸಾಲಿನ ವಿವಿಧ ಘಟಕಗಳಾದ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್., ಎನ್. ಸಿ. ಸಿ., ರೆಡ್ ಕ್ರಾಸ್, ರೆಡ್ ರಿಬ್ಬನ್, ಸೌಟ್ಸ್ ಮತ್ತು ಗೈಡ್ಸ್, ಡಾ. ಬಿ. ಆರ್. ಅಂಬೇಡ್ಕರ ವೇದಿಕೆ, ಕಾರ್ಯಚಟುವಟಿಕೆಗಳ ಸಮಾರಂಭವನ್ನು ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅಲ್ಲಮಪ್ರಭು ಪಾಟೀಲ್ ಅವರು ಉದ್ಘಾಟಿಸಿ ಮಾತನಾಡುತ್ತಾ ಇವತ್ತಿನ ವಿದ್ಯಾರ್ಥಿಗಳುಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಒಂದು ಸಮಯದಲ್ಲಿ ಹೆಣ್ಣು ಮಕ್ಕಳೆಂದರೆ ಕೇವಲ ಅಡುಗೆ ಮನೆಗೆ ಸೀಮಿತವನ್ನಾಗಿ ಮಾಡಲಾಗಿತ್ತು ಆದರೆ ಸ್ವಾತಂತ್ರ‍್ಯ ನಂತರ ಡಾ.ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಿದರು. ಹಾಗಾಗಿ ಇಂದು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ವಿಕಾಸಗೊಳಿಸಲು ಸಂವಿಧಾನದತ್ತವಾಗಿ ನಮಗೆ ಅವಕಾಶಗಳು ದೊರೆತಿವೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಪ್ರೊ ಶಿವಶರಣ ಗೊಳ್ಳೆ, ಮಹಾನಗರ ಪಾಲಿಕೆಯ ವಲಯ ಒಂದರ ಆಯುಕ್ತ ಗೌತಮ್ ಕಾಂಬಳೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಸವಿತಾ ತಿವಾರಿ ಅವರು ವಹಿಸಿದ್ದರು. ಕಾರ್ಯಕ್ರಮವನ್ನು ಡಾ. ಬಲ ಭೀಮ ಸಾಂಗ್ಲಿಯವರು ನಿರ್ವಹಿಸಿದರು. ಡಾ.ಟಿ.ವ್ಹಿ ಅಡಿವೇಶ, ಡಾ. ಮಲ್ಲೇಶಪ್ಪ ಎಸ್.ಕುಂಬಾರ, ಡಾ.ವಿಜಯಕುಮಾರ ಸಾಲಿಮನಿ, ಡಾ.ರಾಜಕುಮಾರ ಸಲಗರ, ಡಾ. ದೌಲಪ್ಪ ಬಿ.ಹೆಚ್, ಡಾ.ರಾಜಶೇಖರ ಮಡಿವಾಳ, ಅಜಯಸಿಂಗ್ ತಿವಾರಿ, ಡಾ.ಶ್ರೀಮಂತ ಹೋಳಕರ, ವಿಜಯಲಕ್ಷ್ಮಿ ಶಿವಾನಂದ ಸ್ವಾಮಿ ಸೇರಿದಂತೆ ಎಲ್ಲಾ ಘಟಕಗಳ ಸಂಯೋಜಕರು, ವಿದ್ಯಾರ್ಥಿಗಳು, ಕಾಲೇಜಿನ ಸಿಬ್ಬಂದಿಗಳು ಇದ್ದರು. ಡಾ.ರವೀಂದ್ರಕುಮಾರ ಭಂಡಾರಿ ಅವರು ಸ್ವಾಗತಿಸಿದರು. ಕಾರ್ಯಕ್ರಮವನ್ನು ಡಾ. ಬಸಂತ ಸಾಗರ ಅವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.
