ನಾನು ಮುಂದೆನಾಗುವೆ?

ನಾನು ಮುಂದೆನಾಗುವೆ?
ನಾನು ಡಾಕ್ಟರ್ ಆಗುವೆ
ರೋಗಿಯನ್ನು ನೋಡುವೆ
ಮಾತ್ರೆ ಔಷಧಿಯನ್ನು ಕೊಡುವೆ
ನಾನು ಇಂಜಿನೀಯರ್ ಆಗುವೆ
ಪ್ಲ್ಯಾನ್ ನಕ್ಷೆಯನ್ನು ಹಾಕುವೆ
ಬಹುಮಹಡಿಯನ್ನು ಕಟ್ಟಿಸುವೆ
ನಾನು ಪೋಲಿಸ್ ಆಗುವೆ
ಕಳ್ಳರನ್ನು ಹಿಡಿಯುವೆ
ಠಾಣೆಗೆ ತಂದು ಒಪ್ಪಿಸುವೆ
ನಾನು ಕಂಡಕ್ಟರ್ ಆಗುವೆ
ಪ್ರಯಾಣಿಕರಿಗೆ ಟಿಕೆಟ್ ಕೊಡುವೆ
ಸುರಕ್ಷಿತ ಸ್ಥಳಗಳಿಗೆ ತಲುಪಿಸುವೆ
ನಾನು ಗ್ರಾಮ ಸೇವಕನಾಗುವೆ
ಬೀಜ, ಗೊಬ್ಬರ ಹಂಚುವೆ
ರೈತರಿಗೆ ಸಲಹೆ ಕೊಡುವೆ
ನಾನು ಶಿಕ್ಷಕನಾಗುವೆ
ಓದು, ಬರಹ ಕಲಿಸುವೆ
ಗುಣಾತ್ಮಕ ಶಿಕ್ಷಣ ನೀಡುವೆ
- ಸ್ವರಚಿತ ಕವನ
ಶ್ರೀ ಮಹಾಂತಯ್ಯಾ ಕೆ. ಮಠ , ಶಿಕ್ಷಕರು, ಮಕ್ಕಳ ಸಾಹಿತಿಗಳು.
GHPS- ಮಳನಿ ಕಲಬುರಗಿ (ದ.ವ)