ಸಾಧನಾ ರಂಜೊಳಕರ , ಸಾಹಿತಿ
ಸಾಧನಾ ರಂಜೊಳಕರ
ಸಾಧನೆ ಪಥದಲ್ಲಿ ಸಾಗುತ್ತಿರುವ ಸಾಧಕಿ ಸಾಧನ ರಂಜೊಳಕರ, ರ್ಮೂಲತಃ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನೂಲಿ ಗ್ರಾಮದ ,ಐನುಳಿಕರ ಮನೆತನದವರು . ಸಾಧನರವರು ತಂದೆ ಶ್ಯಾಮರಾವ, ತಾಯಿ ಶಾಂತಾಬಾಯಿ ದಂಪತಿಗಳ ಮಗಳಾಗಿ ದಿನಾಂಕ 24.4.1959.ಜನಸಿರುವರು.
ಶ್ರೀಮತಿ ಸಾಧನಾರವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಕಲ್ಬುರ್ಗಿ,ಆಳಂದ,ಶಹಾಬಾದ್, ಕುಷ್ಟಗಿಯಲ್ಲಿ ಓದಿ, ಪಿ. ಯು. ಸಿ.ಯು ಬಸವಕಲ್ಯಾಣದ ಶಿಕ್ಷಣ ಖೂಬಾ ಕಾಲೇಜುನಲ್ಲಿ, ಪದವಿ ಶಿಕ್ಷಣ ಭೋಮರೆಡ್ಡಿ ಕಾಲೇಜು ಬಿದರನಲ್ಲಿ ಬಿ. ಎ. ಬಿಎಡ್. ಪದವಿ ಪೂರ್ಣಗೊಳಿಸಿದರು.
ಸಾಧನರವರು ತಮ್ಮ ಸೋದರಮಾವನವರಾದ ಅನಂತರಾವರವರನ್ನು ಜೊತೆ ಮದುವೆ ಮಾಡಿಕೊಂಡರು.
ಇವರಿಗೆ ಶಾಂತಲಾ, ಶಿಲ್ಪಾ ಇಬ್ಬರು ಹೆಣ್ಣುಮಕ್ಕಳು ಮತ್ತು ಅಂಬಾದಾಸ(ಶುಭಂ) ಎಂ. ಬಿ. ಬಿ. ಎಸ್. ಓದುತ್ತಿದ್ದಾರೆ.
ಶ್ರೀಮತಿ ಸಾಧನರವರು ಕವನ, ಚುಟುಕು, ಲೇಖನ, ಬರೆಯುವದನ್ನು ಹವ್ಯಾಸವಾಗಿ ಸೇರಿಕೊಂಡು ಅನೇಕ ಲೇಖನಗಳು, ಕಾದಂಬರಿ ಕವನ ಸಂಕಲನಗಳು ಕ ಪ್ರಕಟಣೆಗೊಂಡಿವೆ .
ಕೃತಿಗಳು
ಕಥೆಯೊಳಗೊಂದು ಕಾದಂಬರಿ, ಸಿಡಿಲು, ಮುಗ್ದ,ಬೆಸುಗೆ, ಯಾವ ದುಂಬಿ,ವಾಸ್ತವ ಕಥಾ ಸಂಕಲನ ಹಾಗು ಕವನ ಸಂಕಲನಗಳು ಪ್ರಕಟಿಸಿದ್ದಾರೆ.
ಕಥೆಯೋಳಗೊಂದು_ಕಾದಂಬರಿ ಬೀದರ ಉತ್ತರ ಕರ್ನಾಟಕ ಪತ್ರಿಕೆಯಲ್ಲಿ ಧಾರವಾಹಿ ಸಂಚಿಕೆಯಾಗಿ ಪ್ರಕಟವಾಗಿದೆ .
2012 ರಲ್ಲಿ ಕಲಬುರಗಿಯ ವಿಶ್ವಕರ್ಮ ಶಿಕ್ಷಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಕಾದಂಬರಿಗೆ ದೇವಾನಂದ ಸಾಹಿತ್ಯ ಪ್ರಶಸ್ತಿ ದೊರಕಿದೆ.
ಇವರು ಸಾಹಿತ್ಯ ಸಮ್ಮೇಳನ ಕವಿಗೋಷ್ಟಿ, ಸoವಾದ ಗೋಷ್ಠಿಯಲ್ಲಿ ಭಾಗವಹಿಸಿದ್ದರು.
2017 ರ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾದರು, ಮನ್ನಳ್ಳಿಯಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು .
ಉತ್ತಮ,ಕಾದಂಬರಿಗಾರ್ತಿಪ್ರಶಸ್ತಿ,ಎಲ್ಲಾಲಿಂಗ ಪ್ರಶಸ್ತಿ, ಕಾದಂಬರಿ ಕಲಾ ರತ್ನ ಪ್ರಶಸ್ತಿ, ಮಹಾತಾಯಿ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಅನೇಕ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿ ಪ್ರಶಸ್ತಿಗಳನ್ನು ನೀಡಿವೆ
ಓಂಕಾರ ಪಾಟೀಲ
(ಕಾರ್ಯದರ್ಶಿ :-ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ.)