ಯುವ ಸಮೂಹ ದುಶ್ಚಟಕ್ಕೆ ಬಲಿ - ಶಿಣ್ಣೂರ ಕಳವಳ

ಯುವ ಸಮೂಹ ದುಶ್ಚಟಕ್ಕೆ ಬಲಿ - ಶಿಣ್ಣೂರ ಕಳವಳ

 ಯುವ ಸಮೂಹ ದುಶ್ಚಟಕ್ಕೆ ಬಲಿ - ಶಿಣ್ಣೂರ ಕಳವಳ

 ಶಹಾಪುರ (ಗ್ರಾ) : ನಗರೀಕರಣ,ಉದಾರೀಕರಣ, ಪಾಶ್ಚಾತೀಕರಣದಿಂದ ದಿನೇ ದಿನೇ ವಿಶ್ವದಲ್ಲಿ ದುಶ್ಚಟಗಳ ಅವಿಷ್ಕಾರವು ಬೆಳೆಯುತ್ತಿದೆ,ಹೊಸ ಹೊಸ ರೂಪಗಳಲ್ಲಿ ಯುವ ಸಮೂಹ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ ಎಂದು ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ ಶಿಣ್ಣೂರ ಕಳವಳ ವ್ಯಕ್ತಪಡಿಸಿ ಮಾತನಾಡಿದರು.

ತಾಲೂಕಿನ ದೋರನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಬಿ.ಸಿ. ಟ್ರಸ್ಟ್ ವತಿಯಿಂದ ಆಯೋಜಿಸಿದ,ಸ್ವಾಸ್ಥ್ಯ

ಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಇರುವಂತೆ ಕಿವಿಮಾತು ಹೇಳಿದರು.

ಮದ್ಯಪಾನ,ಧೂಮಪಾನ,ಗುಟ್ಕಾ ಸೇವನೆಯಿಂದ ಮಾರಕ ರೋಗಗಳಿಗೆ ತುತ್ತಾಗುವ ಸಂಭವವಿರುತ್ತದೆ,ನಿಮ್ಮ ತಂದೆ ತಾಯಿ ನಿಮ್ಮ ಮೇಲೆ ವಿಶ್ವಾಸ, ನಂಬಿಕೆ ಇಟ್ಟು ಕನಸು ಕಟ್ಟಿಕೊಂಡಿರುತ್ತಾರೆ,ಅವರ ಕನಸು ನನಸು ಮಾಡಬೇಕಾದರೆ ನೀವು ಸತತ ಪರಿಶ್ರಮದಿಂದ ಅಧ್ಯಯನ ಮಾಡಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದು ಸಲಹೆ ನೀಡಿದರು.

ಶಾಲೆಯ ಮುಖ್ಯ ಗುರುಗಳಾದ ಪರಿಮಳ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಈ ಸಮಾರಂಭದ ವೇದಿಕೆಯ ಮೇಲೆ ಶಿಕ್ಷಕರಾದ ಭೀಮಣ್ಣ,ಕನಕದಾಸ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ತಿಪ್ಪಣ್ಣ ಕ್ಯಾತನಾಳ ಉಪಸ್ಥಿತರಿದ್ದರು,ಕಾರ್ಯಕ್ರಮದ ಕೊನೆಯ ಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಪ್ರತಿಜ್ಞೆ ಬೋಧಿಸಲಾಯಿತು ವಲಯ ಮೇಲ್ವಿಚಾರಕ ಭೀಸಯ್ಯ ಪ್ರಾಸ್ತವಿಕ ಮಾತುಗಳನಾಡಿ ಶ್ರೀ ಧರ್ಮಸ್ಥಳ ಮಂಜುನಾಥ ಟ್ರಸ್ಟ್ ವತಿಯಿಂದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು,ಕೃಷಿ ಮೇಲ್ವಿಚಾರಕ ಮಹಾಲಿಂಗ ನಿರೂಪಿಸಿ,ಸ್ವಾಗತಿಸಿ,ವಂದಿಸಿದರು.