ಶಾಲೆಯೆಂದರ

ಶಾಲೆಯೆಂದರ

ಶಾಲೆಯೆಂದರ

ಶಾಲೆಯೆಂದರ ಹೇಗಿರಬೇಕ

ಮುದ್ದು ಮಕ್ಕಳ ನಂದನವಾಗಿರಬೇಕ

ನಕ್ಕು ನಲಿದು ಆಟ ಪಾಠ ಕಲಿತು 

ಕುಣಿ ಕುಣಿದು ಆಡುವಂತಿರಬೇಕ//

ಬುದ್ಧಿವಂತ ಮಾಸ್ತರ ಬೇಕ

ಶಿಸ್ತಿನ ಸಿಪಾಯಿ ಜೊತೆ ಇರಬೇಕ 

ತಿದ್ದಿ ತೀಡಿ ಪೆದ್ದ ಮನಸ ಹಸನ ಮಾಡಿ

ಹದಮಾಡಿ ಅಕ್ಷರ ಬೀಜ ಬಿತ್ತಬೇಕ//

ಮನೆಯಂಗಳ ಅವ್ವನ ಕಂಗಳ 

ನೆನಪಾಗದಂಗ ಇರಬೇಕ ಕೇಳ 

ಮಗ್ಗಿ ಅಂಕಿ ಅಕ್ಷರಗಳ ಸುಗ್ಗಿ 

ದಿನ ದಿನ ತೂರಿ ರಾಶಿ ಮಾಡುವಂತಿರಬೇಕ//

ಗೆಳೆಯರ ಬಳಗ ನಳನಳಿಸಬೇಕ 

ಗೆಳೆತನದಾಗ ಕೂಡಿ ನಲಿವಂತಿರಬೇಕ

ಕುಲು ಕುಲು ಸರಸದಿಂದ ಭಕುತಿಯಿಂದ 

ಸರಸತಿ ಒಲಿಸಿಕೊಂಡು ಗೆಲುವಂತಿರಬೇಕ//

ನೆಲ ಜಲದ ಬಗ್ಗೆ ಶ್ರೇಷ್ಠ ವ್ಯಕ್ತಿಗಳ ಬಗ್ಗೆ 

ಜಗದ ವಿಸ್ಮಯ ವಿಚಿತ್ರಗಳ ಬಗ್ಗೆ 

ತಿಳಿ ತಿಳಿದು ಮೆಟ್ಟಿಲು ತುಳಿಸುತ 

ಸಾಧಕರ ತಯಾರಿಸುವ ಕುಲುಮೆಯಾಗಿರಬೇಕ//

ಅಜ್ಞಾನವಳಿದು ಅರಿಕೆ ಮೂಡುವಂತಿರಬೇಕ 

ವಿಜ್ಞಾನದ ಸಸಿ ಮರವಾಗಬೇಕ

ಹೆತ್ತ ಮನೆಗೆ ಹೊತ್ತ ಭೂಮಿಗೆ ಕೀರ್ತಿ 

ಬರುವಂತ ವಿದ್ಯಾರ್ಥಿಯ ಸಿದ್ಧಪಡಿಸುವಂತಿರಬೇಕ//

ಡಾ ಅನ್ನಪೂರ್ಣ ಹಿರೇಮಠ