ನಿಯಮ ಬಾಹಿರ ಸ್ಥಳ ನಿಯುಕ್ತಿ ಹಿಂಪಡೆಯಲು : ರಮೇಶ ಸಂಗಾ ಮನವಿ
ನಿಯಮ ಬಾಹಿರ ಸ್ಥಳ ನಿಯುಕ್ತಿ ಹಿಂಪಡೆಯಲು : ರಮೇಶ ಸಂಗಾ ಮನವಿ
ಬೆಂಗಳೂರು : ಸಚಿವಾಲಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಹುದ್ದೆಗೆ ಸಚಿವಾಲಯದ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಮೀರಿ ಓರ್ವ IAS ಅಧಿಕಾರಿಯನ್ನು ಸ್ಥಳ ನಿಯುಕ್ತಿಗೊಳಿಸಿರುವುದನ್ನು ಕೂಡಲೇ ಹಿಂಪಡೆದು, ಸಚಿವಾಲಯ ಸೇವೆಯ ಅಧೀನ ಕಾರ್ಯದರ್ಶಿಯನ್ನು ಸದರಿ ಹುದ್ದೆಗೆ ನೇಮಿಸಬೇಕೆಂದು ಮಾನ್ಯ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಯವರಾದ ಶ್ರೀಮತಿ ಸತ್ಯವತಿ ಜಿ. ಮೇಡಂ ಅವರನ್ನು ಸಂಘದ ಅಧ್ಯಕ್ಷರಾದ ಶ್ರೀ ರಮೇಶ್ ಸಂಗಾ ಅವರ ನೇತತ್ವದಲ್ಲಿ ಪದಾಧಿಕಾರಿಗಳು ಭೇಟಿ ಮಾಡಿ ಮನವಿ ಮಾಡಲಿದ್ದಾರೆ.
ಸಚಿವಾಲಯದ ವೃಂದ ಮತ್ತು ನೇಮಕಾತಿ ನಿಯಮಗಳ ಅಸ್ಪದಗಳ ಬಗ್ಗೆ ಕೂಲಂಕಷವಾಗಿ ಸದರಿಯವರಿಗೆ ವಿವರಿಸಿ, ಕೂಡಲೇ ನಿಯಮಬಾಹಿರವಾದ ಹಾಗೂ ಸಚಿವಾಲಯದ ಆಡಳಿತ ವ್ಯವಸ್ಥೆಗೆ ಮಾರಕವಾದ ಈ ಕ್ರಮವನ್ನು ಕೈಬಿಡಬೇಕೆಂದು ಆಗ್ರಹಿಸಿದರು .
ನಂತರ, ಸಿ.ಆ.ಸಿ.ಇಲಾಖೆಗೆ ಮಾನ್ಯ ಮುಖ್ಯ ಮಂತ್ರಿಯವರ ಕಚೇರಿಯಿಂದ ಈ ಬಗ್ಗೆ ಆದೇಶವಾಗಬೇಕೆಂದು ಏಕಾಏಕಿ ಸೂಚನೆ ಇದ್ದುದ್ದರಿಂದ ಸದರಿ ಹುದ್ದೆಗೆ IAS ಅಧಿಕಾರಿಯನ್ನು ನೇಮಿಸಲಾದ ಬಗ್ಗೆ ಮಾಹಿತಿ ನೀಡಿದರು.
ಸದರಿ ನೇಮಕವು ನಿಯಮಬಾಹಿರವಾಗಿರುವುದರಿಂದ ಸಚಿವಾಲಯದ ಎಲ್ಲಾ ಅಧಿಕಾರಿ ನೌಕರರು ಅಸಮಾಧಾನ ಗೊಂಡರು, ಈ ವಿಷಯ ಕುರಿತು ಸಂಘವು ಕ್ರಮವನ್ನು ತೀವ್ರವಾಗಿ ವಿರೋಧಿಸುತ್ತದೆ ಎಂದು ಕಾರ್ಯದರ್ಶಿಯವರಿಗೆ ಮನವರಿಕೆ ಮಾಡಿಕೊಟ್ಟರು.
ನಂತರ, ಸಿ.ಆ.ಸು.ಇ.ಯ ಉಪ ಕಾರ್ಯದರ್ಶಿಯವರಾದ ಶ್ರೀ ಉಕೇಶ್ ಕುಮಾರ್ ಅವರು ಆದಷ್ಟು ಶೀಘ್ರದಲ್ಲೇ ಈ ಆದೇಶವನ್ನು ಹಿಂಪಡೆಯುವುದಾಗಿ ಭರವಸೆ ನೀಡಿದರು.
ಸಚಿವಾಲಯದ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ 6 ಜನ ಕೆ.ಎ.ಎಸ್. ಅಧಿಕಾರಿಗಳಿಗಿಂತ ಹೆಚ್ಚು ಜನ KAS ಅಧಿಕಾರಿಗಳು ಸಚಿವಾಲಯದ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸದಂತೆ ತಡೆಯಲು ಸಂಘವು ಯಶಸ್ವಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದರು.
ಹಾಗೆಯೇ, ಸದರಿ ನೇಮಕಾತಿಯನ್ನು ಹಿಂಪಡೆಯುವಂತೆ ಸಂಬಂಧಪಟ್ಟವರ ಮೇಲೆ ಒತ್ತಡ ಹೇರಲು ನಮ್ಮ ಸಂಘವು ಬದ್ಧವಾಗಿದ್ದು, ಖಂಡಿತವಾಗಿ ಇದರಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂಬ ಭರವಸೆ ಇದೆ ಎಂದರು.
ಮಾನ್ಯ ಕಾರ್ಯದಶಿಯವರು ಕೂಡ ಆಗ್ರಹಕ್ಕೆ ಮನ್ನಣೆ ಸೂಚಿಸಿದ್ದು, ಶೀಘ್ರದಲ್ಲೇ ಸದರಿ ಅಧಿಕಾರಿಯ ನೇಮಕದ ಆದೇಶವನ್ನು ಸಿ.ಆ.ಸುಇಲಾಖೆಯು ಹಿಂಪಡೆಯಲಿದೆ. ಎಂದು ತಿಳಿಸಿದರು.
ಸಚಿವಾಲಯದ ಅಧಿಕಾರಿ/ನೌಕರರು ಈ ಕುರಿತು ಆತಂಕಕ್ಕೆ ಒಳಗಾಗಬಾರದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.
ಚೇತನ್ ಆರ್,ಜಂಟಿ ಕಾರ್ಯದರ್ಶಿ,ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ ಪದಾಧಿಕಾರಿಗಳು ಇದ್ದರು.