ಮಹಾರಾಷ್ಟ್ರದ ರೈತರಿಗೆ ಬಿಜೆಪಿ ದೊಡ್ಡ ಶತ್ರುವಾಗಿದೆ: ಎ.ಐ.ಸಿ.ಸಿ. ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಮಹಾರಾಷ್ಟ್ರದ ರೈತರಿಗೆ ಬಿಜೆಪಿ ದೊಡ್ಡ ಶತ್ರುವಾಗಿದೆ: ಎ.ಐ.ಸಿ.ಸಿ. ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

 ಮಹಾರಾಷ್ಟ್ರದ ರೈತರಿಗೆ ಬಿಜೆಪಿ ದೊಡ್ಡ ಶತ್ರುವಾಗಿದೆ: ಎ.ಐ.ಸಿ.ಸಿ. ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕೇಂದ್ರದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದರೂ ರೈತರ ಪಾಲಿಗೆ ದೊಡ್ಡ ಶತ್ರೃವಾಗಿದೆ.ಬಿಜೆಪಿ   

ಅಧಿಕಾರದಿಂದ ತೆಗೆದುಹಾಕಿದ್ರೆ ಮಾತ್ರ ರೈತರಿಗೆ ಲಾಭವಾಗುತ್ತದೆ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಪ್ರತಿಪಾದಿಸಿದರು.

ಈ ವಿಷಯ ಕುರಿತು  ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಮಹಾರಾಷ್ಟ್ರದಲ್ಲಿ ರೈತರು ಆತ್ಮಹತ್ಯೆ ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರ ರಾಜ್ಯ ಭರಮುಕ್ತ ರಾಜ್ಯ ಮಾಡುವುದಾಗಿ ಹೇಳಿರುವ ಬಿಜೆಪಿಯು ಸುಳ್ಳಿನ ಕಂತೆ,20,000 ರೈತರು 20,000 ಕೋಟಿ ವಾಟರ್ ಗ್ರಿಡ್ ಭರವಸೆ ಸುಳ್ಳಾಗಿದೆ” ಬಿಜೆಪಿಯು ಮಹಾರಾಷ್ಟ್ರದ ರೈತರ ಪಾಲಿಗೆ ದೊಡ್ಡ ಶತ್ರು ಆಗಿದೆ ಎಂದು ಅವರು ಹೇಳಿದರು.

ವಿಮಾ ಕಂಪನಿಗಳಿಗೆ 8000 ಕೋಟಿ ರೂ.ಗಳು ಜಮಾ ಆಗಿರುವಾಗ ರೈತರಿಗೆ ಪರಿಹಾರ ನೀಡಲು ಬಿಜೆಪಿ ಏಕೆ ನಿರಾಕರಿಸುತ್ತಿದೆ ಎಂದು ಖರ್ಗೆ ಅವರು ವಾಗ್ದಾಳಿ ನಡೆಸಿದರು.

ರಫ್ತು ನಿಷೇಧ, ಈರುಳ್ಳಿ ಮತ್ತು ಸೋಯಾಬೀನ್ ರೈತರ ಮೇಲೆ ಹೆಚ್ಚಿನ ರಫ್ತು ಸುಂಕದ ಹೊರೆ; ಹತ್ತಿ ಮತ್ತು ಕಬ್ಬು ಉತ್ಪಾದನೆಯಲ್ಲಿ ಭಾರಿ ಕುಸಿತ, ರೈತರನ್ನು ಸಂಕಷ್ಟಕ್ಕೆ ತಳ್ಳುವ ಬಗ್ಗೆ ಅವರು ಬಿಜೆಪಿ ವಿರುದ್ಧ ಹರಿಹಾಯ್ದರು. 

ಮಹಾರಾಷ್ಟ್ರ ರಾಜ್ಯದಲ್ಲಿ ಹಾಲು ಸಹಕಾರಿ ಸಂಘಗಳು ಬಿಕ್ಕಟ್ಟಿಗೆ ಸಿಲುಕಿದ್ದು, ಸರ್ಕಾರವೇ ಒಪ್ಪಿಕೊಂಡಿದೆ ಎಂದು ಖರ್ಗೆ ಹೇಳಿದರು.