ಸಾಹಿತ್ಯ ಮತ್ತು ಮಾಧ್ಯಮ ಅಭಿವ್ಯಕ್ತಿಯ ಎರಡು ಧಾರೆಗಳು :ದೇವು ಪತ್ತಾರ

ಸಾಹಿತ್ಯ ಮತ್ತು ಮಾಧ್ಯಮ ಅಭಿವ್ಯಕ್ತಿಯ ಎರಡು ಧಾರೆಗಳು :ದೇವು ಪತ್ತಾರ

ಸಾಹಿತ್ಯ ಮತ್ತು ಮಾಧ್ಯಮ ಅಭಿವ್ಯಕ್ತಿಯ ಎರಡು ಧಾರೆಗಳು :ದೇವು ಪತ್ತಾರ

ಸೇಡಂ : ಅ‌ 21 ಸಮಾಜದಲ್ಲಿ ಅಡಕವಾಗಿರುವ ಪ್ರತಿಯೊಂದು ಸಂಗತಿ ಮತ್ತು ಸಂದರ್ಭಗಳಲ್ಲಿ ಕಥೆಯೊಂದು ಅಡಕವಾಗಿದ್ದು, ಅದನ್ನು ಹೆಕ್ಕಿ ತೆಗೆದು ಹೇಳುವುದು ಸಾಹಿತಿಗಳ, ಮಾಧ್ಯಮದವರ ಕೆಲಸ ಎಂದು ಬೆಂಗಳೂರಿನ ಬುಕ್ ಬ್ರಹ್ಮ ಡಿಜಿಟಲ್‌ ಮೀಡಿಯಾ ಪ್ರಧಾನ ಸಂಪಾದಕ ದೇವು ಪತ್ತಾರ ಹೇಳಿದರು.

ಸೇಡಂನ ರಾಷ್ಟ್ರಕೂಟ ಪುಸ್ತಕ ಮನೆಯ ಅಟ್ಟದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜವನ್ನು ಗ್ರಹಿಸಿ, ಅದನ್ನು ಕಥೆಯನ್ನಾಗಿಸಿ ಹೇಳುವ ಕ್ರಮವು ಸಾಹಿತ್ಯದಲ್ಲೂ ಇದೆ ಹಾಗೆಯೇ‌ ಮಾಧ್ಯಮದಲ್ಲೂ ಇದೆ. ಸತತ ಪರಿಶ್ರಮ, ಆಳವಾದ ಅಧ್ಯಯನ, ಅವಮಾನಗಳನ್ನು ಮೆಟ್ಟಿನಿಂತು, ಅಭಿವ್ಯಕ್ತಿಯನ್ನು ಸಾಧಿಸುವ ಚಾಕಚಕ್ಯತೆ ರೂಢಿಸಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.

ಜೀವನದಲ್ಲಿ ಗುರಿಯಿಟ್ಟು ಸಾಗುವುದು ಎಷ್ಟು ಮುಖ್ಯವೋ ಆ ಗುರಿತಲುಪಲು ಸಾಗುವ ಮಾರ್ಗವೂ ಅಷ್ಟೇ ಮುಖ್ಯ ಅವಸರದಲ್ಲಿ ನಿರ್ಮಾಣವಾದ ವ್ಯಕ್ತಿತ್ವ ಅಷ್ಟೇ ವೇಗವಾಗಿ ಕುಸಿಯುವ ಅಪಾಯವೂ ಇರುತ್ತದೆ. ನಿರಂತರವಾಗಿ ವ್ಯಕ್ತಿ, ವಿಷಯ, ಸಮಾಜವನ್ನು ಅವಲೋಕಿಸುತ್ತ ಇದ್ದರೆ ಮಾತ್ರ ಎರಡೂ ಕ್ಷೇತ್ರದಲ್ಲಿ ಮುಂದೆ ಬರಲು ಸಾಧ್ಯವಿದೆ ಎಂದರು.

ಸಂವಾದದ ಸಾರಥ್ಯವನ್ನು ರಾಷ್ಟ್ರಕೂಟ ಪುಸ್ತಕ ಮನೆಯ ರೂವಾರಿ ಮಹಿಪಾಲರೆಡ್ಡಿ ಮುನ್ನೂರ ವಹಿಸಿದ್ದರು. ಅಮ್ಮ ಪ್ರಶಸ್ತಿ ಸಂಚಾಲಕಿ ರತ್ನಕಲಾ ಎಂ. ಮುನ್ನೂರ್ ವಹಿಸಿದ್ದರು.

ಹಿರಿಯ ಲೇಖಕರಾದ ಲಿಂಗಾರೆಡ್ಡಿ ಶೇರಿ, ಪ್ರಭಾಕರ ಜೋಶಿ,ಪ್ರೊ.ಶೋಭಾದೇವಿ ಚೆಕ್ಕಿ, ಸಿದ್ದಪ್ಪ ತಳ್ಳಳ್ಳಿ, ತಾಲ್ಲೂಕು ಬರಹಗಾರರ ಬಳಗದ ಅಧ್ಯಕ್ಷರಾದ ರುಕ್ಮಿಣಿ ಕಾಳಗಿ, ಕಾದಂಬರಿಕಾರ್ತಿ ರೂಪಾದೇವಿ ಬಂಗಾರ, ವಿಜಯಭಾಸ್ಕರರೆಡ್ಡಿ, ತತ್ವಪದಕಾರ ಮುರುಗೆಪ್ಪ ಹಣಮನಳ್ಳಿ, ಸಿದ್ದಪ್ರಸಾದರೆಡ್ಡಿ, ಮಾಧವರೆಡ್ಡಿ, ಶಿಪ್ರಸಾದ ವಿಶ್ವಕರ್ಮ, ವೀರಭದ್ರ ಟೆಂಗಳಿ, ರವಿಕುಮಾರ್, ಶಿವಾರೆಡ್ಡಿ ಗೌಡನ ಹಳ್ಳಿ ಇತರರು ಸಂವಾದದಲ್ಲಿ ಭಾಗವಹಿಸಿದ್ದರು.